ಹೊಸಪೇಟೆ(ಬಳ್ಳಾರಿ): ಜಿಲ್ಲೆಯ ಸಂಡೂರು ತಾಲೂಕಿನ ಬಂಡ್ರಿ ಗ್ರಾಮದಲ್ಲಿ ಎಮ್ಮೆ ಮೈ ತೊಳೆಯಲು ಹೋಗಿ ಕೆರೆ ನೀರು ಪಾಲಾಗಿದ್ದ ಬಾಲಕ ಶವವಾಗಿ ಮಂಗಳವಾರ ಪತ್ತೆಯಾಗಿದ್ದಾನೆ.
ಬಾಲಕ ಬಂಡ್ರಿ ಗ್ರಾಮದ ಶಿವು (11) ಎಂದು ಗುರುತಿಸಲಾಗಿದೆ. ಸೋಮವಾರ ಸಂಜೆ ಎಮ್ಮೆ ತೊಳೆಯುವಾಗ ಕರು ನೀರಿನಲ್ಲಿ ಹೋಗಿದೆ. ಶಿವು ಆ ಕರು ಹಿಡಿಯಲು ಹೋದಾಗ ನೀರಿನಲ್ಲಿ ಮುಳುಗಿದ್ದಾನೆ. ಇದನ್ನು ಕಂಡ ಸ್ನೇಹಿತರಾದ ಅಜಯ್, ಬಸವ ನೀರಿಗಿಳಿದಿದ್ದಾರೆ. ಅಲ್ಲೇ ಇದ್ದ ಶಿವುನ ತಾಯಿ ಮಾರೆಮ್ಮ ಸ್ನೇಹಿತನ್ನು ರಕ್ಷಿಸಿದ್ದಾಳೆ.
ಈ ಕುರಿತು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.