ETV Bharat / state

ಉಪಚುನಾವಣೆ ಕಾಂಗ್ರೆಸ್ಸಿಗರಿಗೆ ಪ್ರತಿಷ್ಠೆಯ ಕಣವಾಗಿದೆ : ಸಚಿವ ಆನಂದಸಿಂಗ್

ಗೆಲುವು ಸಾಧಿಸಬೇಕೆಂಬ ಛಲದಿಂದ ವಿರೋಧ ಪಕ್ಷವಾದ ಕಾಂಗ್ರೆಸ್ ಏನೆಲ್ಲಾ ಕಸರತ್ತು ನಡೆಸಿತ್ತು‌ ಎಂಬೋದನ್ನ‌ ಇಡೀ‌ ರಾಜ್ಯದ ಜನರು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಹೀಗಾಗಿ, ಅಲ್ಲಿ ಗೆಲ್ಲೋದು ಬಿಜೆಪಿಯೇ ಹೊರತು‌ ಕಾಂಗ್ರೆಸ್ ಅಲ್ಲ..

anad singh speak about congress
ಎರಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್ಸಿಗರಿಗೆ ಪ್ರತಿಷ್ಠೆಯ ಕಣವಾಗಿದೆ : ಸಚಿವ ಆನಂದಸಿಂಗ್
author img

By

Published : Nov 1, 2020, 2:12 PM IST

ಬಳ್ಳಾರಿ : ರಾಜ್ಯದ ಎರಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ಕಾಂಗ್ರೆಸ್ಸಿಗರಿಗೆ ಪ್ರತಿಷ್ಠೆಯ ಕಣವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ ಎಸ್‌ ಆನಂದ್‌ ಸಿಂಗ್ ವ್ಯಂಗ್ಯವಾಡಿದ್ದಾರೆ.

ಬಳ್ಳಾರಿಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿಂದು ನಡೆದ ಕರ್ನಾಟಕ ರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ರು.

ಉಪಚುನಾವಣೆ ಕಾಂಗ್ರೆಸ್ಸಿಗರಿಗೆ ಪ್ರತಿಷ್ಠೆಯಾಗಿದೆ : ಸಚಿವ ಆನಂದಸಿಂಗ್

ರಾಜ್ಯದ ಆರ್‌ಆರ್‌ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗಳಲ್ಲಿ‌ ಹೇಗಾದ್ರೂ ಮಾಡಿ ಗೆಲುವು ಸಾಧಿಸಬೇಕೆಂಬ ಛಲದಿಂದ ವಿರೋಧ ಪಕ್ಷವಾದ ಕಾಂಗ್ರೆಸ್ ಏನೆಲ್ಲಾ ಕಸರತ್ತು ನಡೆಸಿತ್ತು‌ ಎಂಬೋದನ್ನ‌ ಇಡೀ‌ ರಾಜ್ಯದ ಜನರು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಹೀಗಾಗಿ, ಅಲ್ಲಿ ಗೆಲ್ಲೋದು ಬಿಜೆಪಿಯೇ ಹೊರತು‌ ಕಾಂಗ್ರೆಸ್ ಅಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ ಸಚಿವ ಆನಂದಸಿಂಗ್.

ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಹಂಪಿ ಉತ್ಸವವನ್ನ ಈ ಬಾರಿ ಸರಳವಾಗಿ ಆಚರಿಸಲಾಗುವುದು. ಕೊರೊನಾ ಸೋಂಕು ಹರಡುವಿಕೆಯ ಹಿನ್ನೆಲೆ ಒಂದು‌ ದಿನದ ಮಟ್ಟಿಗೆ ಹಂಪಿ ಉತ್ಸವವನ್ನ ಆಚರಿಸಲಾಗುವುದು. ಈ ದಿನ ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ದಿನಾಂಕ ನಿಗದಿ ಪಡಿಸುವೆ ಎಂದ್ರು ಸಚಿವ ಆನಂದಸಿಂಗ್.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರೋದ್ರಿಂದ ನೂತನ ವಿಜಯನಗರ ಜಿಲ್ಲೆ ರಚನೆ ವಿಚಾರದ ಬಗ್ಗೆ ನಾನು ಮಾತನಾಡೋದು ಸರಿ ಇರಲ್ಲ ಎಂದ ಸಚಿವ ಆನಂದಸಿಂಗ್ ಅವರು, ನವೆಂಬರ್ 1ರಂದೇ ನೂತನ ಜಿಲ್ಲೆ ರಚನೆಯಾಗೋ ಹುಮ್ಮಸ್ಸಿನಲ್ಲಿದ್ದ ಹೊಸಪೇಟೆ ಜನರಿಗೆ ಸಚಿವರು ನಿರಾಸೆ ಮೂಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.