ಹೊಸಪೇಟೆ: ಮಂಡ್ಯದಲ್ಲಿ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವುದು ಖಂಡನೀಯ. ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ತಗೆದುಕೊಂಡಿದ್ದು, ಈಗಾಗಲೇ 8.50 ಲಕ್ಷ ರೂ. ಪರಿಹಾರ ನೀಡಿದೆ ಎಂದು ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಕುಡಚಿ ಶಾಸಕ ಪಿ.ರಾಜೀವ್ ಹೇಳಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ವಲಸೆ ತಡೆಯುವುದು ಮೊದಲ ಆದ್ಯತೆಯಾಗಿದೆ. ಹಾಗಾಗಿ ಆಯಾ ತಾಂಡಗಳಲ್ಲಿ ಉದ್ಯೋಗವನ್ನು ಸೃಷ್ಟಿಸಲಾಗುವುದು. ಈಗಾಗಲೇ ಗ್ರಾಮೀಣ ಅಭಿವೃದ್ಧಿ ಇಲಾಖೆ ಹಾಗೂ ತಾಂಡ ನಿಗಮ ಸಹಯೋಗದೊಂದಿಗೆ ತಾಂಡಾ ರೋಜಗಾರ್ ಮಿತ್ರ ಜಾರಿಗೆ ತರಲಾಗಿದೆ. ನಿಗಮದಿಂದ 300 ಯುವಕರನ್ನು ನಿರುದ್ಯೋಗ ಮಿತ್ರರನ್ನಾಗಿ ನೇಮಿಸಲಾಗುತ್ತಿದೆ. ವಲಸೆ ಹೋದವರಿಗಾಗಿ ಸುರಕ್ಷತೆ ಹೆಚ್ಚಿಸಲು ಹಾಗೂ ಮೂಲಭೂತ ಸೌಕರ್ಯ ನೀಡಲು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಲಾಗಿದೆ. ಅಲ್ಲದೇ, ಅಧಿವೇಶನದಲ್ಲಿ ಸಹ ಸಮಸ್ಯೆಯ ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಇನ್ನೂ ತಾಂಡದಲ್ಲಿ ಗುಳೆ ತಡೆಯುವುದಕ್ಕಾಗಿ ಫಾರ್ಮರ್ ಪ್ರಡ್ಯೂಸರ್ ಆರ್ಗನೈಸೇಶನ್ನ್ನು ರಾಜ್ಯದ 18 ಜಿಲ್ಲೆಗಳಲ್ಲಿ ಸ್ಥಾಪನೆ ಮಾಡಲಾಗಿದೆ. ಇದರಲ್ಲಿ ತಾಂಡದ 3 ಸಾವಿರ ರೈತರು ಒಳಗೊಂಡಿದ್ದಾರೆ. ಮಂಡ್ಯದಲ್ಲಿ ನಡೆದ ಘಟನೆ ಮರುಕಳಿಸಿದಂತೆ ಸರ್ಕಾರ ಆಲೋಚನೆ ಮಾಡಬೇಕಾಗಿದೆ. ಆದರೆ, ಒಬ್ಬ ವ್ಯಕ್ತಿಯನ್ನ ಶೂಟ್ ಮಾಡಿ, ಕೊಚ್ಚಿ ಪೀಸ್ ಪೀಸ್ ಮಾಡಿದರೇ ಇನ್ನೊಂದು ಘಟನೆ ನಡೆಯಲ್ಲ ಅಂತ ಹೇಳುವುದಕ್ಕೆ ಬರುವುದಿಲ್ಲ. ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದೆ. ಕಾನೂನು ಪ್ರಕಾರ ಶಿಕ್ಷೆ ನೀಡಲಾಗುತ್ತದೆ ಎಂದರು.