ETV Bharat / state

ಹಂಪಿ ಕನ್ನಡ ವಿವಿಯಲ್ಲಿ ಪಿಎಚ್​ಡಿ ಪದವಿ ಪ್ರವೇಶ ಪರೀಕ್ಷೆ ಬರೆದ ಪವಿತ್ರಾ ಲೋಕೇಶ್ - ನಟಿ ಪವಿತ್ರಾ ಲೋಕೇಶ್

ನಟಿ ಪವಿತ್ರಾ ಲೋಕೇಶ್ ಹೊಸಪೇಟೆಯ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಆಗಮಿಸಿ ಪಿಎಚ್​ಡಿ ಪದವಿ ಪ್ರವೇಶ ಪರೀಕ್ಷೆ ಬರೆದಿದ್ದಾರೆ.

Actress Pavitra Lokesh and Telugu actor Naresh who came to Hampi University
ಹಂಪಿ ವಿವಿಗೆ ಬಂದಿದ್ದ ನಟಿ ಪವಿತ್ರಾ ಲೋಕೇಶ್ ,ತೆಲಗು ನಟ ನರೇಶ್ ಜೋಡಿ
author img

By

Published : May 31, 2023, 2:25 PM IST

Updated : May 31, 2023, 2:44 PM IST

ವಿಜಯನಗರ: ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟ ನರೇಶ್ ಜೋಡಿ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ನರೇಶ್ ಅವರೊಂದಿಗಿನ ಸಂಬಂಧದ ವಿಚಾರ ಕಾಡ್ಗಿಚ್ಚಿನಂತೆ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿ, ಹೆಚ್ಚು ಚರ್ಚೆಗೆ ಒಳಗಾಗಿತ್ತು. ಇತ್ತೀಚೆಗೆ ಮತ್ತೆ ಮದುವೆ ಎಂಬ ಸಿನಿಮಾದಲ್ಲಿ ಕಾಣಿಸಿಕೊಂಡ ಇವರು ಮತ್ತೆ ಸುದ್ದಿಯಲ್ಲಿದ್ದರು. ಇದೀಗ ಪವಿತ್ರಾ ಲೋಕೇಶ್ ಹಂಪಿ ಕನ್ನಡ ವಿವಿ ಪಿಎಚ್​ಡಿ ಪದವಿ ಪ್ರವೇಶ ಪರೀಕ್ಷೆ ಬರೆದಿದ್ದಾರೆ.

ಇವರು ಬೆಳಗಾವಿ ವಿಸ್ತರಣಾ ಕೇಂದ್ರದ ಮೂಲಕ ಕನ್ನಡ ಸಾಹಿತ್ಯ ವಿಭಾಗದಲ್ಲಿ ಪಿಎಚ್​ಡಿ ಮಾಡಲು ಅರ್ಜಿ ಸಲ್ಲಿಸಿದ್ದರು. ಹೊಸಪೇಟೆಯಲ್ಲಿರುವ ವಿಶ್ವವಿದ್ಯಾಲಯಕ್ಕೆ ಆಗಮಿಸಿ ಪದವಿ ಪ್ರವೇಶ ಪರೀಕ್ಷೆ ಬರೆದಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಸಂಶೋಧನೆಗೆ ನಟಿ ಆಸಕ್ತಿ ಹೊಂದಿದ್ದಾರೆ. ಪರೀಕ್ಷೆಯ ಸಂದರ್ಭದಲ್ಲಿ ಪವಿತ್ರಾ ಜತೆ ನರೇಶ್ ಕೂಡಾ ಇದ್ದರು.

ನರೇಶ್ ಪವಿತ್ರಾ ಸಂಬಂಧ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು: ಕನ್ನಡ ನಟಿ ಪವಿತ್ರಾ ಲೋಕೇಶ್ ಜೊತೆಗೆ ವಿವಾಹದ ಸಿನಿಮಾ ದೃಶ್ಯವನ್ನು ನಟ ನರೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪ್ರಕಟಿಸಿ, ಇದು ನಮ್ಮ ಮಂದಿನ ಹೊಸ ಜೀವನದ ಸಂತಸದ ಕ್ಷಣಗಳನ್ನು ನೆನಪಿಸಲಿದೆ ಎಂದು ಬರೆದುಕೊಂಡಿದ್ದರು. ಇದು ತೆಲಗು ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡು ಭಾರಿ ಚರ್ಚೆಗೆ ಕಾರಣವಾಗಿತ್ತು.

ಇದಾಗಿ ಕೆಲವೇ ದಿನಗಳಲ್ಲಿ ಪವಿತ್ರಾ ಲೋಕೇಶ್ ನನ್ನ ಪತಿ ನಟ ನರೇಶ್ ಅವರೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿ ರಮ್ಯಾ ರಘುಪತಿ ಅವರು ಮೈಸೂರು ನಗರದ ಖಾಸಗಿ ಹೋಟೆಲ್‌ನಲ್ಲಿ ಗಲಾಟೆ ಮಾಡಿದ್ದರು. ಈ ವಿಡಿಯೋ ಸಹ ಸೋಶಿಯಲ್ ಮೀಡಿಯಾದಲ್ಲಿ ಬಹುಬೇಗ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಪವಿತ್ರಾ ಲೋಕೇಶ್ ಹಾಗೂ ನಟ ನರೇಶ್​ ಸಂಬಂಧದ ಕುರಿತಾಗಿ ಉಹಾಪೋಹಾಗಳು ಮಾಧ್ಯಮಗಳಲ್ಲಿ ವರದಿಯಾಗಿದ್ದವು.

ಪವಿತ್ರಾ ಲೋಕೇಶ್ ಇದೀಗ ನರೇಶ್ ಜೊತೆ ಸಹಜೀವನ ನಡೆಸುತ್ತಿದ್ದಾರೆ. ಈ ಹಿಂದೆ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರನ್ನು ಪವಿತ್ರಾ ಮದುವೆ ಆಗಿದ್ದರು. ಕೆಲವು ಭಿನ್ನಾಭಿಪ್ರಾಯಗಳಿಂದ ಡಿವೋರ್ಸ್ ಪಡೆದಿದ್ದರು. ಇದಾದ ನಂತರ ನಟ ಸುಚೇಂದ್ರ ಪ್ರಸಾದ್ ಜೊತೆ ಸಹ ಹಲವು ವರ್ಷ ಕಾಲ ಜೀವನ ನಡೆಸಿದ್ದರು. 2018 ರಲ್ಲಿ ಅವರಿಂದಲೂ ದೂರಾಗಿದ್ದರು. ಮತ್ತೆ ಮದುವೆ ಚಿತ್ರದಲ್ಲಿ ನರೇಶ್ ಬಾಬು ಜೊತೆಯಾಗಿ ಪವಿತ್ರಾ ಲೋಕೇಶ್ ನಟಿಸುವುದರೊಂದಿಗೆ ನಾವಿಬ್ಬರೂ ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದ್ದೇವೆ ಎನ್ನುವುದನ್ನು ಖಾತ್ರಿ ಪಡಿಸಿದ್ದಾರೆ.

3 ಭಾಷೆಗಳಲ್ಲಿ ಪವಿತ್ರಾ ನಟನೆ: ಪವಿತ್ರಾ ಲೋಕೇಶ್ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಲವು ಕಿರುತೆರೆ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಂಡಿದ್ದಾರೆ. ಅಂಬರೀಶ್ ನಟನೆಯ 'ಮಿ. ಅಭಿಷೇಕ್' ಚಿತ್ರದಲ್ಲಿ ಮೊದಲ ಬಾರಿಗೆ ಅವರು ಬಣ್ಣ ಹಚ್ಚಿದ್ದರು. ಜನುಮದ ಜೋಡಿ, ಕುರುಬನ ರಾಣಿ, ಯಜಮಾನ, ಹುಚ್ಚ ಸೇರಿದಂತೆ ಕನ್ನಡದ ಕೆಲ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. 2003 ರಲ್ಲಿ 'ದೊಂಗೊಡು' ಚಿತ್ರದ ಮೂಲಕ ಟಾಲಿವುಡ್ ಪ್ರವೇಶಿಸಿದ್ದರು.

ಇದನ್ನೂಓದಿ:'ಭಾವನಾತ್ಮಕವಾಗಿ ಸಿದ್ಧವಾದಾಗ ನಾನು ಸಿನಿಮಾ ಮಾಡುತ್ತೇನೆ': ಅಮೀರ್ ಖಾನ್

Last Updated : May 31, 2023, 2:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.