ಬಳ್ಳಾರಿ: ಉತ್ತರ ಕರ್ನಾಟದಾದ್ಯಂತ ಭಾರೀ ಮಳೆ ಹಿನ್ನೆಲೆ ಹೊಸಪೇಟೆ ತಾಲೂಕು ತುಂಗಭದ್ರಾ ಜಲಾಶಯದಿಂದ 32 ಗೇಟ್ಗಳ ಮೂಲಕ 1 ಲಕ್ಷ 80 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡಲಾಗಿದೆ.
ಜಲಾಶಯದಿಂದ ಭಾರೀ ಪ್ರಮಾಣದ ನೀರು ಹೊರ ಬಿಟ್ಟ ಪರಿಣಾಮ ತುಂಗಭದ್ರ ನದಿಯ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿದ್ದು, ಕಂಪ್ಲಿ, ಕೋಟೆ ಪ್ರದೇಶ, ಸಣಾಪುರ, ಇಟಿಗಿ, ಸೂಗುರು, ಮಣ್ಣೂರು, ಸಿರಿಗೇರಿ ಹಳ್ಳಿಗಳಲ್ಲಿನ ಸಾವಿರಾರು ಎಕರೆ ಭತ್ತ, ಕಬ್ಬು, ಬಾಳೆ, ಮೆಕ್ಕೆಜೋಳ ಇನ್ನಿತರ ಬೆಳೆಗಳು ನೀರಿನಲ್ಲಿ ಮುಳುಗಿವೆ. ಇಟಿಗಿ ಗ್ರಾಮಕ್ಕೆ ಹೋಗುವ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿ ಜನರು ಪರದಾಡುವಂತಾಗಿದೆ.
ಇನ್ನು ಇಟಿಗಿ ಗ್ರಾಮದ ಸಂಗಮೇಶ್ವರ ದೇವಸ್ಥಾನದ ಹತ್ತಿರ ನೀರು ಹೆಚ್ಚಾಗಿ ಬಂದಿದ್ದರಿಂದ ರಮಣೀಯ ದೃಶ್ಯ ಕಂಡು ಬಂದಿದ್ದು, ಜನರು ಫೋಟೋ ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ.