ETV Bharat / state

ತಮ್ಮ ವಶದಲ್ಲಿದ್ದವರನ್ನು ಬಿಡಿಸಲು ಬಂದವರಿಗೆ ಕೈ ಮುಗಿದ ಪೊಲೀಸ್ ಇನ್ಸ್​ಪೆಕ್ಟರ್! - ಹೊಸಪೇಟೆ ಸುದ್ದಿ

ಕಠಿಣ ಲಾಕ್​ಡೌನ್ ಹಿನ್ನೆಲೆ ಅನಗತ್ಯವಾಗಿ ಹೊರ ಬಂದವರನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ. ಈ ನಡುವೆ ಅವರನ್ನು ಬಿಡಿಸಲು ಬರುವವರಿಗೆ ಇನ್ಸ್​ಪೆಕ್ಟರ್ ಒಬ್ಬರು ಕೈ ಮುಗಿದು ವಿನಂತಿಸಿಕೊಂಡಿರುವ ಘಟನೆ ನಡೆದಿದೆ.

Hospet Police
Hospet Police
author img

By

Published : May 20, 2021, 12:00 PM IST

ಹೊಸಪೇಟೆ: ನಗರದಲ್ಲಿ ಅನಗತ್ಯವಾಗಿ ಹೊರ ಬಂದವರನ್ನು ಬಿಡಿಸಲು ಬಂದವರಿಗೆ ಹೊಸಪೇಟೆ ಪಟ್ಟಣ ಠಾಣೆಯ ಪೊಲೀಸ್ ಇನ್ಸ್​ಪೆಕ್ಟರ್ ಎಂ.ಶ್ರೀನಿವಾಸ ಇಂದು ಕೈ ಮುಗಿದಿರುವ ಘಟನೆ ನಡೆದಿದೆ.

ಕೈ ಮುಗಿದು ಪೊಲೀಸ್ ಇನ್ಸ್​ಪೆಕ್ಟರ್ ಮನವಿ

ಪೊಲೀಸರ ಬಳಿ ಹೊಸಪೇಟೆಯ ವ್ಯಾಪಾರಿಯೋರ್ವ ತನ್ನ ತಮ್ಮನನ್ನು ಬಿಡಿ ಸರ್ ಎಂದು ಮನವಿ ಮಾಡಿಕೊಂಡಿದ್ದಾನೆ. ದಯಮಾಡಿ ನಿಮಗೆ ಕೈ ಮುಗಿದು ಕೇಳುವೆ, ಜನರನ್ನು ಬದುಕಿಸಿ. ನಿಮಗೆ ದುಡ್ಡು ಬೇಕು, ನಮಗೆ ಜನ ಬೇಕು. ನಾವು ಕೂಡ ಹೆಂಡ್ತಿ-ಮಕ್ಕಳನ್ನು ಬಿಟ್ಟು ಸಮಾಜಕ್ಕಾಗಿ ಬಂದಿದ್ದೇವೆ. ದಯಮಾಡಿ ಜನ ಬದುಕಬೇಕು, ಸಮಾಜ ಬದುಕಬೇಕು ಎಂದು ಶ್ರೀನಿವಾಸ ಕೈ ಮುಗಿದಿದ್ದಾರೆ.

ಕಠಿಣ ಲಾಕ್​ಡೌನ್ ಹಿನ್ನೆಲೆ ಅನಗತ್ಯವಾಗಿ ಹೊರ ಬಂದವರನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ. ಕೊರೊನಾ ಕಂಟ್ರೋಲ್​ಗೆ ಹೊಸಪೇಟೆಯಲ್ಲಿ ಎರಡನೇ ದಿನ ಬಿಗಿ ಕ್ರಮ ಕೈಗೊಳ್ಳಾಗುತ್ತಿದೆ. ಹೊರಗಡೆ ಕುಳಿತಿದ್ದವರನ್ನು ಸಹ ಪೊಲೀಸರು ಬಂಧಿಸುತ್ತಿದ್ದಾರೆ.

ಇದನ್ನೂ ಓದಿ: ಆಕ್ಸಿಜನ್ ದುರಂತ: ಚಾಮರಾಜನಗರ ಡಿಸಿ ಡಾ.ಎಂ.ಆರ್‌.ರವಿ ಎತ್ತಂಗಡಿ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.