ETV Bharat / state

ಸಚಿವರಾಗ್ಲೇಬೇಕು ಅನ್ನೋ ಆಕಾಂಕ್ಷೆಯಿಂದ ನಾವು ರಾಜೀನಾಮೆ ಕೊಟ್ಟಿರಲಿಲ್ಲ: ಆನಂದ​ ಸಿಂಗ್ - ಹೊಸಪೇಟೆ ಆನಂದ್​ ಸಿಂಗ್​ ಸುದ್ದಿ

ಸಮ್ಮಿಶ್ರ ಸರ್ಕಾರದಲ್ಲಿ ರಾಜೀನಾಮೆ ಕೊಟ್ಟ 17 ಶಾಸಕರು ಕೂಡ ನಾನಾ ಕಾರಣಗಳಿಂದ ರಾಜೀನಾಮೆ ನೀಡಿದ್ದೆವು. ಆದ್ರೆ ಸಚಿವ ಸ್ಥಾನದ ಬೇಡಿಕೆಯಿಂದಲೇ ರಾಜೀನಾಮೆ ನೀಡಿರಲಿಲ್ಲ ಎಂದು ವಿಜಯನಗರ ಕ್ಷೇತ್ರದ ಶಾಸಕ ಆನಂದ ಸಿಂಗ್​ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

anand-singh-talking-about-to-minister-post
ಶಾಸಕ ಆನಂದ್​ ಸಿಂಗ್​
author img

By

Published : Jan 27, 2020, 4:37 PM IST

Updated : Jan 27, 2020, 4:46 PM IST

ಹೊಸಪೇಟೆ: ಸಮ್ಮಿಶ್ರ ಸರ್ಕಾರದಲ್ಲಿ ರಾಜೀನಾಮೆ ಕೊಟ್ಟ 17 ಶಾಸಕರು ಕೂಡ ನಾನಾ ಕಾರಣಗಳಿಂದ ರಾಜೀನಾಮೆ ನೀಡಿದ್ದೇವೆಯೇ ಹೊರತು ಸಚಿವ ಸ್ಥಾನದ ಬೇಡಿಕೆಯಿಂದಲ್ಲ. ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆ ಆಗಿದೆ ಎಂದು ನಾನು ರಾಜೀನಾಮೆ ನೀಡಿದ್ದೆ. ಸಚಿವ ಸ್ಥಾನದ ಬೇಡಿಕೆ ಇರಲಿಲ್ಲ, ಒಂದು ವೇಳೆ ವರಿಷ್ಠರುರು ತೀರ್ಮಾನಿಸಿ ಸಚಿವ ಸ್ಥಾನ ನೀಡಿದರೆ ಬೇಡ ಎನ್ನುವುದಿಲ್ಲ ಎಂದು ಶಾಸಕ ಆನಂದ್​ ಸಿಂಗ್​ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಅವರ ತೀರ್ಮಾನಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ. ನಮ್ಮ ರಾಜೀನಾಮೆಯಿಂದ ಬಿಜೆಪಿ ಸರ್ಕಾರ ರಚನೆಯಾಗಿದೆ. ಮುಖ್ಯಮಂತ್ರಿ ಅವರು ನಮಗೆ ಯಾವುದೇ ರೀತಿಯ ಅನ್ಯಾಯ ಮಾಡುವುದಿಲ್ಲ ಎನ್ನುವ ನಂಬಿಕೆ ನಮಗಿದೆ. ಅವರು ಯಾವುದೇ ಸ್ಥಾನ ಕೊಟ್ಟರೂ ಅದನ್ನು ಸ್ವೀಕರಿಸುತ್ತೇವೆ ಎಂದರು.

ಸಚಿವ ಸ್ಥಾನದ ಕುರಿತು ಶಾಸಕ ಆನಂದ್​ ಸಿಂಗ್​ ಪ್ರತಿಕ್ರಿಯೆ
ಸಚಿವ ಸ್ಥಾನ ಬೇಕೆ ಅಥವಾ ಜಿಲ್ಲೆ ಬೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಆನಂದ ಸಿಂಗ್​, ವಿಜಯನಗರವನ್ನು ಜಲ್ಲೆ ಮಾಡುವುದು ನನ್ನ ಬಹುದಿನಗಳ ಬೇಡಿಕೆ, ನನ್ನ ಮೊದಲ ಆದ್ಯತೆ ಇರುವುದು ಜಿಲ್ಲೆಗೆ. ವಿಜಯನಗರ ಜಿಲ್ಲೆಯೂ ಆಗುತ್ತದೆ, ನನಗೆ ಸಚಿವ ಸ್ಥಾನವೂ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Intro:ಸಚಿವನಾಗಬೇಕು ಎನ್ನುವ ಆಸೆ ನನಗಿಲ್ಲ : ಶಾಸಕ ಆನಂದ ಸಿಂಗ್

ಹೊಸಪೇಟೆ : ರಾಜ್ಯ ಸರಕಾರದಲ್ಲಿ ಇನ್ನೇನು ಖಾಲಿರುವ ಸಚಿವ ಸಂಪುಟದ ಹಂಚಿಕೆ ಕಸರತ್ತು ನಡೆಯುತ್ತಿದೆ. ಸೋತವರಿಗೆ ಯಾವುದೇ ಸಚಿವ ಸಂಪುಟ ನೀಡುವುದಿಲ್ಲ ಎನ್ನುವು ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸಿದೆ. ಉಪಚುನಾಣೆಯಲ್ಲಿ ಗೆದ್ದಿರುವ ಶಾಸಕರಿಗೆ ಯಾವ ಸಚಿವ ಸ್ಥಾನ ನೀಡಬೇಕು ಎನ್ನುವುದು ಚರ್ಚೆಯಾಗುತ್ತಿದೆ.ಇದಕ್ಕೆ ಸಂಭಂದಿಸಿದಂತೆ ವಿಜಯ ನಗರ ಕ್ಷೇತ್ರ ಶಾಸಕ ಆನಂದ ವಿಜಯನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು ಎನ್ನುವುದಕ್ಕೆ ಆದ್ಯತೆಯನ್ನು ನೀಡುತ್ತೇನೆ ಎಂದು ಮಾತನಾಡಿದರು.

Body:ನಗರದ ರಾಣಿಪೇಟಿಯಲ್ಲಿರುವ ಗೃಹದಲ್ಲಿ ಇಂದು ಶಾಸಕ ಆನಂದ ಸಿಂಗ್ ಅವರು ಬಿಜೆಪಿ ಸರಕಾರದಲ್ಲಿ ನಡೆಯುವ ಸಚಿವ ಸಂಪುಟದ ಕುರಿತು ಅವರು ಮಾತನಾಡಿದರು. ಸಂಯುಕ್ತ ಸರಕಾರದಲ್ಲಿರುವ 17 ಜನರ ಶಾಸಕರು ಬಿಜೆಪಿ ಸರಕಾರದಲ್ಲಿ ಸಚಿವರಾಗುತ್ತೇವೆ ಎಂಬ ನಂಬಿಕೆಯಿಂದ ನಾವು ರಾಜೀನಾಮೆಯನ್ನು ನೀಡಿಲ್ಲ. ಸಚಿವ ಸಂಪುಟದ ಕುರಿತು ಸರಕಾರ ಚಿಂತನೆ ಮಾಡುತ್ತಿದೆ.ನನಗೆ ಸಚಿವನಾಗಬೇಕು ಎನ್ನುವ ಆಸೆಯಿಲ್ಲ ಎಂದು ಮಾತನಾಡಿದರು.

ಸಚಿಚ ಸಂಪುಟದ ಕುರಿತು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಯಾವ ತಿರ್ಮಾನಗಳುನ್ನು ತೆಗದುಕೊಳ್ಳುತ್ತದೆಯೋ ಅದಕ್ಕೆ ನಾವೆಲ್ಲ ಬದ್ದರಾಗಿದ್ದೇವೆ. ನಾವೆಲ್ಲ ನಾನಾ ಕಾರಣಗಳಿಂದ ಸಮ್ಮಿಶ್ರ ಸರಕಾರಕ್ಕೆ ರಾಜೀನಾಮೆಯನ್ನು ನೀಡಿದ್ದೇವೆ. ನಮ್ಮ ರಾಜೀನಾಮೆಯಿಂದ ಬಿಜೆಪಿ ಸರಕಾರ ರಚನೆಯಾಗಿದೆ ಮುಖ್ಯ ಮಂತ್ರಿಗಳು ನಮಗೆ ಯಾವುದೇ ರೀತಿಯ ಅನ್ಯಾಯವನ್ನು ಮಾಡುವುದಿಲ್ಲ ಎನ್ನುವು ನಂಬಿಕೆ ನಮಗಿದೆ. ಅವರು ಯಾವ ಸ್ಥಾನಮಾನವನ್ನು ಶಾಸಕರಿಗೆ ಕೊಟ್ಟರು ಅದನ್ನು ಸ್ವೀಕಾರ ಮಾಡುತ್ತೇವೆ ಎಂದರು.

ವಿಜಯನಗರ ಜಲ್ಲೆಯು ಬಹು ದಿನದ ಬೇಡಿಕೆಯಾಗಿದೆ. ನನ್ನ ಮೊದಲ ಆದ್ಯತೆ ಇರುವುದು ಜಿಲ್ಲೆಗೆ. ಸಚಿವ ಸ್ಥಾನ ಬೇಕ ಅಥವಾ ಜಿಲ್ಲೆಯ ಎಂಬ ಮಾಧ್ಯಮ ಪ್ರಶ್ನೆಗೆ ಅವರು ಉತ್ತರವನ್ನು ನೀಡಿದರು.ನನಗೆ ಸಚಿವನಾಗ ಬೇಕು ಎನ್ನುವ ಆಸೆಯನ್ನು ಹೊಂದಿಲ್ಲ.ವಿಜಯನಗರ ಜಿಲ್ಲೆಯು ಆಗುತ್ತದೆ ಸಚಿವ ಸ್ಥಾನ ಸಿಗುತ್ತದೆ ಎಂದು ಭರವಸೆಯನ್ನು ನೀಡಿದರು.

Conclusion:KN_HPT_1_NANAGE_SACHAVANAGU_ASEYILLA_ANANDASING_BITE_KA10028
Last Updated : Jan 27, 2020, 4:46 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.