ETV Bharat / state

ಗಣರಾಜ್ಯೋತ್ಸವ ಧ್ವಜ ವಂದನೆಗೆ ಗೈರು: ಐವರು ಪೊಲೀಸರು ಅಮಾನತು - policemen suspend

72ನೇ ಗಣರಾಜ್ಯೋತ್ಸವದ ನಿಮಿತ್ತ ಆಯೋಜಿಸಿದ್ದ ಧ್ವಜಾರೋಹಣ ವೇಳೆ ಧ್ವಜ ವಂದನೆಗೆ ಗೈರಾಗಿದ್ದ ಐವರು ಪೊಲೀಸ್ ಸಿಬ್ಬಂದಿಯನ್ನ ಅಮಾನತುಗೊಳಿಸಿದೆ.

five-policemen-suspendedwho-absent-for-republic-day-guard-of-honour
ಐವರು ಪೊಲೀಸರು ಅಮಾನತು
author img

By

Published : Jan 27, 2021, 5:59 AM IST

ಬಳ್ಳಾರಿ: ಜಿಲ್ಲೆಯ ಸಂಡೂರು ಪಟ್ಟಣದ ಛತ್ರಪತಿ ಶಿವಾಜಿ ವಿದ್ಯಾಮಂದಿರದ ಆವರಣದಲ್ಲಿ 72ನೇ ಗಣರಾಜ್ಯೋತ್ಸವದ ನಿಮಿತ್ತ ಆಯೋಜಿಸಿದ್ದ ಧ್ವಜಾರೋಹಣ ವೇಳೆ ಧ್ವಜ ವಂದನೆ ಸಲ್ಲಿಸಲು ಗೈರಾಗಿದ್ದ ಐವರು ಪೊಲೀಸ್ ಸಿಬ್ಬಂದಿಯನ್ನ ಜಿಲ್ಲಾ ಪೊಲೀಸ್ ಇಲಾಖೆ ಅಮಾನತುಗೊಳಿಸಿದೆ.

ಪೊಲೀಸ್ ಸಿಬ್ಬಂದಿಯಾದ ರಘುಪತಿ, ವೆಂಕಟೇಶ ನಾಯ್ಕ, ಕಾಳಿಂಗಪ್ಪ, ಜಂಭುನಾಥ, ವೇಣುಗೋಪಾಲ ಎಂಬುವರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು ಆದೇಶ ಹೊರಡಿಸಿದ್ದಾರೆ.

five-policemen-suspendedwho-absent-for-republic-day-guard-of-honour
ಆದೇಶ ಪ್ರತಿ

ಈ ಎಲ್ಲ ಸಿಬ್ಬಂದಿ ಸಂಡೂರು ಶಾಸಕ ಈ. ತುಕಾರಾಂ ಸೇರಿದಂತೆ ಇನ್ನಿತರ ಗಣ್ಯರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಮೊದಲೇ ನಿಯೋಜನೆಗೊಂಡಿದ್ದ ಧ್ವಜ ವಂದನೆ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದಾರೆ. ಈ ಹಿನ್ನೆಲೆ ರಾಷ್ಟ್ರೀಯ ಹಬ್ಬಕ್ಕೆ ಅಗೌರವ ಸೂಚಿಸಿದ್ದಾರೆಂದು ಕೂಡ್ಲಿಗಿ ಉಪವಿಭಾಗದ ಡಿವೈಎಸ್ಪಿಯವರು ಸಲ್ಲಿಸಿದ ವರದಿಯನ್ನಾಧರಿಸಿ ಅಮಾನತುಗೊಳಿಸಲಾಗಿದೆ ಎಂದು ಎಸ್​ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.