ಬಳ್ಳಾರಿ: ಕೊರೊನಾ ಭೀತಿಯಿಂದ ಜಿಲ್ಲೆಯಲ್ಲಿ ನಡೆಬೇಕಿದ್ದ 13ನೇ ರಾಜ್ಯ ವಿದ್ಯಾರ್ಥಿ ನಾಟಕೋತ್ಸವದ ರಂಗತೋರಣ ರಂಗ ವೈಭವ ಯಾತ್ರೆಯನ್ನು ರದ್ದು ಮಾಡಲಾಗಿದ್ದು, ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸಿ ಕಲಾ ತಂಡಗಳು ಡೊಳ್ಳು ಬಾರಿಸಿದರೆ, ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು.
ನಗರದ ಡಾ.ಜೋಳದರಾಶಿ ದೊಡ್ಡನಗೌಡರ ರಂಗಮಂದಿರದಲ್ಲಿ ಮಾರ್ಚ್ 13 ರಿಂದ ರಾಜ್ಯ ವಿದ್ಯಾರ್ಥಿ ನಾಟಕೋತ್ಸವ ನಡೆಯುತ್ತಿದ್ದು, ಈ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಜಿಲ್ಲೆಗಳ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ನಿನ್ನೆ ಬೀದಿ ನಾಟಕ ಪ್ರದರ್ಶನ, ಪತ್ರಿಕಾ ಬಿಡುಗಡೆ ಮತ್ತು ರಂಗ ಬೆಳದಿಂಗಳು ಕಾರ್ಯಕ್ರಮ ನಡೆಸಿದ್ದಾರೆ. ಇದರಲ್ಲಿ ನೂರಾರು ಕಲಾ ತಂಡಗಳು ಮಾಸ್ಕ್ ಧರಿಸಿ ಡೊಳ್ಳು ಬಾರಿಸಿ ಕುಣಿದು ಕುಪ್ಪಳಿಸಿದರು.
ಆದರೆ ರಾಜ್ಯ ಸರ್ಕಾರ ಕೊರೊನಾ ವೈರಸ್ ನಿಯಂತ್ರಿಸುವ ಹಿನ್ನೆಲೆಯಲ್ಲಿ ಸುತ್ತೋಲೆ ಹೊರಡಿಸಿದ್ದು, ಯಾವುದೆ ಸಭೆ, ಸಮಾರಂಭ, ಜಾತ್ರೆ ಮಾಡದಂತ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಶಾಲಾ, ಕಾಲೇಜು, ವಿಶ್ವವಿದ್ಯಾಲಯ, ಜಿಮ್, ಈಜುಕೊಳ, ಜಾತ್ರೆ, ಕೋಚಿಂಗ್ ಸೆಂಟರ್ ಇನ್ನಿತರ ಪ್ರದೇಶಗಳಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಿಸಿದ್ದು, ರಂಗತೋರಣದ ರಂಗ ವೈಭವ ಯಾತ್ರೆ ರದ್ದು ಮಾಡಲಾಗಿದೆ.