ETV Bharat / state

ವಿಜಯನಗರ ಸಾಮ್ರಾಜ್ಯಕ್ಕೆ ಈ ಜಂಬುನಾಥನೇ ದ್ವಾರಪಾಲಕ! - ಜಂಬುನಾಥ ಸ್ವಾಮಿ

ಹೊಸಪೇಟೆಯಿಂದ ಸುಮಾರು ಎರಡು ಕಿ.ಮೀ ಕ್ರಮಿಸಿದರೆ ಇತಿಹಾಸ ಪ್ರಸಿದ್ಧ ಶ್ರೀಜಂಬುನಾಥ ದೇವಾಲಯವಿದ್ದು, ಪ್ರವಾಸಿಗರಿಗೆ ನೆಚ್ಚಿನ ತಾಣವಾಗಿದ್ದು, ಈ ದೇವರಲ್ಲಿ ಏನೇ ಬೇಡಿಕೊಂಡರು ಈಡೇರಿಸುತ್ತಾನೆ ಎಂಬ ನಂಬಿಕೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರಂತೆ.

Jambavantha temple
author img

By

Published : Oct 11, 2019, 11:32 AM IST

ಹೊಸಪೇಟೆ: ನಗರವು ಹಲವು ಐತಿಹಾಸಿಕ ದೇವಾಲಯಗಳನ್ನು ಒಳಗೊಂಡಿದ್ದು, ಇಲ್ಲಿರುವಂತಹ ಶ್ರೀಜಂಬುನಾಥ ದೇವಾಲಯವು ಹೆಚ್ಚಿನ ಪ್ರಸಿದ್ಧಿಯನ್ನು ಹೊಂದಿದೆ. ಇಲ್ಲಿ ಏನೇ ಬೇಡಿಕೊಂಡರೂ ಅದನ್ನು ಈಡೇರಿಸುತ್ತಾನೆಂಬ ನಂಬಿಕೆಯನ್ನು ಜನ ಹೊಂದಿದ್ದಾರೆ.

ಶ್ರೀಜಂಬುನಾಥ ದೇವಾಲಯ

ನಗರದಿಂದ ಸುಮಾರು 2 ಕೀ.ಮೀ ದೂರ ಕ್ರಮಿಸಿದರೆ ಜಂಬುನಾಥ ಎಂಬ ಹಳ್ಳಿಯಲ್ಲಿರುವ ಜಂಬುನಾಥ ಪುರಾತನ ದೇವಾಲಯ ಸಿಗುತ್ತದೆ. ಬೆಟ್ಟದ ಮೇಲಿರುವ ಈ ಜಂಬುನಾಥ ಪುಣ್ಯಕ್ಷೇತ್ರಕ್ಕೆ ಸುಮಾರು 900 ವರ್ಷಗಳ ಇತಿಹಾಸವಿದೆ. ಈ ದೇವಾಲಯವು ವಿಜಯನಗರ ಸಾಮ್ರಾಜ್ಯದ ಹಂಪಿಯ ದಕ್ಷಿಣ ದ್ವಾರವಾಗಿದೆ.

ದೇವಾಲಯದ ಹಿನ್ನಲೆ:
ಜಂಬುನಾಥ ದೇವಸ್ಥಾನದಲ್ಲಿರುವ ಜಂಬುವಂತನು ಜಿತೇಂದ್ರನಾಗಿದ್ದು, ಹತ್ತು ಸಾವಿರ ವರ್ಷಗಳ ಕಾಲ ಈತ ತಪಸ್ಸು ಮಾಡಿ ಶಿವ ಮೆಚ್ಚಿಗೆಗೆ ಪಾತ್ರನಾಗಿ ಶಿವನಿಂದ ಶಕ್ತಿಯನ್ನು ಪಡೆದಿದ್ದನಂತೆ. ಇನ್ನು ಹಂಪಿಯ ವಿರೂಪಾಕ್ಷನು ಜಂಬುವಂತನ ಸಹಾಯವನ್ನು ಕೇಳಿದ ಎಂದು ಪುರಾಣ ಹೇಳಲಾಗುತ್ತಿದೆ.

ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾಗುವುದಕ್ಕಿಂತ ಮುಂಚೆ ಲೋಹಾದ್ರಿಯ ಸಾಲಿನಲ್ಲಿ ಈ ದೇವಸ್ಥಾನ ನಿರ್ಮಿಸಲಾಗಿದೆ. ಇಲ್ಲಿ ಶಿವಲಿಂಗವು ತನ್ನಿಂದ ತಾನಾಗಿಯೇ ಉದ್ಭವ ಲಿಂಗವಾಗಿದೆ ಎಂಬ ಪ್ರತೀತಿ ಇದೆ. ಬೈರ, ತ್ರಿಶಂಕು, ಪರಾಹ ಎಂಬ ರಾಜರಿಂದ ಈ ದೇವಾಲಯವು ನಿರ್ಮಾಣವಾಗಿದೆ.

ಶಿವನ ದೇವಾಲಯಗಳಲ್ಲಿ ಸಾಮಾನ್ಯವಾಗಿ ಲಿಂಗದ ಮುಂದೆ ಒಂದು ನಂದಿ ವಿಗ್ರಹ ಇರುತ್ತದೆ. ಆದರೆ, ಇಲ್ಲಿ ಲಿಂಗದ ಮುಂದೆ ಮೂರು ನಂದಿ ವಿಗ್ರಹಗಳಿರುವುದು ವೈಶಿಷ್ಟ್ಯತೆಯಾಗಿದೆ. ಈ ದೇವಾಲಯದಲ್ಲಿ ಕಾಂಚನ ಗಂಗಾ ಬಾವಿ ಇದೆ. ಈ ಬಾವಿಯಲ್ಲಿರುವ ನೀರನ್ನು ಕುಡಿದರೆ ಅಥವಾ ಮೈ ಮೇಲೆ ಹಾಕಿಕೊಂಡರೆ ಎಲ್ಲ ಭಕ್ತರ ಕಾಯಿಲೆ ನಿವಾರಣೆಯಾಗುತ್ತದೆ ಎಂಬ ನಂಬಿಕೆಯನ್ನು ಜನರು ಹೊಂದಿದ್ದಾರೆ. ಸೋಮವಾರ ಮತ್ತು ಮಂಗಳವಾರದಂದು ವಿಶೇಷ ಪೂಜೆಗಳು ನಡೆಯುತ್ತವೆ. ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ ಎಂದು ದೇವಾಲಯದ ಅರ್ಚಕರು ಅಭಿಪ್ರಾಯ ವ್ಯಕ್ತಪಡಿಸಿದ್ರು.

Intro: ಜಾಂಬುವಂತ ಐತಿಹಾಸಿಕ ದೇವಾಲಯ : ಹೊಸಪೇಟೆ
ಹೊಸಪೇಟೆ : ನಗರವು ಹಲವು ಐತಿಹಾಸಿಕ ಹಲವು ದೇವಾಲಯಗಳನ್ನು ಒಳಗೊಂಡಿದೆ. ಜಾಂಬುವಂತ ದೇವಾಲಯು ತುಂಬಾ ಮಹಿಮೆಯ ದೇವರಾಗಿದೆ. ಕಾಯಿಲೆ ಬಂದವರು ಈ ದೇವರ ನೀರನ್ನು ಕುಡಿದರೆ ಕಾಯಿಲೆ ವಾಸಿಯಾಗುತ್ತದೆ. ಭಕ್ತರ ಬೇಡಿಕೆಯನ್ನು ಬೇಗನೆ ಇಡೇರಿಸುತ್ತಾನೆ ಎಂಬ ನಂಬಿಕೆಯನ್ನು ಹೊಂದಿದ್ದಾರೆ.

Body:ಹೊಸಪೇಟೆ ನಗರದಿಂದ ೨ ಕಿಮೀ ದೂರ ಕ್ರಮಿಸಿದರೆ ಜಾಂಬುವಂತ ಪುರಾತನ ದೇವಾಲಯ ಸಿಗುತ್ತದೆ. ಇದು ಬೆಟ್ಟದ ಮೇಲೆ ಮಂದಿರವನ್ನು ಕಟ್ಟಲಾಗಿದೆ. ಜಂಬುನಾಥ ಪುಣ್ಯಕ್ಷೇತ್ರವು ೯೦೦ ರಷ್ಟು ಪುರಾತನ ದೇವಾಲಯವಾಗಿದೆ. ಲೋಹದ್ರಿಯ ತಪ್ಪಲಿನಲ್ಲಿರುವ ಅದಿರಿನ ಬೆಟ್ಟಗಳಿಂದ ಆವೃತಗೊಂಡಿದೆ.
ವಿಜಯ ನಗರ ಸಾಮ್ರಾಜ್ಯಕ್ಕೆ ಇದು ಹಂಪೆಯ ದಕ್ಷಿಣ ದ್ವಾರವಗಿದೆ. ಜಂಬುವಂತ ದೇವಸ್ಥಾನದಲ್ಲಿ ಜಾಂಬವಂತನು ಜಿತೇಂದ್ರನಾಗಿದ್ದ. ಹತ್ತು ಸಾವಿರ ವರ್ಷಗಳ ಶಿವನ ತಪಸ್ಸನ್ನು ಪಡೆದುಕೊಂಡಿದ್ದ ಇವರ ತಪಸ್ಸನ್ನು ಶಿವ ಮೆಚ್ಚಿ ಶಕ್ತಿಯನ್ನು ನೀಡದ್ದನಂತೆ. ಹಂಪೆಯ ವಿರುಪಾಕ್ಷನು ಜಾಂಬುವಂತನ ಸಹಾಯವನ್ನು ಕೇಳಿದ ಎಂಬ ಪುರಾಣವನ್ನು ಹೇಳಲಾಗುತ್ತಿದೆ.
ಬಂಬುನಾಥ ಸ್ವಾಮಿಯು ಹಂಪಿಯ ವಿರೂಪಾಕ್ಷ ದೇವರಿಗೆ ಗುರುವಾಗಿದ್ದಾನಂತೆ. ವಿಜಯ ನಗರ ಸಾಮ್ರಾಜ್ಯ ಸ್ಥಾಪನೆ ಯಾಗುವುದಕ್ಕಿಂತ ಮುಂಚೆ ಲೋಹಾದ್ರಿಯ ಸಾಲಿನಲ್ಲಿ ಈ ದೇವಸ್ಥಾನ ನಿರ್ಮಿಸಲಾಗಿದೆ. ಇಲ್ಲಿ ಶಿವನ ಲಿಂಗವು ತನ್ನಿಂದ ತಾನಾಗಿಯೇ ಉದ್ಬವ ಲಿಂಗವಾಗಿದೆ. ಬೈರ, ತ್ರಿಶಂಕು, ಪರಾಹ ಎಂಬ ರಾಜರಿಂದ ಗುಡಿಯನ್ನ ತಯಾರಿಸಲಾಗಿದೆ.
ಶಿವನ ದೇವಾಲಯಗಳಲ್ಲಿ ಲಿಂಗದ ಮುಂದೆ ಒಂದು ನಂದಿ ವಿಗ್ರವಿರುತ್ತದೆ. ಇಲ್ಲಿನ ಲಿಂಗದ ಮುಂದೆ ಮೂರು ನಂದಿ ವಿಗ್ರಹಗಳಿರುವುದು ವೈಶಿಷ್ಟ್ಯತೆಯಾಗಿದೆ. ಕಾಂಚನ ಗಂಗ ಎಂಬ ಬಾವಿಯನ್ನು ಹೊಂದಿದೆ. ಈ ಬಾವಿಯಲ್ಲಿರುವ ನೀರನ್ನು ಕುಡಿದರೆ ಅಥವಾ ಮೈ ಮೇಲೆ ಹಾಕಿಕೊಂಡರೆ ಎಲ್ಲಾ ಭಕ್ತರ ಕಾಯಿಲೆ ನಿವಾರಣೆಯಾಗುತ್ತದೆ ಎಂಬ ಅಪಾರವಾದ ನಂಬಿಕೆಯನ್ನು ಹೊಂದಿದ್ದಾರೆ. ಸೋಮವಾರ ಮತ್ತು ಮಂಗಳವಾರದಂದು ವಿಶೇಷ ಪೂಜೆಗಳು ನಡೆಯುತ್ತವೆ ಎಂದು ಭರಮಲಿಂಗ ಅರ್ಚಕರು ಮಾತನಾಡಿದರು.

Conclusion:KN_ HPT_6_JAMBUNATHA TEMPLE WAlKTHROUGH IN HOSPETE VUSUAL_ KA10028 bite : ಭರಮಯ್ಯ ಜಾಂಬುವಂತ ದೇವಸ್ಥಾನದ ಅರ್ಚಕರು
ಜಾಂಬುವಂತ ದೇವಲಾಯವು ತುಂಬ ಪುರಾತನ ಕಾಲದ ಮಂದಿರವಾಗಿದೆ. ಇಲ್ಲಿ ಕಾಂಚನ ಗಂಗ ಎಂಬ ಬಾವಿಯಿಂದ ಭಕ್ತರು ನೀರನ್ನು ಹಾಕಿಕೊಂಡರೆ ಎಲ್ಲಾ ಕಾಯಿಲೆ ವಾಸಿಯಾಗುತ್ತದೆ. ಬೇಗನೆ ಭಕ್ತರ ಬಯಕೆಯನ್ನು ಇಡೇರಿಸುತ್ತಾನೆ ಎಂದು ಹೇಳಿದರು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.