ಬಳ್ಳಾರಿ: ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಜಲಾಶಯದಿಂದ 54,474 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.
ಒಳಹರಿವಿನ ಪ್ರಮಾಣ ಆಧರಿಸಿ ನದಿಗೆ ನೀರು ಹರಿಸಲು ಜಲಾಶಯ ಮಂಡಳಿ ನಿರ್ಧರಿಸಿದೆ. ಜಲಾಶಯದ 20 ಕ್ರಸ್ಟ್ ಗೇಟ್ ಮೂಲಕ 54,474 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.
ಮೊದಲ 10 ಕ್ರಸ್ಟ್ ಗೇಟ್ಗಳಲ್ಲಿ 2 ಅಡಿಯಷ್ಟು ನೀರು ಹಾಗೂ ಉಳಿದ 10 ಕ್ರಸ್ಟ್ ಗೇಟ್ಗಳಲ್ಲಿ 1.5 ಅಡಿಯಷ್ಟು ನೀರು ಬಿಡಲಾಗುತ್ತಿದೆ.
ಸದ್ಯ ಜಲಾಶಯದಲ್ಲಿ 1632.48 ಅಡಿ ನೀರಿದ್ದು, 97.970 ಟಿಎಂಸಿ ನೀರು ಸಂಗ್ರಹವಿದೆ. ಇನ್ನು ಮಳೆಯಿಂದಾಗಿ 56 ಸಾವಿರ ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ.