ಹೊಸಪೇಟೆ: ಹಂಪಿ ರಸ್ತೆಯ ಅನಂತಶನಯನ ದೇವಸ್ಥಾನದ ಸಪ್ತಾಂಜನೇಯದಿಂದ ಸಾಯಿಬಾಬ ದೇವಸಸ್ಥಾನದವರೆಗೆ ರಸ್ತೆಯಲ್ಲಿ ಸ್ಪೀಡ್ ಬ್ರೇಕರ್ಗಳನ್ನು ಹಾಕಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ 7ನೇ ವಾರ್ಡ್ ನಲ್ಲಿ ಬರುವ ಹಂಪಿ ರಸ್ತೆಯಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಿರುತ್ತದೆ. ವಾಹನಗಳು ಅತೀ ವೇಗವಾಗಿ ಓಡಾಡುತ್ತವೆ. ಇದರಿಂದ ಅಪಘಾತಗಳು ಸಂಖ್ಯೆಗಳು ಹೆಚ್ಚಾಗಿದ್ದು, ಸಾವುಗಳು ಸಂಭವಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಾಹನಗಳಿಗೆ 25 ಕಿ.ಮೀ. ವೇಗ ಮಿತಿಯನ್ನು ಹಾಕಬೇಕು. ಇದರ ಜೊತೆಗೆ ಸ್ಪೀಡ್ ಬ್ರೇಕರ್ಗಳನ್ನು ಹಾಕಲು ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಬಳಿಕ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಕಿಶೋರ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.