ETV Bharat / state

ವಿಜಯನಗರ ಕ್ಷೇತ್ರದಲ್ಲಿ ದಿಢೀರ್​​​ ಪ್ರತ್ಯಕ್ಷರಾದ ಶಾಸಕ ರೆಡ್ಡಿ! ಕುತೂಹಲ ಕೆರಳಿಸಿದ ನಡೆ

ಅನರ್ಹ ಶಾಸಕ‌ ಆನಂದಸಿಂಗ್ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸುತ್ತಿದ್ದ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ಇಂದು ದಿಢೀರ್ ವಿಜಯನಗರ ಕ್ಷೇತ್ರದಲ್ಲಿ ಆನಂದಸಿಂಗ್ ಪರ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ.

author img

By

Published : Nov 23, 2019, 5:18 PM IST

Updated : Nov 23, 2019, 5:33 PM IST

ವಿಜಯನಗರ ಕ್ಷೇತ್ರದಲ್ಲಿ ಆನಂದಸಿಂಗ್ ಪರ ಪ್ರಚಾರ ಕೈಗೊಂಡ ಗಾಲಿ ಸೋಮಶೇಖರರೆಡ್ಡಿ

ಬಳ್ಳಾರಿ: ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಕ್ರಿಯೆ ಶುರುವಾದ ದಿನದಿಂದಲೂ ಅಂತರ ಕಾಯ್ದುಕೊಂಡಿದ್ದ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ಇವತ್ತು ದಿಢೀರ್​ ಅಂತಾ ಕ್ಷೇತ್ರದಲ್ಲಿ ಪ್ರತ್ಯಕ್ಷವಾಗಿದ್ದಾರೆ.

ವಿಜಯನಗರ ಕ್ಷೇತ್ರದಲ್ಲಿ ಆನಂದಸಿಂಗ್ ಪರ ಪ್ರಚಾರ ಕೈಗೊಂಡ ಗಾಲಿ ಸೋಮಶೇಖರರೆಡ್ಡಿ

ಪ್ರತ್ಯೇಕ ವಿಜಯನಗರ ‌ರಚನೆ ವಿಚಾರವಾಗಿ ಪ್ರಬಲ ವಿರೋಧ ವ್ಯಕ್ತಪಡಿಸಿದ್ದ ಶಾಸಕ ಗಾಲಿ ಸೋಮಶೇಖರರೆಡ್ಡಿ, ಅನರ್ಹ ಶಾಸಕ‌ ಆನಂದಸಿಂಗ್ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ರು. ಪ್ರತ್ಯೇಕ ‌ಜಿಲ್ಲೆಯ ರಚನೆಯ ಕುರಿತು ಚರ್ಚಿಸಲು ಮುಖ್ಯಮಂತ್ರಿ ಬಿಎಸ್​ವೈ ಕರೆದಿದ್ದ ಸಭೆಯಲ್ಲಿ ಅನರ್ಹ ಶಾಸಕನಿಗೆ ಇಷ್ಟೊಂದು ‌ಮಣೆ ಹಾಕೋದು ಬೇಡ ಎಂದಿದ್ದರು ಶಾಸಕ ರೆಡ್ಡಿ. ಈಗ ದಿಢೀರ್ ವಿಜಯನಗರ ಕ್ಷೇತ್ರದಲ್ಲಿ ಪ್ರತ್ಯಕ್ಷವಾಗಿ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ.

ನವೆಂಬರ್ 25 ರಂದು ಮುಖ್ಯಮಂತ್ರಿ ‌ಬಿ.ಎಸ್ ಯಡಿಯೂರಪ್ಪ ಅವರು ಬೆಳಗ್ಗೆ 10 ಗಂಟೆಗೆ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಅನರ್ಹ ಶಾಸಕ ಆನಂದಸಿಂಗ್ ಪರವಾಗಿ ಪ್ರಚಾರ ಹಾಗೂ ಸಾರ್ವಜನಿಕ ಸಭೆ ನಿಗದಿಯಾಗುತ್ತಿದ್ದಂತೆಯೇ ಸಿಎಂಗೆ ಇರಿಸು,‌ ಮುರಿಸು ಆಗದಂತೆ ನೋಡಿಕೊಳ್ಳಲು ಶಾಸಕ ಸೋಮಶೇಖರ ರೆಡ್ಡಿ ಈ ಪ್ರಚಾರದ ಕಣದಲ್ಲಿ ಧುಮುಕಿದ್ದಾರೆ ಎಂದು ಹೇಳಲಾಗ್ತಿದೆ.

ಜಿಲ್ಲೆಯ ಹೊಸಪೇಟೆ ನಗರದ ಪ್ರತಿಯೊಂದು ಮನೆಮನೆಗೂ ತೆರಳಿ ಅನರ್ಹ ಶಾಸಕ ಆನಂದಸಿಂಗ್ ಪರವಾಗಿ ಮತಯಾಚನೆ ಮಾಡಲು ಮುಂದಾಗೋ ಮುಖೇನ ಗಮನ ಸೆಳೆದಿದ್ದಾರೆ.

Intro:ವಿಜಯನಗರ ಕ್ಷೇತ್ರದಲ್ಲಿ ದಿಢೀರನೆ ಪ್ರತ್ಯಕ್ಷವಾದ ಶಾಸಕ ರೆಡ್ಡಿ!
ಬಳ್ಳಾರಿ: ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ವಿಜಯನಗರ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆ ಪ್ರಕ್ರಿಯೆ ಶುರುವಾದ ದಿನದಿಂದಲೇ ಅಂತರ ಕಾಯ್ದುಕೊಂಡಿದ್ದ ಬಳ್ಳಾರಿ ನಗರ ಶಾಸಕ ಗಾಲಿ ಸೋಮ ಶೇಖರರೆಡ್ಡಿಯವರು ಈ ದಿನ ದಿಢೀರನೆ ಕ್ಷೇತ್ರದಲ್ಲಿ ಪ್ರತ್ಯಕ್ಷವಾಗಿ ದ್ದಾರೆ.
ಪ್ರತ್ಯೇಕ ವಿಜಯನಗರ ‌ರಚನೆ ವಿಚಾರವಾಗಿ ಪ್ರಬಲ ವಿರೋಧ ವ್ಯಕ್ತಪಡಿಸಿದ್ದ ಶಾಸಕ ಗಾಲಿ ಸೋಮಶೇಖರರೆಡ್ಡಿಯವ್ರು ಅನರ್ಹ ಶಾಸಕ‌ ಆನಂದಸಿಂಗ್ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ರು. ಪ್ರತ್ಯೇಕ ‌ಜಿಲ್ಲೆಯ ರಚನೆಯ ಕುರಿತು ಚರ್ಚಿಸಲು ಮುಖ್ಯಮಂತ್ರಿ ಬಿಎಸ್ ವೈ ಕರೆದಿದ್ದ ಸಭೆಯಲ್ಲಿ ಅನರ್ಹ ಶಾಸಕನಿಗೆ ಇಷ್ಟೊಂದು ‌ಮಣೆ ಹಾಕೋದು ಬ್ಯಾಡ ಎಂದಿದ್ದರು ಶಾಸಕ ರೆಡ್ಡಿ. ಈಗ ದಿಢೀರ್ ವಿಜಯನಗರ ಕ್ಷೇತ್ರದಲ್ಲಿ ಪ್ರತ್ಯಕ್ಷವಾಗಿ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ.
Body:ನವೆಂಬರ್ 25 ರಂದು ಮುಖ್ಯಮಂತ್ರಿ ‌ಬಿಎಸ್ ಯಡಿಯೂರಪ್ಪ ನವ್ರು ಬೆಳಿಗ್ಗೆ 10 ಗಂಟೆಗೆ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಅನರ್ಹ ಶಾಸಕ ಆನಂದಸಿಂಗ್ ಪರವಾಗಿ ಪ್ರಚಾರ ಹಾಗೂ ಸಾರ್ವ ಜನಿಕ ಸಭೆ ನಿಗದಿಯಾಗುತ್ತಿ ದ್ದಂತೆಯೇ ಸಿಎಂಗೆ ಇರಿಸು,‌ ಮುರಿಸು ಆಗದಂತೆ ನೋಡಿಕೊಳ್ಳಲು ಶಾಸಕ ಸೋಮಶೇಖರ ರೆಡ್ಡಿಯವ್ರು ಈ ಪ್ರಚಾರದ ಕಣದಲ್ಲಿ ಧುಮುಕಿದ್ದಾರೆ ಎಂದು ಹೇಳಲಾಗುತ್ತೆ.
ಜಿಲ್ಲೆಯ ಹೊಸಪೇಟೆ ನಗರದ ಪ್ರತಿಯೊಂದು ಮನೆಮನೆಗೂ ತೆರಳಿ ಅನರ್ಹ ಶಾಸಕ ಆನಂದಸಿಂಗ್ ಪರವಾಗಿ ಮತಯಾಚನೆ ಮಾಡಲು ಮುಂದಾಗೋ ಮುಖೇನ ಸಾರ್ವಜನಿಕರ ವಿಶೇಷ ಗಮನ ಸೆಳೆದಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_4_MLA_SOMASHEKARREDY_CAMPAIN_VSL_7203310

KN_BLY_4d_MLA_SOMASHEKARREDY_CAMPAIN_VSL_7203310
Last Updated : Nov 23, 2019, 5:33 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.