ETV Bharat / state

ಬಳ್ಳಾರಿ: 30 ಸಾವಿರ ಆ್ಯಂಟಿಜೆನ್ ಕಿಟ್​ ಲಭ್ಯ.. ಪ್ರತಿದಿನ 3 ಸಾವಿರ ಟೆಸ್ಟ್

author img

By

Published : Oct 4, 2020, 9:51 PM IST

Updated : Oct 4, 2020, 11:22 PM IST

ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್​ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಇಳಿಮುಖವಾಗಿದ್ದು, ಕೇವಲ 300 ರಿಂದ 500ರೊಳಗೆ ಸೋಂಕಿತರ ಸಂಖ್ಯೆ ಕಂಡುಬರುತ್ತಿದೆ. ಜಿಲ್ಲೆಯಲ್ಲಿ ಅಂದಾಜು 30 ಸಾವಿರಕ್ಕೂ ಅಧಿಕ ಆ್ಯಂಟಿಜೆನ್ ಕಿಟ್​​ಗಳ ಲಭ್ಯತೆ ಇದ್ದು, ಹೊಸ ಆದೇಶಾನುಸಾರ ಸುಮಾರು 3400 ಮಂದಿಯನ್ನ ಈ ಕೋವಿಡ್ ಟೆಸ್ಟ್​​ಗೆ ಒಳಪಡಿಸುವ ಗುರಿ ಹೊಂದಲಾಗಿದೆ.

ಡಿಹೆಚ್​ಓ ಡಾ. ಹೆಚ್. ಎಲ್. ಜನಾರ್ದನ
ಡಿಹೆಚ್​ಓ ಡಾ. ಹೆಚ್. ಎಲ್. ಜನಾರ್ದನ

ಬಳ್ಳಾರಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದ್ದು, ಈ ಹಿಂದೆ ಕೋವಿಡ್ ಸೋಂಕಿತರ ಸಂಖ್ಯೆ 500- 800ರ ಗಡಿ ದಾಟುತ್ತಿತ್ತು. ಆದ್ರೀಗ ಕೇವಲ 300 ರಿಂದ 500ರೊಳಗೆ ಸೋಂಕಿತರ ಸಂಖ್ಯೆ ಕಂಡುಬರುತ್ತಿದೆ.

ಈ ಹಿಂದೆ ಕೋವಿಡ್ ಸೋಂಕಿತರ ಪ್ರೈಮರಿ ಕಾಂಟ್ಯಾಕ್ಟ್ ಹೊಂದಿರುವವರೇ ಹೆಚ್ಚಿರೋದ್ರಿಂದ ಹೆಚ್ಚು-ಹೆಚ್ಚು ಕೋವಿಡ್ ಟೆಸ್ಟ್ ಮಾಡಲಾಗುತಿತ್ತು. ಆದ್ರೀಗ ಪ್ರೈಮರಿ‌ ಕಾಂಟ್ಯಾಕ್ಟ್ ಹೊಂದಿರುವವರ ಸಂಖ್ಯೆ ಕಮ್ಮಿಯಾಗಿದ್ದು, ಕಡಿಮೆ ಟೆಸ್ಟ್ ಮಾಡಲಾಗುತ್ತಿದೆ. ರಾಜ್ಯ ಸರ್ಕಾರದ ಆದೇಶಾನುಸಾರ ಈ ಕೋವಿಡ್ ಟೆಸ್ಟ್ ನ ಪ್ರಮಾಣ ಕಡಿಮೆ ಮಾಡಲಾಗಿದೆ. ಹೀಗಾಗಿ ಬಳ್ಳಾರಿ ಜಿಲ್ಲೆಯ ಸಂಡೂರು, ಹೊಸಪೇಟೆ ತಾಲೂಕಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯು ಹೆಚ್ಚುತ್ತಿದೆ.‌‌

ಡಿಹೆಚ್​ಓ ಡಾ. ಹೆಚ್. ಎಲ್. ಜನಾರ್ದನ

ಈ ಮೂರು ತಾಲೂಕುಗಳನ್ನು ಹೊರತುಪಡಿಸಿ ‌ಹರಪನಹಳ್ಳಿ, ಹೂವಿನ ಹಡಗಲಿ,‌‌ ಹಗರಿಬೊಮ್ಮನಹಳ್ಳಿ ‌ಹಾಗೂ ಸಿರುಗುಪ್ಪ ತಾಲೂಕಿನಲ್ಲಿ ಈಗ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿವೆ.‌ ನಿಯಂತ್ರಣಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಶತಾಯಗತಾಯ ಪ್ರಯತ್ನ ನಡೆಸುತ್ತಿದೆ.‌

ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯಾಧಿಕಾರಿ (ಡಿಹೆಚ್​ಓ) ಡಾ. ಹೆಚ್. ಎಲ್. ಜನಾರ್ದನ ಅವರು, ಜಿಲ್ಲೆಯಲ್ಲಿ ಅಂದಾಜು 30 ಸಾವಿರಕ್ಕೂ ಅಧಿಕ ಆ್ಯಂಟಿಜೆನ್ ಕಿಟ್​​ಗಳು ಲಭ್ಯತೆ ಇವೆ. ನಮ್ಮಲ್ಲಿ ಯಾವುದೇ ಆ್ಯಂಟಿಜೆನ್ ‌ಕಿಟ್​ಗಳ ಕೊರತೆ ಇಲ್ಲ. ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆ, ನಗರ ಆರೋಗ್ಯ ಕೇಂದ್ರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯದ ಆರೋಗ್ಯ ಕೇಂದ್ರಗಳು, ಫೀವರ್ ಕ್ಲಿನಿಕ್​ಗಳಲ್ಲಿ ಈ ಕೋವಿಡ್ ಟೆಸ್ಟ್​​ಗೆ ಒಳಪಡಿಸಲಾಗುತ್ತಿದೆ.‌ ಹೊಸ ಆದೇಶಾನುಸಾರವಾಗಿ ಸುಮಾರು 3400 ಮಂದಿಯನ್ನ ಈ ಕೋವಿಡ್ ಟೆಸ್ಟ್​​ಗೆ ಒಳಪಡಿಸುವ ಗುರಿಯನ್ನ ನಿಗದಿಪಡಿಸಲಾಗಿದೆ ಎಂದರು.

Last Updated : Oct 4, 2020, 11:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.