ಬಳ್ಳಾರಿ: ಜಿಲ್ಲೆಯ ಕೊಟ್ಟೂರು ತಾಲೂಕಿನ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ಕಾರ್ತೀಕೋತ್ಸವ ಸೋಮವಾರ ಸಂಜೆ ನೆರವೇರಿತು. ಶಂಕರಮೂರ್ತಿ ಸ್ವಾಮೀಜಿ ಹಾಗೂ ಶಿವಪ್ರಕಾಶ ಸ್ವಾಮೀಜಿ ಹಿರೇಮಠದ ಮುಂದೆ ದೀಪ ಬೆಳಗಿಸುವುದರೊಂದಿಗೆ ಕಾರ್ತೀಕೋತ್ಸವಕ್ಕೆ ಚಾಲನೆ ನೀಡಿದರು.
![ಕಾರ್ತೀಕೋತ್ಸವಕ್ಕೆ ಚಾಲನೆ](https://etvbharatimages.akamaized.net/etvbharat/prod-images/10040876_263_10040876_1609183492473.png)
ಕೊಟ್ಟೂರೇಶ್ವರ ಸ್ವಾಮಿಯ ಈ ಉತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಭಕ್ತರು ದೇವಸ್ಥಾನದ ಮಠದ ಮುಂಭಾಗದಲ್ಲಿ ಕೊಬ್ಬರಿಯನ್ನು ಉರಿಸಿ, ಭಕ್ತಿ ಸಮರ್ಪಿಸಿದರು. ಹಿರೇಮಠ, ಗಚ್ಚಿನಮಠ, ತೊಟ್ಟಿಲು ಮಠಗಳಲ್ಲಿಯೂ ದೀಪಗಳು ಬೆಳಗಿದವು.
ಇದನ್ನೂ ಓದಿ:2020 ಗಣಿ ಜಿಲ್ಲೆಗೆ ಸಿಹಿಗಿಂತಲೂ ಕಹಿ ಉಣಿಸಿದ್ದೇ ಹೆಚ್ಚು!
ಹರಪನಹಳ್ಳಿ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಗದಗ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು, ಬೆಳಗ್ಗೆಯಿಂದ ಸರತಿ ಸಾಲಿನಲ್ಲಿ ನಿಂತು ಸ್ವಾಮಿ ದರ್ಶನ ಪಡೆದರು.
ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಹಿನ್ನೆಲೆಯಲ್ಲಿ ಸರಳವಾಗಿ ಕಾರ್ತೀಕೋತ್ಸವ ಆಚರಿಸಲಾಯಿತು.