ಬಳ್ಳಾರಿ: ಸನ್ಮಾರ್ಗ ಗೆಳೆಯರ ಬಳಗದಿಂದ ಜಿಲ್ಲೆಯ ಸಿರಗುಪ್ಪ ತಾಲೂಕಿನ ಸಿರಿಗೇರಿ ಹತ್ತಿರದ ಕೊಂಚೆಗೇರೆ ಗ್ರಾಮದ ನಿವಾಸಿಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು.
ಗ್ರಾಮದ 400 ಜನರಿಗೆ 5 ಕೆ.ಜಿ ಅಕ್ಕಿ ,1 ಕೆ.ಜಿ ಬೇಳೆ, 1 ಲೀ. ಎಣ್ಣೆ, 1 ಕೆ.ಜಿ ಉಪ್ಪು, 1 ಕೆ.ಜಿ ಗೋಧಿ ಉಚಿತವಾಗಿ ನೀಡಿದ್ದಾರೆ. ಈ ಸಮಯದಲ್ಲಿ ಗ್ರಾಮದ ಜನರನ್ನು ಉದ್ದೇಶಿಸಿ ಸಿರಿಗೇರಿ ಪೊಲೀಸ್ ಠಾಣೆಯ ಪಿ.ಎಸ್.ಐ ಅಮರೇಗೌಡ್ರು ಅವರು ಮಾತನಾಡಿ, ಗ್ರಾಮದಲ್ಲಿ ಯಾರು ಸಹ ಬಟ್ಟಿ ಸಾರಾಯಿ ಕುಡಿಯಬೇಡಿ. ಹಾಗೆ ಬೇರೆ ಊರುಗಳಿಂದ ಯಾರಾದ್ರೂ ಬಂದರೆ ಮಾಹಿತಿ ನೀಡಿ. ಗ್ರಾಮದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಮುಖಕ್ಕೆ ಬಟ್ಟೆಕಟ್ಟಿಕೊಳ್ಳಿ, ರೈತರು ಕೂಲಿಗೆ, ಹೊಲಗದ್ದೆಗಳಿಗೆ ಹೋಗುವಾಗ ಟಾಟಾಎಸಿಗಳಲ್ಲಿ ಗುಂಪು ಗುಂಪಾಗಿ ಪಯಣಮಾಡಬೇಡಿ ಎಂದರು.
ಸನ್ಮಾರ್ಗ ಗೆಳೆಯರ ಬಳಗದವರು ಗ್ರಾಮಕ್ಕೆ ಬಂದು 400 ರೇಷನ್ ಕಿಟ್ಗಳನ್ನು ಉಚಿತವಾಗಿ ವಿತರಣೆ ಮಾಡಿದ್ದರಿಂದ ನಿಮಗೆಲ್ಲರಿಗೂ ಅನುಕೂಲಕರವಾಗಿದೆ. ಹಾಗಾಗಿ ಈ ತಂಡಕ್ಕೆ ಧನ್ಯವಾದಗಳು ಎಂದರು.