ಬಳ್ಳಾರಿ: ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಇರುವ ಕೋವಿಡ್ ಸೆಂಟರ್ನಿಂದ 94 ವರ್ಷ ಮತ್ತು 86 ವರ್ಷಗಳ ಇಬ್ಬರು ಹಿರಿಯ ಜೀವಗಳು ಕೋವಿಡ್ ವಿರುದ್ಧ ಹೋರಾಡಿ ಗೆದ್ದು ಬಂದಿದ್ದಾರೆ.
ಕೊರೊನಾ ಸೋಂಕು ತಗುಲಿದರೆ ಭಯ ಪಡುವ ಅಗತ್ಯವಿಲ್ಲ. ಬದಲಿಗೆ ಧನಾತ್ಮಕ ಆಲೋಚನೆ ಮಾಡಿ ಚಿಕಿತ್ಸೆ ಪಡೆದುಕೊಂಡು ಹೊರ ಬಂದವರು ಸಾಕಷ್ಟು ಜನರಿದ್ದಾರೆ ಎಂಬುದನ್ನು ಈ ಇಬ್ಬರು ಅಜ್ಜಿಯರು ಸಾಬೀತುಪಡಿಸಿದ್ದಾರೆ.