ETV Bharat / state

ಬಳ್ಳಾರಿಯ ಗುಗ್ಗರಹಟ್ಟಿಯಲ್ಲಿ ಕೊರೊನಾ​: 28 ದಿನಗಳ ಕಾಲ ಪ್ರತಿ ಮನೆ ಮೇಲೂ ನಿಗಾ! - bellary corona news

140 ಜನ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಗುಗ್ಗರಹಟ್ಟಿಗೆ ಭೇಟಿ ನೀಡಿ ಪ್ರತಿ ಮನೆಯಿಂದಲೂ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ಈ ಗ್ರಾಮದ ಮೇಲೆ 28 ದಿನಗಳ ಕಾಲ ನಿಗಾ ಇಡಲಾಗಿದೆ.

ಗುಗ್ಗರಹಟ್ಟಿಯಲ್ಲಿಯಲ್ಲಿ ಕೊರೊನಾ ಪಾಸಿಟಿವ್​:
ಗುಗ್ಗರಹಟ್ಟಿಯಲ್ಲಿಯಲ್ಲಿ ಕೊರೊನಾ ಪಾಸಿಟಿವ್​:
author img

By

Published : Apr 7, 2020, 10:12 PM IST

ಬಳ್ಳಾರಿ: ನಗರದ ಗುಗ್ಗರಹಟ್ಟಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣವೊಂದು ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ ಮೂಲಕ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಿದೆ.

ಮಂಗಳವಾರ ಬೆಳಗ್ಗೆಯಿಂದಲೇ 140 ಜನ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ 28 ಜನ ಆರೋಗ್ಯ ಸಿಬ್ಬಂದಿ ಮತ್ತು ಮೇಲ್ವಿಚಾರಕರ ತಂಡವು ಗುಗ್ಗರಹಟ್ಟಿ, ವೆಂಕಟಮ್ಮ ಕಾಲೋನಿ, ಕಕ್ಕರಲಾ ತೋಟ, ರಾಜಾಸಾಬ್ ಕಾಲೋನಿಗಳಲ್ಲಿ ಪ್ರತಿ ಮನೆಗೂ ಭೇಟಿ ನೀಡಿ ವಿಶ್ವ ಆರೋಗ್ಯ ಸಂಸ್ಥೆಯ ನಿಯಮಾವಳಿ ಅನುಸಾರ ಸಿದ್ಧಪಡಿಸಲಾದ ನಮೂನೆ ಭರ್ತಿ ಮಾಡಿಕೊಳ್ಳಲಾಗುತ್ತಿದೆ.

ಏ. 8ರಿಂದ ಪ್ರತಿ ಮನೆ ಮನೆಗೆ ಈ ತಂಡಗಳು ಭೇಟಿ ನೀಡಿ ಆ ಮನೆಯಲ್ಲಿ ಈಗಾಗಲೇ ತಿಳಿಸಿದಷ್ಟು ಜನರಿದ್ದಾರೆಯೇ ಅಥವಾ ಹೆಚ್ಚಿಗೆ ಇದ್ದಾರೆಯೇ ಅಥವಾ ಹೊಸದಾಗಿ ಯಾರಾದರೂ ಬಂದಿದ್ದಾರೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ.

ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 8ರಿಂದ 10ರವರೆಗೆ ಸಮಯ ನಿಗದಿಪಡಿಸಲಾಗಿದೆ. ನ್ಯಾಯಬೆಲೆ ಅಂಗಡಿ ಮೂಲಕ ಪಡಿತರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ತರಕಾರಿ ಕೂಡ ಆಯಾ ಬಡಾವಣೆಗಳಲ್ಲಿಯೇ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.