ETV Bharat / state

ಹಂಪಿ ಅಧಿಪತಿ ವಿರೂಪಾಕ್ಷನಿಗಿದೆ ನೂರಾರು ವರ್ಷಗಳ ಇತಿಹಾಸ... ಪಂಪಾಕ್ಷೇತ್ರವೆಂದೇ ಪುಣ್ಯ ಕ್ಷೇತ್ರ ಖ್ಯಾತಿ! - ವಿರೂಪಾಕ್ಷ ದೇವಾಲಯದ ಇತಿಹಾಸ

ಹಂಪಿಯ ಅಧಿಪತಿ ವಿರೂಪಾಕ್ಷ ದೇವರು.‌ ವಿರೂಪಾಕ್ಷನನ್ನು ಪಂಪಾಪತಿ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ. ಪಂಪಾ ಎಂಬಾಕೆ ಬ್ರಹ್ಮನ ಮಾನಸ ಪುತ್ರಿ. ಪಂಪಾಂಬಿಕೆ ಶಿವನನ್ನು ತಪಸ್ಸು ಮಾಡಿ ಮದುವೆಯಾಗುತ್ತಾಳೆ. ಹಾಗಾಗಿ ಶಿವನಿಗೆ ಪಂಪಾಪತಿ ಎಂದು ಹೆಸರು ಬಂತು. ಅಲ್ಲದೆ ತುಂಗಭದ್ರಾ ನದಿಯನ್ನು ಪಂಪಾ ಎಂದು ಕರೆಯಲಾಗುತ್ತದೆ.

hampi Virupaksha temple
ಹಂಪಿ ಅಧಿಪತಿ ವಿರೂಪಾಕ್ಷನಿಗಿದೆ ನೂರಾರು ವರ್ಷಗಳ ಇತಿಹಾಸ...
author img

By

Published : Oct 12, 2020, 8:05 AM IST

ಹೊಸಪೇಟೆ: ಹಂಪಿ ವಿರೂಪಾಕ್ಷನಿಗೆ ನೂರಾರು ವರ್ಷಗಳ ಇತಿಹಾಸವಿದೆ.‌ ಅಲ್ಲಿಂದ ಹಿಡಿದು ಇಲ್ಲಿವರೆಗೂ ಪೂಜೆ ಪುನಸ್ಕಾರ ನಡೆಯುತ್ತಿದೆ.‌ ದಕ್ಷಿಣ ಭಾರತದ ಕಾಶಿ ಎಂದು ಕರೆಸಿಕೊಂಡಿರುವ ಹಂಪಿ ಪವಿತ್ರ ಹಾಗೂ ಐತಿಹಾಸಿಕ ಸ್ಥಳವಾಗಿದೆ.

ಹಂಪಿ ಅಧಿಪತಿ ವಿರೂಪಾಕ್ಷನಿಗಿದೆ ನೂರಾರು ವರ್ಷಗಳ ಇತಿಹಾಸ

ಹಂಪಿಯ ಅಧಿಪತಿ ವಿರೂಪಾಕ್ಷ ದೇವರು.‌ ವಿರೂಪಾಕ್ಷನನ್ನು ಪಂಪಾಪತಿ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ. ಪಂಪಾ ಎಂಬಾಕೆ ಬ್ರಹ್ಮನ ಮಾನಸ ಪುತ್ರಿ. ಪಂಪಾಂಬಿಕೆ ಶಿವನನ್ನು ತಪಸ್ಸು ಮಾಡಿ ಮದುವೆಯಾಗುತ್ತಾಳೆ. ಹಾಗಾಗಿ ಶಿವನಿಗೆ ಪಂಪಾಪತಿ ಎಂದು ಹೆಸರು ಬಂತು. ಅಲ್ಲದೆ, ತುಂಗಭದ್ರಾ ನದಿಯನ್ನು ಪಂಪಾ ಎಂದು ಕರೆಲಾಗುತ್ತದೆ.

ಶಾಸನಗಳಲ್ಲಿ ಉಲ್ಲೇಖ: ಹಂಪಿಯನ್ನು ಚಾಲುಕ್ಯರ ಶಾಸನದಲ್ಲಿ ಪಂಪಾತೀರ್ಥ ಎಂದು ಉಲ್ಲೇಖಿಸಲಾಗಿದೆ. ಕ್ರಿ.ಶ. 1014ರಲ್ಲಿ ಗೋನಾಳಿನ ಶಾಸನವು ಪಂಪಾತೀರ್ಥ ಮಹಾಕಾಲನಿಗೆ ಪಲ್ಲವನೊಳಂಬ ವಂಶದ ರಾಣಿ ಮಬ್ಬರಸಿಯು ಭೂದಾನ ಮಾಡಿರುವುದು ತಿಳಿಯುತ್ತದೆ. ಇದರಿಂದ ತಿಳಿಯುವುದೇನೆಂದರೆ ವಿರೂಪಾಕ್ಷನಿಗೆ ಮಹಾಕಾಲನೆಂಬ ಹೆಸರು ಇರಬಹುದು ಎಂದು. ಕ್ರಿ.ಶ. 1199ರ ಶಾಸನದಲ್ಲಿ ವಿರೂಪಾಕ್ಷ ತೀರ್ಥವೆಂಬ ಹೆಸರಿಂದ ಕರೆಯಲಾಗಿದೆ. ಈ ತೀರ್ಥವನ್ನು ರಕ್ಷಿಸಲು ಕುರುಗೋಡು ಸಿಂಧರ ದೊರೆ ಶ್ರೀಕಲೊದೇವರಸು ತನ್ನ ಸಾಮಂತನಾದ ಮಾದೆಯನಾಯಕನ್ನು ನೇಮಿಸಿದ್ದ. ಅವನು ಮತಂಗ ಪರ್ವತವನ್ನು ಆಳುತ್ತಾನೆ ಎಂಬುದು ತಿಳಿದು ಬರುತ್ತದೆ.

ದೇವಸ್ಥಾನದ ವೈಶಿಷ್ಟ: ವಿರೂಪಾಕ್ಷ ದೇವಾಲಯದಲ್ಲಿ ಗರ್ಭ ಗೃಹ, ಮೂರು ಅಂತರಾಳಗಳು, ನವರಂಗ ಮತ್ತು ಮುಖಮಂಟಪ ಅಥವಾ ರಂಗಮಂಪಟಗಳು ಕಂಡು ಬರುತ್ತವೆ. ಗರ್ಭಗೃಹ ಮತ್ತು ಅಂತರಾಳಗಳ ಅಧಿಷ್ಠಾನ, ಅನಂತರ ರಚಿಸಿದ ಮೆಟ್ಟಿಲುಗಳಿಂದ ಮುಚ್ಚಿ ಹೋಗಿವೆ‌. ಅಧಿಷ್ಠಾನವು ಸರಳ ಆಕಾರದಿಂದ ಕೂಡಿದೆ. ತ್ರಿಪಟ್ಟಕುಮುದ, ಕಂಠ ಮತ್ತು ಪಟ್ಟಿಕೆಗಳು ಎದ್ದು ಕಾಣುತ್ತವೆ. ನವರಂಗದ ಅಧಿಷ್ಠಾನವು ಎತ್ತರವಾಗಿದ್ದು, ಗರ್ಭಗೃಹ, ಅಂತರಾಳಗಳ ಅಧಿಷ್ಠಾನಕ್ಕಿಂತಲೂ ಭಿನ್ನವಾಗಿವೆ.

ನವರಂಗಕ್ಕೆ ಹೊಂದಿಕೊಡಂತೆ ರಂಗಮಂಟಪವಿದ್ದು, ಇದನ್ನು ಕೃಷ್ಣದೇವರಾಯ ತನ್ನ ಪಟ್ಟಾಭಿಷೇಕದ ನೆನಪಿಗೋಸ್ಕರ ಕ್ರಿ.ಶ. 1510ರಲ್ಲಿ ನಿರ್ಮಿಸಿರುವುದು ಇತಿಹಾಸ ಪುಟದಲ್ಲಿ ದಾಖಲಾಗಿದೆ. ದೇವಸ್ಥಾನದ ಹೊರಗಡೆಯ ಪೂರ್ವ ದಿಕ್ಕಿಗಿರುವ ಮೂರು ಅಂಸ್ತುಗಳ ಸಣ್ಣ ಗೋಪುರವನ್ನು ಕ್ರಿ.ಶ. 1510ರಲ್ಲಿ ಕೃಷ್ಣದೇವರಾಯ ಕಟ್ಟಿಸಿರುವುದು ಇತಿಹಾಸದಿಂದ ತಿಳಿದು ಬರುತ್ತದೆ. ಮುಂದಿರುವ ದೊಡ್ಡಗೋಪುರ 52 ಮೀಟರ್ ಎತ್ತರವಿದ್ದು, ಎರಡು ಸ್ತರಗಳ ಕಲ್ಲಿನ ಅಡಿಪಾಯದ ಮೇಲೆ ಇಟ್ಟಿಗೆ ಮತ್ತು ಗಾರೆಗಳಿಂದ ನಿರ್ಮಿಸಲಾಗಿದೆ. ಇದು ದೇವಸ್ಥಾನದ ಮುಖ್ಯ ಪ್ರವೇಶ ದ್ವಾರವಾಗಿದೆ. ಇದನ್ನು 2ನೇ ದೇವರಾಯನ ಕ್ರಿ.ಶ. 1422-46ರ ದಂಡನಾಯಕರಲ್ಲಿ ಒಬ್ಬನಾದ ಪ್ರೋಲುಗಂಟಿ ತಿಪ್ಪನು ಕಟ್ಟಿಸಿದನೆಂದು ಸಾಹಿತ್ಯಿಕ ಆಧಾರಗಳಿಂದ ತಿಳಿದು ಬರುತ್ತದೆ. ಇದನ್ನು 1510ರಲ್ಲಿ ಜೀರ್ಣೋದ್ಧಾರ ಮಾಡಲಾಗುತ್ತದೆ.

ದೇವಸ್ಥಾನದ ಒಳಭಾಗದಲ್ಲಿ ಸೂರ್ಯನಾರಾಯಣ, ಮುತ್ತಿನರಸಿಂಹ, ತಾರಕೇಶ್ವರ, ಪಾತಾಳೇಶ್ವರ, ಸ್ವರಸ್ವತಿ ಮತ್ತು ನವದುರ್ಗಾ ಗುಡಿಗಳಿವೆ. ಪಶ್ಚಿಮ ಮೊಗಸಾಲೆಯಲ್ಲಿ ಆರು ಕೈಗಳ ಮಹಿಷಾಸುರ ಮರ್ದಿನಿ, ಹಿಂದುಗಡೆ ವಿದ್ಯಾರಣ್ಯ ಯತಿಗಳ ಇನ್ನೊಂದು ಚಿಕ್ಕ ಗುಡಿಯಿದೆ. ಇನ್ನು ಉತ್ತರ ಭಾಗದಲ್ಲಿ ಪಾರ್ವತಿ ಮತ್ತು ಭುವನೇಶ್ವರಿ ಮಂದಿರಗಳಿವೆ. ವಿರೂಪಾಕ್ಷನ ದೇವಾಲಯಕ್ಕಿಂತಲೂ ಮುಂಚೆ ನಿರ್ಮಾಣ ಮಾಡಲಾಗಿದೆ. ಬಸಾಲ್ಟ್ ಶಿಲೆಯಲ್ಲಿ ಮಾಡಿದ ಇಲ್ಲಿನ ದುಂಡಾದ ಕಂಬಗಳು, ಛಾವಣಿ ಮತ್ತು ದ್ವಾರ ಬಂಧಗಳು ಸೂಕ್ಷ್ಮ ಕೆತ್ತನೆಗಳಿಂದ ಕೂಡಿವೆ. ಇವು ಕಲ್ಯಾಣಿ ಚಾಲುಕ್ಯರ ಶೈಲಿಯಲ್ಲಿವೆ. ಕ್ರಿ.ಶ. 12 ಶತಮಾನದ ರಚನೆಗಳಾಗಿವೆ.

ವಿರೂಪಾಕ್ಷನ ದೇವಾಲಯದ ಮುಂದೆ ರಥಬೀದಿ ಇದೆ. ಇದನ್ನು ವಿಜಯನಗರ ಕಾಲದಲ್ಲಿ ಬಜಾರ್ ಎಂದು ಕರೆಯಲಾಗಿತ್ತು. ಇದು ಪ್ರಮುಖ ಮಾರುಕಟ್ಟೆಯ ಕೇಂದ್ರ ಬಿಂದುವಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.