ETV Bharat / state

ಹೊಸಪೇಟೆಯಲ್ಲಿ ಅಪರೂಪದ ನಕ್ಷತ್ರ ಆಮೆ ಪ್ರತ್ಯಕ್ಷ - latest ballary news

ಹೊಸಪೇಟೆ ತಾಲೂಕಿನ ಕಮಲಾಪುರದಿಂದ ಪಾಪಿನಾಯಕಹಳ್ಳಿ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಅಪರೂಪದ ನಕ್ಷತ್ರ ಆಮೆ ಪ್ರತ್ಯಕ್ಷವಾಗಿದೆ. ಇದನ್ನು ಗಮನಿಸಿದ ಕನ್ನಡ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಪ್ರೊ. ರಹಮತ್ ತರಿಕೆರೆ ಹಾಗೂ ಕಥೆಗಾರ ಅಮರೇಶ ನುಗಡೋಣಿ ಅವರು ಆಮೆಯನ್ನು ಪಕ್ಕದ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.

ಹೊಸಪೇಟೆಯಲ್ಲಿ ಅಪರೂಪದ ನಕ್ಷತ್ರ ಆಮೆ ಪ್ರತ್ಯಕ್ಷ !
author img

By

Published : Sep 19, 2019, 10:27 PM IST

ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದಿಂದ ಪಾಪಿನಾಯಕಹಳ್ಳಿ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಅಪರೂಪದ ನಕ್ಷತ್ರ ಆಮೆ ಪ್ರತ್ಯಕ್ಷವಾಗಿದೆ.

ಕಮಲಾಪುರ ಗ್ರಾಮದ ಬಿಳಿಕಲ್ಲು ಅರಣ್ಯ ಪ್ರದೇಶಕ್ಕೆ‌ ಹೊಂದಿಕೊಂಡಿರುವ ರಸ್ತೆ‌ ಮಾರ್ಗದಲ್ಲಿ ಕನ್ನಡ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಪ್ರೊ. ರಹಮತ್ ತರಿಕೆರೆ ಹಾಗೂ ಕಥೆಗಾರ ಅಮರೇಶ ನುಗಡೋಣಿ ಅವರ ಕಣ್ಣಿಗೆ ಈ ಆಮೆ ಕಾಣಿಸಿಕೊಂಡಿದೆ‌. ಅವರಿಬ್ಬರೂ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಒಂದೇ ವಾಹನದಲ್ಲಿ ಪ್ರಯಾಣಿಸುತ್ತಿರುವ ಮಾರ್ಗ ಮಧ್ಯದಲ್ಲಿ ನಿಧಾನಗತಿಯಲ್ಲಿ ತೆವಳುತ್ತಾ ಸಾಗಿದ ಆ ಆಮೆಯನ್ನು‌ ಅವರು ಪಕ್ಕದ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.

ಈ ಆಮೆ ರಸ್ತೆಯಲ್ಲಿ ಸಂಚಾರ‌ ಮಾಡುವ ಇತರೆ ವಾಹನಗಳಿಗೆ ಆಹುತಿಯಾಗುವ ಸಂಭವಿತ್ತು. ಅದೃಷ್ಟವಶಾತ್ ನಮ್ಮ ಕಣ್ಣಿಗೆ ಕಾಣಿಸಿಕೊಂಡಿದೆ. ಇದೀಗ ಅದನ್ನು ರಕ್ಷಣೆ ಮಾಡಿ ಕಾಡಿಗೆ ಬಿಡಲಾಗಿದೆಯೆಂದು ತಿಳಿಸಿದ್ದಾರೆ.

Intro:ಹೊಸಪೇಟೆಯಲ್ಲಿ ಅಪರೂಪದ ನಕ್ಷತ್ರ ಆಮೆ ಪ್ರತ್ಯಕ್ಷ
ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದಿಂದ ಪಾಪಿನಾಯಕಹಳ್ಳಿ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಅಪರೂಪದ ನಕ್ಷತ್ರ ಆಮೆಯೊಂದು ಪ್ರತ್ಯಕ್ಷವಾಗಿದೆ.
ಕಮಲಾಪುರ ಗ್ರಾಮದ ಬಿಳಿಕಲ್ಲು ಅರಣ್ಯ ಪ್ರದೇಶಕ್ಕೆ‌ ಹೊಂದಿ ಕೊಂಡಿರುವ ರಸ್ತೆ‌ ಮಾರ್ಗದಲ್ಲಿ ಕನ್ನಡ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಪ್ರೊ.ರಹಮತ್ ತರಿಕೆರೆ ಹಾಗೂ ಕಥೆಗಾರ ಅಮರೇಶ ನುಗಡೋಣಿ ಅವರ ಕಣ್ಣಿಗೆ ಈ ಆಮೆ ಕಾಣಿಸಿಕೊಂಡಿದೆ‌.
ಅವರಿಬ್ಬರೂ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಒಂದೇ ವಾಹನದಲ್ಲಿ ಪ್ರಯಾಣಿಸುತ್ತಿರುವ ಮಾರ್ಗ ಮಧ್ಯದಲ್ಲಿ ನಿಧಾನಗತಿಯಲ್ಲಿ ತೆವಳುತ್ತಾ ಸಾಗಿದ ಆ ಆಮೆಯನ್ನು‌
ಅವರು ಪಕ್ಕದ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.
Body:ಅಧ್ಯಾಪಕರಿಬ್ಬರು, ಪಾಪಿನಾಯಕನಹಳ್ಳಿಯಿಂದ ವಿಶ್ವವಿದ್ಯಾಲಯದ ತನಕ ನಾಲ್ಕು ಕಿಲೋಮೀಟರ್, ವಾಹನದಲ್ಲಿ ಪಯಣ‌ ಮಾಡುತ್ತಿರುವ ವೇಳೆ ಚುರುಕಾದ ಬಿಸಿಲಿನಲ್ಲಿ ಆಮೆ ಡಾಂಬರ್ ರಸ್ತೆಯ ಮೇಲೆ‌ ನಿಧಾನವಾಗಿ ಸಾವರಿಸಿಕೊಂಡು ಸಾಗುತ್ತಿರುವ ದೃಶ್ಯ ಕಂಡಿದೆ. ಕೂಡಲೇ
ಅವರು ವಾಹನ ನಿಲ್ಲಿಸಿ, ಮುದ್ದಾದ ನಕ್ಷತ್ರ ಆಮೆ‌ಯನ್ನು ರಕ್ಷಣೆ ಮಾಡಿದ್ದಾರೆ.
ಈ ಆಮೆ ರಸ್ತೆಯಲ್ಲಿ ಸಂಚಾರ‌ ಮಾಡುವ ಇತರೆ ವಾಹನಗಳಿಗೆ ಆಹುತಿಯಾಗುವ ಸಂಭವಿತ್ತು. ಅದೃಷ್ಟವಶಾತ್ ನಮ್ಮ‌ಕಣ್ಣಿಗೆ ಕಾಣಿಸಿಕೊಂಡಿದೆ. ಇದೀಗ ಅದನ್ನು ರಕ್ಷಣೆ ಮಾಡಿ ಕಾಡಿಗೆ ಬಿಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_6_HOSAPETE_TORTOISE_PRAKTHKSH_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.