ಹೊಸಪೇಟೆ: ನಗರದ ಶಾಂತಿನಿಕೇತನ ಹಾಗೂ ನೇತಾಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ಕ್ರೀಡಾಕೂಟ ಆಯೋಜನೆ ಮಾಡಲಾಗಿತ್ತು.
ಕಬಡ್ಡಿ, ಕಪ್ಪೆಯಾಟ, 100 ಮೀಟರ್ ಓಟದ ಸ್ಪರ್ಧೆ, ಉದ್ದ ಜಿಗಿತ ಆಟಗಳನ್ನು ಆಡಿ ಮಕ್ಕಳು ಸಂತಸಪಟ್ಟರು. ಈ ವೇಳೆ ಮಾತನಾಡಿದ ಶಿಕ್ಷಕಿ ನಾಗರತ್ನ, ಮಕ್ಕಳು 4 ಗೋಡೆಗಳ ಮಧ್ಯೆ ಶಿಕ್ಷಣವನ್ನು ಕಲಿಯುವುದಕ್ಕಿಂತ ಜನರ ಮಧ್ಯೆ ಹಾಗೂ ಕ್ರೀಡೆಗಳಿಂದ ಕಲಿತರೆ ಬೆಳವಣಿಗೆ ಸಾಧ್ಯ ಎಂದರು.
ಶಾಲೆಯಲ್ಲಿ ಮಾತ್ರ ಶಿಕ್ಷಕರು ಪಾಠಗಳನ್ನು ಓದುವುದು, ಬರೆಯುವುದು ಕಲಿಸಲು ಸಾಧ್ಯ. ಶಾಲೆಗಿಂತ ಅವರು ಸಮಾಜದಲ್ಲಿ ಮತ್ತು ಕುಟುಂಬದಲ್ಲಿ ಕಲಿಕೆ ಹೆಚ್ಚಾಗುತ್ತದೆ. ಅದಕ್ಕಾಗಿ ಈ ಮಕ್ಕಳಿಗೆ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿದೆ ಎಂದರು.