ETV Bharat / state

ಪ್ರೇಕ್ಷಕರಿಗೆ ಭರ್ಜರಿ ಸಿನಿಮಾ ಟಿಕೆಟ್ ಆಫರ್ ನೀಡಿದ ಚಿತ್ರಮಂದಿರ.. ಒಂದು ಟಿಕೆಟ್​ ಕೊಂಡರೆ ಮತ್ತೊಂದು ಫ್ರೀ - ಬಳ್ಳಾರಿ ಲೇಟೆಸ್ಟ್​ ನ್ಯೂಸ್

ಬಳ್ಳಾರಿ ನಗರದಲ್ಲಿರುವ ನಟರಾಜ ಚಿತ್ರಮಂದಿರ ಪ್ರೇಕ್ಷಕರಿಗೆ ಭರ್ಜರಿ ಆಫರ್​ ನೀಡಿದ್ದು, ಈ ಮೂಲಕ ಜನರನ್ನು ಥಿಯೇಟರ್​ಗಳತ್ತ ಸೆಳೆಯುವ ಪ್ರಯತ್ನ ಮಾಡುತ್ತಿದೆ.

ಪ್ರೇಕ್ಷಕರಿಗೆ ಭರ್ಜರಿ ಸಿನಿಮಾ ಟಿಕೆಟ್ ಆಫರ್ ನೀಡಿದ ಚಿತ್ರಮಂದಿರ
Bellary Cinema Theatre given special offer to audience
author img

By

Published : Feb 17, 2021, 12:30 PM IST

ಬಳ್ಳಾರಿ: ಕೊರೊನಾ ನಂತರ ಕೇಂದ್ರ ಸರ್ಕಾರ ಚಿತ್ರಮಂದಿರಗಳ ಪ್ರವೇಶಾತಿಗೆ ಅವಕಾಶ ನೀಡಿದ್ದು, ಈ ಹಿನ್ನೆಲೆಯಲ್ಲಿ ನಗರದಲ್ಲಿರುವ ಈ ಸಿನಿಮಾ ಮಂದಿರವೊಂದು ಭರ್ಜರಿ ಟಿಕೆಟ್ ಆಫರ್​ ನೀಡುವ ಮೂಲಕ ಪ್ರೇಕ್ಷರನ್ನು ತನ್ನತ್ತ ಸೆಳೆಯು ಪ್ರಯತ್ನಕ್ಕೆ ಮುಂದಾಗಿದೆ.

ಪ್ರೇಕ್ಷಕರಿಗೆ ಭರ್ಜರಿ ಸಿನಿಮಾ ಟಿಕೆಟ್ ಆಫರ್ ನೀಡಿದ ಚಿತ್ರಮಂದಿರ

ಕಳೆದ ಏಳೆಂಟು ತಿಂಗಳಿಂದ ಬಂದ್ ಆಗಿದ್ದ ಚಿತ್ರಮಂದಿರಗಳು ಪ್ರಾರಂಭವಾಗಿದ್ದು, ಸಿನಿಮಾಗಳು ತೆರೆ ಕಾಣುತ್ತಿವೆ. ಆದರೆ ಕೊರೊನಾ ಕಾರಣದಿಂದಾಗಿ ಜನರು ಥಿಯೇಟರ್​ಗೆ ಬರಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲಿರುವ ನಟರಾಜ ಚಿತ್ರಮಂದಿರದ ಮಾಲೀಕರು ಸಿನಿಮಾ ಪ್ರೇಕ್ಷಕರಿಗೆ ಭರ್ಜರಿ ಆಫರ್​ ನೀಡಿದ್ದಾರೆ. ಬ್ಲಾಕ್ ಬಸ್ಟರ್ ಮೂವೀಸ್ ಬ್ಯಾನರ್ ಅಡಿ ಟಿಕೆಟ್​ ಖರೀದಿಸಿದರೆ ಮತ್ತೊಂದು ಟಿಕೆಟ್​ ಉಚಿತವಾಗಿ ನೀಡುತ್ತಿದ್ದು, ಈ ಮೂಲಕ ಕನ್ನಡ, ತೆಲುಗು ಹಾಗೂ ತಮಿಳು ಸೇರಿ ನಾನಾ ಭಾಷೆಯ ಸಿನಿಮಾಗಳ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದಾರೆ.

Bellary Cinema Theatre given special offer to audience
ಪ್ರೇಕ್ಷಕರಿಗೆ ಭರ್ಜರಿ ಸಿನಿಮಾ ಟಿಕೆಟ್ ಆಫರ್ ನೀಡಿದ ಚಿತ್ರಮಂದಿರ

ಈ ಕುರಿತಂತೆ ಈಟಿವಿ ಭಾರತದೊಂದಿಗೆ ನಟರಾಜ ಚಿತ್ರಮಂದಿರದ ಮಾಲೀಕ ಲಕ್ಷ್ಮೀಕಾಂತರೆಡ್ಡಿ ಮಾತನಾಡಿದ್ದು, ಫೆ.10 ರಿಂದ 18ರವರೆಗೆ ಈ ಆಫರ್ ನೀಡಲಾಗಿದೆ. ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಟಿಕೆಟ್​ ಖರೀದಿ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಒಳ್ಳೆಯ ಸಿನಿಮಾಗಳು ಬಿಡುಗಡೆಯಾದರೆ ಗುರುವಾರ ಮತ್ತು ಶುಕ್ರವಾರದಂದು ಟಿಕೆಟ್​ಗಳಲ್ಲಿ ವಿಶೇಷ ವಿನಾಯಿತಿ ನೀಡುವ ಚಿಂತನೆ ಇದೆ ಎಂದರು.

ಓದಿ: ಬೆಂಗಳೂರಲ್ಲೂ ಐಟಿ ದಾಳಿ: ಸಪ್ತಗಿರಿ, ಬಿಜಿಎಸ್​ ಆಸ್ಪತ್ರೆ, ವಿದ್ಯಾಸಂಸ್ಥೆಯಲ್ಲಿ ದಾಖಲೆ ಪರಿಶೀಲನೆ

ಕೋವಿಡ್ ಕಾರಣದಿಂದ ಸಿನಿಮಾ ಮಂದಿರಗಳತ್ತ ಪ್ರೇಕ್ಷಕರು ಸುಳಿಯುತ್ತಿಲ್ಲ ಎಂಬುದು ತಪ್ಪು ಕಲ್ಪನೆ. ಲಾಕ್​​ಡೌನ್ ಎಫೆಕ್ಟ್​​ನಿಂದಾಗಿ ಸಾರ್ವಜನಿಕರು ಸೇರಿದಂತೆ ಎಲ್ಲಾ ರಂಗದಲ್ಲೂ ಆರ್ಥಿಕ ಸಂಕಷ್ಟ ಎದುರಾಗಿದೆ. ಆ ಪೈಕಿ ಸಿನಿಮಾ ಮಂದಿರಗಳೂ ಕೂಡ ಒಂದಾಗಿದೆ. ವ್ಯಾಕ್ಸಿನೇಷನ್‌ ಬಂದಾಗಿದ್ದು, ಕೋವಿಡ್ ಸೋಂಕು ಹರಡುವಿಕೆಯ ಭಯ ಈಗ ಕಾಡುತ್ತಿಲ್ಲ. ಹೀಗಾಗಿ ಕೌಟುಂಬಿಕ ಹಿನ್ನೆಲೆಯುಳ್ಳ ಸಿನಿಮಾಗಳು ಬಿಡುಗಡೆಯಾದರೆ ಖಂಡಿತವಾಗಿಯೂ ಸಿನಿಮಾ ಮಂದಿರಗಳತ್ತ ಕುಟುಂಬಸ್ಥರು ಮುಖ ಮಾಡುತ್ತಾರೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.