ETV Bharat / state

ಬಳ್ಳಾರಿ DAR ಪೊಲೀಸ್ ಕಾನ್ಸ್​ಟೇಬಲ್ ಅನುಮಾನಾಸ್ಪದ ಸಾವು - ರಾಡ್‌ನಿಂದ ಹಲ್ಲೆ ನಡೆಸಿ ಕೊಲೆ

ಬಳ್ಳಾರಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಕಾನ್ಸ್​ಟೇಬಲ್ ಜಾಫರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

police constable
ಜಾಫರ್
author img

By

Published : Mar 23, 2023, 8:25 AM IST

Updated : Mar 23, 2023, 8:41 AM IST

ಬಳ್ಳಾರಿ: ಇಲ್ಲಿನ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್) ಪೊಲೀಸ್ ಕಾನ್ಸ್​ಟೇಬಲ್ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು, ರಾಡ್‌ನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಜಾಫರ್ ಮೃತ ಕಾನ್ಸ್​ಟೇಬಲ್​.

ಪೊಲೀಸ್‌ ವಸತಿ ಗೃಹದಲ್ಲಿ ಬುಧವಾರ ರಾತ್ರಿ ಇವರು​ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಕಿವಿಯಲ್ಲಿ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಗಾಂಧಿನಗರ ಪೊಲೀಸರು ಮತ್ತು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

2009 ರಲ್ಲಿ ಡಿಎಆರ್ ಪೊಲೀಸ್ ಕಾನ್ಸ್​ಟೇಬಲ್ ಆಗಿ ನೇಮಕವಾಗಿದ್ದ ಜಾಫರ್, 2ನೇ ಮದುವೆಯಾಗಿದ್ದರು. 2ನೇ ಪತ್ನಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರ ಮೊದಲ ಹೆಂಡತಿ ಮುಸ್ಲಿಂ, ಎರಡನೇ ಹೆಂಡತಿ ಹಿಂದು ಎಂಬ ಮಾಹಿತಿ ಲಭ್ಯವಾಗಿದೆ. ಮೊದಲ ಹೆಂಡತಿಯನ್ನು ತವರು ಮನೆಯಲ್ಲಿ ಬಿಟ್ಟಿದ್ದ ಇವರು ಕಳೆದ ಕೆಲವು ದಿನಗಳ ಹಿಂದೆ 2ನೇ ಪತ್ನಿ ಜತೆಗೂ ಜಗಳ ಮಾಡಿಕೊಂಡಿದ್ದರಂತೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಪೊಲೀಸರನ್ನೇ ಅಪಹರಿಸಿ ಹಲ್ಲೆ ಆರೋಪ: ಯೂಟ್ಯೂಬ್ ಪತ್ರಕರ್ತ ಸೇರಿ ಐವರ ಸೆರೆ

ಇನ್ನೊಂದೆಡೆ, ನಿನ್ನೆ ಕಲಬುರಗಿ ನಗರದ ಹಾಗರಗಾ ಕ್ರಾಸ್ ಬಳಿ ಮಹಿಳಾ ಸಾಮಾಜಿಕ ಕಾರ್ಯಕರ್ತೆಯನ್ನು ಭೀಕರವಾಗಿ ಹತ್ಯೆಗೈಯ್ಯಲಾಗಿದೆ. ಮಜತ್ ಸುಲ್ತಾನ್ (35) ಕೊಲೆಯಾದ ಮಹಿಳೆ. ಈಕೆಯ ಬೈಕ್‌ಗೆ ಕಾರ್‌ನಿಂದ ಗುದ್ದಿ ನಂತರ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ. ಜಂಜಂ ಕಾಲೋನಿಯ ನಿವಾಸಿಯಾಗಿದ್ದ ಮಜತ್ ಸುಲ್ತಾನ್, ಸಾಮಾಜಿಕ ಕಾರ್ಯಕರ್ತೆ ಹಾಗೂ ನ್ಯಾಯವಾದಿಯಾಗಿ ಕೆಲಸ ಮಾಡುತ್ತಿದ್ದರು‌. ಆಸ್ತಿ ವಿಚಾರವಾಗಿ ಕೊಲೆ‌ ಮಾಡಲಾಗಿದೆ ಎಂದು ಮೃತ ಮಜತ್ ಸುಲ್ತಾನ್ ಅವರ ಪತಿ ಸದ್ದಾಂ ಆರೋಪಿಸಿದ್ದಾರೆ.

ಈ ಹಿಂದಿನ ಪ್ರಕರಣಗಳು: ಆಗಸ್ಟ್​ 23, 2021 ರಂದು ಬಂದೂಕು ಕ್ಲೀನ್ ಮಾಡುವಾಗ ಮಿಸ್ ಫೈರಿಂಗ್ ಆಗಿ ಪೊಲೀಸ್ ಕಾನ್ಸ್‌ಟೇಬಲ್ ಮೃತಪಟ್ಟಿರುವ ಘಟನೆ ದಾವಣಗೆರೆಯ ಡಿಆರ್​ಆರ್ ಶಸ್ತ್ರಾಗಾರದಲ್ಲಿ ನಡೆದಿತ್ತು. ಚನ್ನಗಿರಿ ತಾಲೂಕಿನ ಮಲಹಾಳ್ ಗ್ರಾಮದ ನಿವಾಸಿ ಚೇತನ್ ಆರ್ (28) ಮೃತ ಪೊಲೀಸ್ ಕಾನ್ಸ್‌ಟೇಬಲ್. 2012ರ ಬ್ಯಾಚ್​ನಲ್ಲಿ ಆಯ್ಕೆಯಾಗಿದ್ದ ಚೇತನ್ ಅವರು ಎಂದಿನಂತೆ ಇಂದು ಶಸ್ತ್ರಾಸ್ತ್ರ ಮೀಸಲು ಪಡೆಯಲ್ಲಿ ಬಂದೂಕುಗಳನ್ನು ಸ್ವಚ್ಛಗೊಳಿಸುತ್ತಿರುವಾಗ ಆಕಸ್ಮಿಕವಾಗಿ ಬಂದೂಕಿನಿಂದ ಹೊರ‌ಬಂದ ಗುಂಡು ಅವರ ಕತ್ತು ಸೀಳಿತ್ತು.

ಇದನ್ನೂ ಓದಿ: ಮಿಸ್ ಫೈರಿಂಗ್: ಕಾನ್ಸ್​ಟೇಬಲ್​ ಸಾವು, ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಕಳೆದ ವರ್ಷದ ಆಗಸ್ಟ್​ 30 ರಂದು ಮಹಿಳಾ ಪೊಲೀಸ್ ಕಾನ್ಸ್​ಟೇಬಲ್​ವೊಬ್ಬರು ಬಾವಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದರು. ಯಡ್ರಾಮಿ ತಾಲೂಕಿನ ಸುಂಬಡ್ ಗ್ರಾಮದಲ್ಲಿ ಘಟನೆ ನಡೆದಿತ್ತು. ಸುರೇಖಾ ಬಿರಾದಾರ (34) ಮೃತ ಮಹಿಳಾ ಪೊಲೀಸ್ ಸಿಬ್ಬಂದಿ. ಇವರು 2008ರಲ್ಲಿ ಪೊಲೀಸ್ ಸೇವೆಗೆ ಆಯ್ಕೆಯಾದ ಬಳಿಕ 2010ರಲ್ಲಿ ಪೊಲೀಸ್ ಕಾನ್ಸ್​ಟೇಬಲ್​​ ಮಲ್ಲಿನಾಥ ಎಂಬುವರನ್ನು ಮದುವೆಯಾಗಿದ್ದರು. ಇವರಿಗೆ 5 ವರ್ಷದ ಗಂಡು ಮಗು ಹಾಗೂ 4 ವರ್ಷದ ಹೆಣ್ಣು ಮಗು ಇತ್ತು.

ಇದನ್ನೂ ಓದಿ : ಕಲಬುರಗಿ: ಅನುಮಾನಾಸ್ಪದ ರೀತಿಯಲ್ಲಿ ಮಹಿಳಾ ಪೊಲೀಸ್ ಕಾನ್ಸ್​ಟೇಬಲ್​​​​​​ ಸಾವು

Last Updated : Mar 23, 2023, 8:41 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.