ETV Bharat / state

ಬಳ್ಳಾರಿ ತಾ. ಪಂ. ಸಭೆಯಲ್ಲಿ ಕೇಳಿಬಂದ ಸಮಸ್ಯೆಗಳು: ಸದಸ್ಯರು, ಅಧಿಕಾರಿಗಳಿಂದ ನಿರ್ಲಕ್ಷ್ಯ ಆರೋಪ - ಬಳ್ಳಾರಿ ಕೆಡಿಪಿ ಸಭೆ ಸುದ್ದಿ

ಬಳ್ಳಾರಿ ತಾಲೂಕು ಪಂಚಾಯತ್​ಯಲ್ಲಿ ಬೆಳಗ್ಗೆ 11ಕ್ಕೆ ಆರಂಭವಾಗಬೇಕಿದ್ದ ಕೆಡಿಪಿ ಸಭೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಧ್ಯಾಹ್ನ 12 ಅದ್ರೂ ಆರಂಭವಾಗಿರಲಿಲ್ಲ. ಜನರ ಸಮಸ್ಯೆಗಳಿಗೆ ಚರ್ಚಿಸಬೇಕಿದ್ದ ತಾ.ಪಂ ಸದಸ್ಯರು, ಯಾರೊಬ್ಬರು ಸಭೆಗೆ ಹಾಜರಾಗದಿರುವುದು ತಾಲೂಕು ಪಂಚಾಯತ್​ ಆಡಳಿತದ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿತ್ತು.

ಬಳ್ಳಾರಿ ತಾಲೂಕು ಪಂಚಾಯತಿ ಕೆಡಿಪಿ ಸಭೆ
author img

By

Published : Nov 7, 2019, 9:13 PM IST

ಬಳ್ಳಾರಿ: ಜನರ ಸಮಸ್ಯೆಗಳ ಕುರಿತು ಚರ್ಚಿಸಿ ಸ್ಪಂದಿಸಬೇಕಾದ ತಾಲೂಕು ಪಂಚಾಯತ್ ಅಧಿಕಾರಿಗಳ ಸಮಯ ಪಾಲನೆಯ ಕೊರತೆಯಿಂದಾಗಿ ಬೆಳಗ್ಗೆ 11ಕ್ಕೆ ಪ್ರಾರಂಭವಾಗಬೇಕಿದ್ದ ಕೆಡಿಪಿ ಸಭೆ 12 ಆದ್ರೂ ಪ್ರಾರಂಭವಾಗಿರಲಿಲ್ಲ. ಸಮಯ ಪಾಲನೆಯಲ್ಲಿ ಅಧಿಕಾರಿಗಳು ಮತ್ತು ಸದಸ್ಯರ ನಿರ್ಲಕ್ಷ್ಯತನ ಎದ್ದು ಕಾಣುತ್ತಿತ್ತು.

ಅಲ್ಲದೆ 31 ಇಲಾಖೆಯ ಅಧಿಕಾರಿಗಳು ಮತ್ತು 39 ತಾಲೂಕು ಪಂಚಾಯತ್​ ಸದಸ್ಯರು ಸಭೆಯಲ್ಲಿ ಹಾಜರಿರಬೇಕಾಗಿತ್ತು. ಆದರೆ ಬರೀ 30 ಅಧಿಕಾರಿಗಳು ಮತ್ತು ತಾ.ಪಂ ಅಧ್ಯಕ್ಷೆ, ಉಪಾಧ್ಯಕ್ಷೆ ಹಾಗೂ ಇಒ ಹಾಜರಿದ್ದರು. ಸದಸ್ಯರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.

ಬಳ್ಳಾರಿ ತಾಲೂಕು ಪಂಚಾಯತ್​ ಕೆಡಿಪಿ ಸಭೆ

ತಾಲೂಕಿನಲ್ಲಿ ಎಸ್.ಟಿ ಹಾಸ್ಟೆಲ್​ಗಳ ಹೆಚ್ಚಳ

ಬಳ್ಳಾರಿ ತಾಲೂಕಿನಲ್ಲಿ 1800 ಎಸ್.ಟಿ ವಿದ್ಯಾರ್ಥಿಗಳು ಹಾಸ್ಟೆಲ್ ಸೌಲಭ್ಯ ಪಡೆದುಕೊಂಡಿದ್ದಾರೆ. ಮೂಲಭೂತ ಸೌಲಭ್ಯಗಳನ್ನು ನೀಡುತ್ತಿದ್ದೇವೆ. ಆದ್ರೆ ಪ್ರತ್ಯೇಕವಾಗಿ ಒಂದು ಹಾಸ್ಟೆಲ್ ಗೆ 250 ವಿದ್ಯಾರ್ಥಿಗಳ ಇರುವಂತೆ ಮಾಡಿದರೇ ಅನುಕೂಲ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಇಒ ಅವರಿಗೆ ತಿಳಿಸಿದರು.

ಕುಡಿಯುವ ನೀರಿನ ಸಮಸ್ಯೆ

ಬಳ್ಳಾರಿ ತಾಲೂಕಿನ ಶಂಕರಬಂಡೆ ಮತ್ತು ಬಸರಕೋಡ ಗ್ರಾಮದಲ್ಲಿ ನೀರಿನ ಸಮಸ್ಯೆ ಇದೆ. ಪ್ರತಿನಿತ್ಯ ನನ್ನ (ಇಒ) ಮೊಬೈಲ್ ಗೆ ಕರೆಗಳು ಬರ್ತಿವೆ ಎಂದರು. ಅದಕ್ಕೆ ಅಧಿಕಾರಿಗಳು ಅದನ್ನು ಸರಿಪಡಿಸುತ್ತೇವೆ ಎನ್ನುವ ಉತ್ತರ ನೀಡಿದ್ರು.

ಬೆಳೆಹಾನಿ ಪರಿಹಾರ ಇಲ್ಲ

ಈ ಅತಿವೃಷ್ಟಿಯಿಂದ ಬೆಳೆಹಾನಿಯಾದ ರೈತರ ಭೂಮಿಗಳ ಸರ್ವೇ ಕೆಲಸ ಇನ್ನೂ ಮುಗಿದಿಲ್ಲ. ಇದರಿಂದ ರೈತರಿಗೆ ಪರಿಹಾರ ಸಿಕ್ಕಿಲ್ಲವೆಂದು ಇಒ ಕೇಳಿದರು. ಕೆಲ ಪ್ರದೇಶದ ರೈತರ ಭೂಮಿಗಳನ್ನು ಸರ್ವೇ ಮಾಡಿ ಪರಿಹಾರಕ್ಕಾಗಿ ಜಿಲ್ಲಾಧಿಕಾರಿ ಕಚೇರಿಗೆ ಕಳಿಸಿದ್ದೇವೆ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದರು.

ಶಾಲೆಗಳಲ್ಲಿ ಕಟ್ಟಡಗಳ ಸಮಸ್ಯೆ

ತಾಲೂಕಿನ ಹಳೆ ಯರಿಗುಡಿ ಗ್ರಾಮದ ಶಾಲೆಯ ಹಳೆಯ ಕಟ್ಟಡಗಳನ್ನು ಕೆಡವಲು​ ಸಿ.ಆರ್.ಡಿ ಪತ್ರ ಬರೆಯಲು ಇಒ, ಡಿಡಿಪಿಐಗೆ ಸೂಚಿಸಿದರು. ಮಕ್ಕಳು ಆಟವಾಡಲು ಹೋದಾಗ ಏನಾದರೂ ಅನಾಹುತ ಆದರೆ ಅದಕ್ಕೆ ನೀವೇ ಹೊಣೆ ಎಂದು ಇಒ ಎಚ್ಚರಿಕೆ ನೀಡಿದರು.

ಆರ್.ಟಿ.ಇ ಮಕ್ಕಳ ಪ್ರತ್ಯೇಕತೆ

ಬಳ್ಳಾರಿ ಪೂರ್ವ ವಲಯದ ಶಾಲೆಗಳಲ್ಲಿ ಆರ್.ಟಿ.ಇ ಅಡಿಯಲ್ಲಿ ಆಯ್ಕೆಯಾದ ಮಕ್ಕಳನ್ನು ಪ್ರತ್ಯೇಕವಾಗಿ ಕೂರಿಸುತ್ತಿದ್ದಾರೆ ಎನ್ನುವ ಮಾಹಿತಿ ಇದೆ ಎಂದು ಸಭೆಗೆ ಇಒ ತಿಳಿಸಿದರು. ಇದಕ್ಕೆ ಡಿಡಿಪಿಐ ಎಚ್ಚರವಹಿಸಬೇಕೆಂದು ತಿಳಿಸಿದರು. ಸಭೆಯಲ್ಲಿ ಇಒ ಬಸಪ್ಪ, ಅಧ್ಯಕ್ಷೆ ರಮಿಜಾ.ಬಿ, ಉಪಾಧ್ಯಕ್ಷೆ ಪುಷ್ಪವತಿ ಮತ್ತು ಅಧಿಕಾರಿಗಳು ಮತ್ತು ಪಿಡಿಒಗಳು ಹಾಜರಿದ್ದರು.

Intro:

ಸಮಯಕ್ಕೆ ಸರಿಯಾಗಿ ತಾಪಂ ಸಭೆ ಆರಂಭವಾಗಲ್ಲ,
ಚೇಂಬರ್ ನಲ್ಲಿ ಕಾಲ‌ಕಳೆಯುವ ಅಧಿಕಾರಿ ಮತ್ತು ಅಧ್ಯಕ್ಷೆ, ಉಪಾಧ್ಯಕ್ಷೆ.‌

ಆರ್.ಟಿ.ಇ ಅಡಿಯಲ್ಲಿ ಆಯ್ಕೆಯಾದ ಮಕ್ಕಳನ್ನು ಪ್ರತ್ಯೇಕ ಕುರಿಸುವುದು ಸರಿಯಲ್ಲ. ಇಒ ಬಳ್ಳಾರಿ ಪೂರ್ವ ವಲಯದ ಡಿಡಿಪಿಐಗೆ ಹೆಚ್ಚರಿಕೆ

Body:.

ಬಳ್ಳಾರಿ ತಾಲೂಕು ಪಂಚಾಯತ್ ಕೆಡಿಪಿ ಸಭೆ ಇಂದು ಬೆಳಿಗ್ಗೆ 11 ಕ್ಕೆ ಪ್ರಾರಂಭವಾಗಬೇಕಿತ್ತು ಆದ್ರೇ ತಾಪಂ ಇಒ ಮತ್ತು ತಾಪಂ ಅಧ್ಯಕ್ಷೆ, ಉಪಾಧ್ಯಕ್ಷೆ 12 ಆದ್ರೇ ಸಹ ಸಭೆ ಆರಂಭ ಮಾಡಿಲ್ಲ, ಮಾಧ್ಯಮದವರು ಕೇಳಿದ್ರೇ ಇನ್ನು ಅಧಿಕಾರಿಗಳು ಬಂದಿಲ್ಲ ಎನ್ನುವ ಮಾಹಿತಿ ಹಾಗೇ ತಾಪಂಯಲ್ಲಿ ಕರೆಂಟ್ ಇಲ್ಲದ ಕಾರಣ ಸಭೆಯನ್ನು ತಡವಾಗಿ ಪ್ರಾರಂಭ ಮಾಡಿದ್ದಾರೆ ಎನ್ನುವ ಮಾಹಿತಿ ಇಲ್ಲಿ ಸಿಬ್ಬಂದಿಗಳಿಂದ,
ಈಟಿವಿ ಭಾರತ ನ ಪ್ರತಿನಿಧಿ ಪ್ರಶ್ನೆ ಮಾಡಿದಾಗ ಆಗ ಎದ್ದು ಸಭೆಯನ್ನು ಆರಂಭ ಮಾಡಲು ಎದ್ದು ಬಂದ ಇಒ ಮತ್ತು ಅಧ್ಯಕ್ಷೆ, ಉಪಾಧ್ಯಕ್ಷೆ ಇನ್ನಿತರರು‌.

31 ಇಲಾಖೆಯ ಅಧಿಕಾರಿಗಳು ಮತ್ತು 39 ತಾಲೂಕು ಪಂಚಾಯತಿ ಸದಸ್ಯರು ಬರಬೇಕಾಗಿತ್ತು ಆದ್ರೇ ಇದರಲ್ಲಿ ಬರಿ 30 ಅಧಿಕಾರಿಗಳು ಮತ್ತು ತಾಲೂಕು ಪಂಚಾಯ್ ಅಧ್ಯಕ್ಷೆ, ಉಪಾಧ್ಯಕ್ಷೆ ಮತ್ತು ಇಒ ಹಾಜರಿದ್ದರು.
ತಾಲೂಕು ಪಂಚಾಯತ ಒಬ್ಬ ಸದಸ್ಯರು ಹಾಜರಾಗಿರಲಿಲ್ಲ.

ತಾಲೂಕಿನಲ್ಲಿ ಎಸ್.ಟಿ ಹಾಸ್ಟೆಲ್ ಗಳು ಹೆಚ್ಚಿಸಬೇಕ :-

ಬಳ್ಳಾರಿ ತಾಲೂಕಿನಲ್ಲಿ 1800 ಎಸ್.ಟಿ ವಿದ್ಯಾರ್ಥಿಗಳು ಹಾಸ್ಟೆಲ್ ಸೌಲಭ್ಯ ಪಡೆದುಕೊಂಡಿದ್ದಾರೆ. ಮೂಲಭೂತ ಸೌಲಭ್ಯಗಳನ್ನು ನೀಡುತ್ತಿದ್ದೆವೆ ಆದ್ರೇ ಪ್ರತ್ಯೇಕವಾಗಿ ಒಂದು ಹಾಸ್ಟೆಲ್ ಗೆ 250 ವಿದ್ಯಾರ್ಥಿಗಳ ಇರುವಂತೆ ಮಾಡಿದರೇ ಅನುಕೂಲ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಇಒ ಅವರಿಗೆ ತಿಳಿಸಿದರು.

ಕುಡಿಯುವ ನೀರಿನ ಸಮಸ್ಯೆ :-

ಬಳ್ಳಾರಿ ತಾಲೂಕಿನ ಶಂಕರ ಬಂಡೆ ಮತ್ತು ಬಸರಕೋಡ ಗ್ರಾಮದಲ್ಲಿ ನೀರಿನ ಸಮಸ್ಯೆ ಇದೆ ಪ್ರತಿನಿತ್ಯ ನನಗೆ ( ಇಒ ) ಮೊಬೈಲ್ ಗೆ ಪೋನ್ ಗಳು ಬರ್ತಿವೆ ಎಂದರು ಅದಕ್ಕೆ ಅಧಿಕಾರಿಗಳು ಅದನ್ನು ಸರಿಪಡಿಸುತ್ತೆವೆ ಎನ್ನುವ ಉತ್ತರ ನೀಡಿದರು.

ಬೆಳೆಹಾನಿ ಪರಿಹಾರ ಇಲ್ಲ :-

ಈ ಅತಿವೃಷ್ಟಿಯಿಂದ ಬೆಳೆಹಾನಿಯಾದ ರೈತರ ಭೂಮಿಗಳನ್ನು ಇನ್ನು ಸರ್ವೆ ಮಾಡುತ್ತಿರುವ ಗ್ರಾಮಲೆಕ್ಕಾದಿಕಾರಿಗಳು ಇನ್ನು ಸರ್ಕಾರದಿಂದ ರೈತರಿಗೆ ಪರಿಹಾರ ಸಿಗಲಿಲ್ಲ ಎನ್ನುವ ಮಾಹಿತಿ.
ಜಿಲ್ಲಾಕಾರಿಗಳಿಗೆ ಕೆಲ ಪ್ರದೇಶ ರೈತರ ಭೂಮಿಗಳನ್ನು ಸರ್ವೆ ಮಾಡಿ ಪರಿಹಾರಕ್ಕಾಗಿ ಜಿಲ್ಲಾಧಿಕಾರಿ ಕಚೇರಿಗೆ ಕಳಿಸಿದ್ದೆವೆ ಎನ್ನುವ ಅಧಿಕಾರಿಗಳು ಇಒಗೆ ತಿಳಿಸಿದರು.

ಬಳ್ಳಾರಿ ಪೂರ್ವ ವಲಯದ ಶಾಲೆಗಳಲ್ಲಿ ಕಟ್ಟಡಗಳ ಸಮಸ್ಯೆ :-

ಬಳ್ಳಾರಿ ತಾಲೂಕಿನ ಹಳೆ ಯರಿಗುಡಿ ಗ್ರಾಮದ ಶಾಲೆಯ ಹಳೆಯ ಕಟ್ಟಡಗಳನ್ನು ಡೆಮಾಲಿಸ್ಟ್ ಮಾಡಲು ಸಿ.ಆರ್.ಡಿ ಪತ್ರ ಬರೆಯಲು ಇಒ, ಡಿಡಿಪಿಗೆ ತಿಳಿಸಿದರು. ಮಕ್ಕಳು ಆಟವಾಡಲು ಹೋದಾಗ ಏನಾದ್ರೂ ಅನಾಹುತ ಆದ್ರೇ ಅದಕ್ಕೆ ನೀವೆ ಹೊಣೆ ಎಂದು ಇಒ ಬಳ್ಳಾರಜ ಪೂರ್ವ ವಲಯದ ಡಿಡಿಪಿಐಗೆ ತಿಳಿಸಿದರು.

ಆರ್.ಟಿ.ಇ ಮಕ್ಕಳನ್ನು ಪ್ರತ್ಯೇಕ ಕುಳಿಸುವ ಸರಿಯಲ್ಲ. :-

ಬಳ್ಳಾರಿ ಪೂರ್ವ ವಲಯದ ಶಾಲೆಗಳಲ್ಲಿ ಆರ್.ಟಿ.ಇ ಅಡಿಯಲ್ಲಿ ಆಯ್ಕೆಯಾದ ಮಕ್ಕಳನ್ನು ಪ್ರತ್ಯೇಕವಾಗಿ ಕುರಿಸುತ್ತಿದ್ದಾರೆ ಎನ್ನುವ ಮಾಹಿತಿ ನನಗೆ ( ಇಒ) ಮೊಬೈಲ್ ಮೂಲಕ ಕರೆಗಳು ಬಂದಿದ್ದೆ ಎಂದು ತಿಳಿಸಿದರು. ಇದಕ್ಕೆ ಡಿಡಿಪಿಐ ಹೆಚ್ಚರವಹಿಸಬೇಕೆಂದು ತಿಳಿಸಿದರು.

Conclusion:ಈ ಸಭೆಯಲ್ಲಿ ಇಒ ಬಸಪ್ಪ, ಅಧ್ಯಕ್ಷೆ ರಮಿಜಾ.ಬಿ, ಉಪಾಧ್ಯಕ್ಷೆ ಪುಷ್ಪವತಿ ಮತ್ತು ಅಧಿಕಾರ, ಪಿಡಿಒಗಳು ಹಾಜರಿದ್ದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.