ETV Bharat / state

ಗಣಿನಾಡಿನಲ್ಲಿ ದೀಪಾವಳಿ ಸಂಭ್ರಮ : ತಟ್ಟದ ಬೆಲೆ ಏರಿಕೆ ಬಿಸಿ - ಬಳ್ಳಾರಿಯಲ್ಲಿ ದೀಪಾವಳಿ ಆಚರಣೆ

ಗಣಿನಾಡಿನಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಜೋರಾಗಿತ್ತು. ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹದಿಂದ ಸಾಕಷ್ಟು ಬೆಳೆಗಳು ನಾಶವಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಆದರೂ ಹಬ್ಬದ ಖರೀದಿ ಮಾತ್ರ ಕಡಿಮೆಯಾಗಿರಲಿಲ್ಲ.

ಗಣಿನಾಡಿನಲ್ಲಿ ದೀಪಾವಳಿ ಸಂಭ್ರಮ
author img

By

Published : Oct 28, 2019, 1:55 AM IST

ಬಳ್ಳಾರಿ: ಗಣಿನಾಡಿನಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಜೋರಾಗಿತ್ತು. ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹದಿಂದ ಸಾಕಷ್ಟು ಬೆಳೆಗಳು ನಾಶವಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಆದರೂ ಹಬ್ಬದ ಖರೀದಿ ಮಾತ್ರ ಕಡಿಮೆಯಾಗಿರಲಿಲ್ಲ.

ಚೆಂಡು ಹೂವು, ಬಾಳೆ ಎಲೆ, ವಿವಿಧ ಆಕಾರದ ಪಣತಿ, ಎಲೆ-ಅಡಿಕೆ, ಮಾವಿನ ಎಲೆ ಸೇರಿದಂತೆ ಇನ್ನಿತರೆ ಅಗತ್ಯ ವಸ್ತುಗಳ ಖರೀದಿಗೆ ಸಾರ್ವಜನಿಕರು ಮುಗಿಬಿದ್ದಿದ್ದರು.

ಗಣಿನಾಡಿನಲ್ಲಿ ದೀಪಾವಳಿ ಸಂಭ್ರಮ

ಅತ್ಯಾಕರ್ಷಣೆಯ ಕಳಸದ ಕಾಯಿ :

ನಗರದ ಬೆಂಗಳೂರು ರಸ್ತೆಯಲ್ಲಿ ವಿಶೇಷ ಕಳಸದ ಕಾಯಿಯನ್ನು ಮಾರಾಟ ಮಾಡಲಾಗುತ್ತೆ. ಆ ವಿಶೇಷ ತೆಂಗಿನಕಾಯಿ ಒಂದಕ್ಕೆ 30 ರೂ.

ತೆಂಗಿನಕಾಯಿ ‌ವ್ಯಾಪಾರಿ‌‌ ಮಧು ಮಾತನಾಡಿ, ದೀಪಾವಳಿ, ದಸರಾ ಹಬ್ಬಗಳಿಗೆ ದೂರದ ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ಇನ್ನಿತರೆ ದೊಡ್ಡದೊಡ್ಡ ನಗರಗಳಲ್ಲಿ ನಾವು ತಯಾರಿಸುವ ಈ ತೆಂಗಿನಕಾಯಿಗೆ ಬೇಡಿಕೆ ಇದೆ ಎಂದರು.

ಹೊಸಪೇಟೆಯಲ್ಲಿ ದೀಪಾವಳಿ ಸಂಭ್ರಮ :

ಹೊಸಪೇಟೆ ನಗರದಲ್ಲಿ ಮಾರುಕಟ್ಟೆಗಳು ಮತ್ತು ರಸ್ತೆಗಳು ಜನಜಂಗುಳಿಯಿಂದ ಕೂಡಿದ್ದವು. ಕಬ್ಬು , ಬಾಳೆದಿಂಡು ಹಾಗೂ ಚೆಂಡು ಹೂಗಳು ವ್ಯಾಪಾರ ಜೋರಾಗಿತ್ತು. ನೆರೆಯಿಂದಾಗಿ ಬೆಲೆ ಏರಿಕೆಯಾಗಿದ್ದರೂ ಹಬ್ಬದ ಸಂಭ್ರಮ ಮಾತ್ರ ಜೋರಾಗಿತ್ತು.

Intro:ದೀಪಾವಳಿ ಸಂಭ್ರಮದಲಿ ಮಿಂದ ಗಣಿನಾಡು
ಲಕ್ಷ್ಮೀಪೂಜೆಗೆಂದೇ ಬಳಸುವ ಕಳಸದ ಕಾಯಿಗೆ ಹೆಚ್ಚಿದ ಬೇಡಿಕೆ!
ಬಳ್ಳಾರಿ: ಬೆಳಕಿನ‌‌ ದೀಪಾವಳಿ ಹಬ್ಬದ ಸಂಭ್ರಮದಲಿ ಗಣಿನಾಡು ಬಳ್ಳಾರಿ ಜಿಲ್ಲೆಯ ಜನರು ಮಿಂದೆದ್ದರು.
ಜಿಲ್ಲೆಯ ಎಲ್ಲ ತಾಲೂಕಿನಾದ್ಯಂತ ಖರೀದಿ ಭರಾಟೆ ಜೋರಾಗಿತ್ತು.
ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಎದುರಾಗಿದ್ದರಿಂದ ಸಾಕಷ್ಟು ತೋಟದ ಬೆಳೆಗಳು ನಾಶಗೊಂಡಿದ್ದರ ಪರಿಣಾಮ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದರೂ ಕೂಡ ಖರೀದಿದಾರರ ಸಂಖ್ಯೆ‌ ಮಾತ್ರ‌
ಕಮ್ಮಿ ಏನಿರಲಿಲ್ಲ.
ಚೆಂಡು ಹೂವು, ಬಾಳೆದ ಎಲೆ, ವಿಧದ ಆಕರದ ಪಣತಿ,
ಎಲೆ -ಅಡಿಕೆ, ಮಾವಿನ ತೊಳೆ ಸೇರಿದಂತೆ ಇನ್ನಿತರೆ ಅಗತ್ಯ ವಸ್ತುಗಳ ಖರೀದಿಗೆ ಸಾರ್ವಜನಿಕರು ಮುಗಿಬಿದ್ದಿರೋದು ಎಲ್ಲೆಡೆ ಕಂಡುಬಂತು.

Body:ಅತ್ಯಾಕರ್ಷಣೆಯ ಕಳಸದ ಕಾಯಿ: ದೀಪಾವಳಿ ಹಬ್ಬದ ವಿಶೇಷವಾಗಿ ಲಕ್ಷ್ಮೀ ಪೂಜೆ ಮಾಡಲಾಗುತ್ತೆ. ಬಳ್ಳಾರಿ
ನಗರದ ಬೆಂಗಳೂರು ರಸ್ತೆಯಲ್ಲಿ ವಿಶೇಷ ಕಳಸದ ಕಾಯಿಯನ್ನು ಮಾರಾಟ ಮಾಡಲಾಗುತ್ತೆ. ಆ ವಿಶೇಷ ತೆಂಗಿನಕಾಯಿ ಒಂದಕ್ಕೆ 30 ರೂ.ಗೆ ಮಾರಾಟ ‌ಮಾಡ
ಲಾಗುತ್ತೆ.
ತೆಂಗಿನಕಾಯಿ ಮೇಲಿನ ಸಿಪ್ಪೆಯನ್ನು ‌ಕತ್ತಿಯಿಂದ ಕೆತ್ತಲಾಗುತ್ತೆ. ಅದನ್ನು ಸುಂದರವಾಗಿ ಕೆತ್ತಲಾಗುತ್ತೆ. ಮನೆ, ಅಂಗಡಿಗಳಲ್ಲಿ ಲಕ್ಷ್ಮೀ ಪೂಜೆ ಮಾಡಲಾಗುತ್ತೆಯಾದ್ರೂ ಆ ತೆಂಗಿನಕಾಯಿ ಯನ್ನು ತಾಮ್ರದ ಚರಗಿ ಮೇಲಿಟ್ಟು ಬಂಗಾರ ಅಥವಾ ಬೆಳ್ಳಿ ಯಿಂದ ತಯಾರಿಸಲಾದ ಲಕ್ಷ್ಮೀ ಮುಖವಾಡವನ್ನಿಟ್ಟು ವಿಶೇಷ ಪೂಜೆಯನ್ನು ನೆರವೇರಿಸಲಾಗುತ್ತೆ.
ತೆಂಗಿನಕಾಯಿ ‌ವ್ಯಾಪಾರಿ‌‌ ಮಧು ಅವರು ಮಾತನಾಡಿ, ದೀಪಾವಳಿ, ದಸರಾ ಹಬ್ಬಗಳಿಗೆ ದೂರದ ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ಇನ್ನಿತರೆ ದೊಡ್ಡದೊಡ್ಡ ನಗರಗಳಿಂದ
ಈ ವಿಶೇಷ ತೆಂಗಿನಕಾಯಿ ತಯಾರಿಕೆಗಾಗಿ‌ ಮುಂಗಡವಾಗಿ ಆರ್ಡರ್ ಮಾಡಲಾಗುತ್ತೆ. ಅದನ್ನು ತಯಾರಿಸಿ ಇಲ್ಲಿಂದಲೇ ಕಳುಹಿಸಿಕೊಡಲಾಗುತ್ತೆ ಎಂದರು.
ಲಕ್ಷ್ಮೀ ಪೂಜೆ ಹಾಗೂ ಆಯುಧ ಪೂಜೆಗೆಂದೇ ಈ ವಿಶೇಷ ತೆಂಗಿನಕಾಯಿಯನ್ನು ಬಳಸಲಾಗುತ್ತೆ. ಕಳೆದ ಎರಡು ದಿನ ಗಳಿಂದ ಅಂದಾಜು 1200 ತೆಂಗಿನಕಾಯಿಯನ್ನು ಮಾರಾಟ ಮಾಡಿರುವೆ. ಕಾಯಿಯನ್ನು ಈ ರೀತಿ ಕೆತ್ತನೆ ಮಾಡೋದರಿಂದ ತಾಮ್ರದ ಚರಗಿ ಮೇಲೆ ಸಮತಟ್ಟಾಗಿ ಕುಳಿತುಕೊಳ್ಳುತ್ತೆ. ಅದ್ಕೆ ಚಿನ್ನಾಭರಣದಿಂದ ಅಲಂಕರಿಸಿದ್ರೆ ಸಾಕು. ಅದರ ಅಂದವೋ, ಚಂದವೋ ವಿಭಿನ್ನ ರೀತಿಯಲ್ಲಿ ಕಾಣಿಸುತ್ತೆ. ಆಗಾಗಿ, ಈ ಕಾಯಿಗೆ ಎಲ್ಲಿಲ್ಲದ ಬೇಡಿಕೆಯಿದೆ ಎಂದ್ರು ತೆಂಗಿನಕಾಯಿ ವ್ಯಾಪಾರಿ ಮಧು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:ಪವರ್ ಡೈರೆಕ್ಟರ್ ನಲ್ಲಿ ವಿಡಿಯೊ ಕಳಿಸಿರುವೆ ಗಮನಿಸಿರಿ.
KN_BLY_3_DIWALI_SPECIAL_VISUALS_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.