ETV Bharat / state

ಇಂಧನ ದರ ಸಮಸ್ಯೆಗೆ ಗುಡ್​ ಬೈ: ಎಲೆಕ್ಟ್ರಿಕ್ ಆಟೋಗಳ ಮೊರೆ ಹೋಗುತ್ತಿರುವ ಗಣಿ ನಗರಿಯ ಚಾಲಕರು

ಇಂಧನ ದರ ಹೆಚ್ಚಳ ಪ್ರಯಾಣ ದರ ಯಥಾಸ್ಥಿತಿ ಜೊತೆಗೆ ಕೋವಿಡ್​ ಹೊಡೆತದಿಂದ ಸಮಸ್ಯೆ ಸಿಲುಕಿರುವ ಬಳ್ಳಾರಿಯ ಆಟೋ ಚಾಲಕರು, ಎಲೆಕ್ಟ್ರಿಕ್​ ಆಟೋಗಳನ್ನು ಖರೀದಿಸುತ್ತಿದ್ದಾರೆ. ಪರಿಣಾಮ ನಗರದಲ್ಲಿ ಸದ್ದಿಲ್ಲದೇ ಪರಿಸರ ಸ್ನೇಹಿ ಆಟೋಗಳ ಸಂಖ್ಯೆ ಹೆಚ್ಚಾಗುತ್ತಿದೆ.

author img

By

Published : Apr 6, 2021, 5:57 PM IST

Electric auto increased in Bellary slightly
ಎಲೆಕ್ಟ್ರಿಕ್ ಆಟೋಗಳ ಮೊರೆ ಹೋಗುತ್ತಿರುವ ಗಣಿ ನಗರಿಯ ಚಾಲಕರು

ಬಳ್ಳಾರಿ : ಪೆಟ್ರೋಲ್ ಡೀಸೇಲ್ ದರ ಮಿತಿ ಮೀರಿ ಏರಿಕೆಯಾಗಿದ್ದರಿಂದ ಜಿಲ್ಲೆಯ ಆಟೋ ಚಾಲಕರು ಸದ್ದಿಲ್ಲದೇ ಎಲೆಕ್ಟ್ರಿಕ್ ಆಟೋಗಳ ಮೊರೆ ಹೋಗಿದ್ದಾರೆ.

ಮಹೇಂದ್ರ ಕಂಪನಿ ಹೊರತಂದಿರುವ ಎಲೆಕ್ಟ್ರಿಕ್ ಆಟೋಗಳು ನಗರದಲ್ಲಿ ಅಲ್ಲೊಂದು ಇಲ್ಲೊಂದು ಕಾಣ ಸಿಗುತ್ತಿದ್ದು, ಹೊಸ ಆಟೋಗಳನ್ನು ಖರೀಸುವವರು ಮತ್ತು ಹಳೇ ಆಟೋಗಳನ್ನು ಬದಲಾಯಿಸುವವರು ಎಲೆಕ್ಟ್ರಿಕ್ ಆಟೋಗಳತ್ತ ಒಲವು ತೋರಿಸುತ್ತಿದ್ದಾರೆ. ಎಲೆಕ್ಟ್ರಿಕ್​ ಆಟೋಗಳಿಂದ ಪೆಟ್ರೋಲ್ -ಡೀಸೆಲ್ ವಿಚಾರದಲ್ಲಿ ಚಾಲಕರಿಗೆ ಅನುಕೂಲಕವಾಗುತ್ತಿದ್ದು, ಜೊತೆಗೆ ಪರಿಸರ ಮಾಲಿನ್ಯ ನಿಯಂತ್ರಿಸಲು ಇದು ಸಹಕಾರಿಯಾಗಿದೆ.

ಓದಿ : ಸಾರಿಗೆ ನೌಕರರ ಮುಷ್ಕರ: ನಾಳೆ ರಸ್ತೆಗಿಳಿಯಲಿವೆ 2 ಸಾವಿರ ಹೆಚ್ಚುವರಿ ಖಾಸಗಿ ಬಸ್‌ಗಳು

ಬಳ್ಳಾರಿ ಮಹಾನಗರದಲ್ಲಿ ಅಂದಾಜು 10 ಸಾವಿರಕ್ಕೂ ಅಧಿಕ ಆಟೋ ರಿಕ್ಷಾಗಳಿವೆ. ಈ ಪೈಕಿ ಕೆಲ ಆಟೋಗಳು ವಿಪರೀತ ಹೊಗೆ ಉಗುಳುವುದರಿಂದ ಬಾರೀ ಪರಿಸರ ಮಾಲಿನ್ಯವಾಗುತ್ತಿದೆ. ಎಲೆಕ್ಟ್ರಿಕ್​ ಆಟೋಗಳ ಸಂಚಾರದಿಂದ ಅಲ್ಪವಾದರೂ ಪರಿಸರ ಮಾಲಿನ್ಯ ತಡೆಯಬಹುದು ಎನ್ನುತ್ತಾರೆ ಸಾರ್ವಜನಿಕರು.

ಇದರ ದರ ಹೆಚ್ಚಾದರೂ ಅಟೋದರ ಯಥಾಸ್ಥಿತಿ : ದಿನೇ ದಿನೆ ಇಂಧನ ದರ ಹೆಚ್ಚಾಗುತ್ತಿದ್ದರೂ ಆಟೋ ಪ್ರಯಾಣ ದರ ಮಾತ್ರ ಯಥಾಸ್ಥಿತಿಯಲ್ಲಿದೆ. ಇದರಿಂದ ಆಟೋ ಚಾಲಕರಿಗೆ ಬಾರಿ ಸಮಸ್ಯೆಯಾಗುತ್ತಿದೆ. ಎಲೆಕ್ಟ್ರಿಕ್ ಆಟೋಗಳಿಂದ ಚಾಲಕರಿಗೆ ಇಂಧನ ದರ ಏರಿಕೆ ಹೊಡೆತ ತಪ್ಪಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.