ETV Bharat / state

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಿದ್ದರಾಮಯ್ಯ ಭೇಟಿ ಬಗ್ಗೆ ಬಿಎಸ್‌ವೈ ಹೇಳಿದ್ದೇನು?

ಪ್ರಧಾನಿ ಮೋದಿಯವರ ಆಶೀರ್ವಾದದಿಂದ ವಾತಾವರಣ ಬಹಳ ಅನುಕೂಲಕರವಾಗಿದೆ. ಈಗ ಬರುವ ಚುನಾವಣೆಗಳಲ್ಲಿ ಸುಲಭವಾಗಿ ಗೆಲ್ಲುವ ಅವಕಾಶ ಇದೆ. ಹನುಮಂತ ನಿರಾಣಿಗೆ 50 ಸಾವಿರ ಮತಗಳ ಮುನ್ನಡೆ ಸಿಗಬಹುದು ಎಂದು ಬಿಎಸ್‌ವೈ ವಿಶ್ವಾಸ ವ್ಯಕ್ತಪಡಿಸಿದರು.

yeddyurappa-reacts-on-meet-with-siddaramaiah-at-airport
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಿದ್ದರಾಮಯ್ಯ ಭೇಟಿ ಬಗ್ಗೆ ಬಿಎಸ್‌ವೈ ಹೇಳಿದ್ದೇನು?
author img

By

Published : Jun 6, 2022, 9:28 PM IST

Updated : Jun 6, 2022, 10:11 PM IST

ಬೆಳಗಾವಿ/ಬೆಂಗಳೂರು: ನಾವಿಬ್ಬರೂ ಭೇಟಿಯಾದ ವೇಳೆ ರಾಜಕೀಯದ ಬಗ್ಗೆ ಒಂದೂ ಶಬ್ದ ಚರ್ಚೆ ಆಗಿಲ್ಲ. ಚುನಾವಣೆ ಪ್ರಚಾರಕ್ಕಾಗಿ ಹುಬ್ಬಳ್ಳಿಗೆ ಹೋಗುವುದಾಗಿ ಅವರು ಹೇಳಿದರು. ನಾನು ಬೆಳಗಾವಿಗೆ ಹೊರಟಿರುವೆ ಎಂದೆ ಎಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರ ಭೇಟಿ ವಿಚಾರದ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನಿರೀಕ್ಷಿತವಾಗಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಮುಖಾಮುಖಿಯಾದರು. ವಿಮಾನ ನಿಲ್ದಾಣದ ವಿಐಪಿ ಗೆಸ್ಟ್ ಹೌಸ್​​ನಲ್ಲಿ ಕುಳಿತು ಇಬ್ಬರು ನಾಯಕರು ಮಾತನಾಡಿದರು. ರಾಜ್ಯಸಭಾ ಚುನಾವಣೆ ಸಮಯದಲ್ಲಿ ಇಬ್ಬರು ನಾಯಕರು ಭೇಟಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಸಿದ್ದರಾಮಯ್ಯ ಭೇಟಿ ಬಗ್ಗೆ ಬಿಎಸ್‌ವೈ ಪ್ರತಿಕ್ರಿಯೆ

ಈ ಬಗ್ಗೆ ಬೆಳಗಾವಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಬಿಎಸ್​ವೈ, ನನ್ನ ಹಾಗೂ ಸಿದ್ದರಾಮಯ್ಯ ನಡುವೆ ಯಾವುದೇ ವಿರೋಧವಿಲ್ಲ. ಅವರು ವಿರೋಧ ಪಕ್ಷದಲ್ಲಿರುವಾಗ ನಾವು ವಿರೋಧ ಮಾಡಬೇಕು ಅಂತಿದೆಯಾ? ರಾಜಕಾರಣದಲ್ಲಿ ಆತ್ಮೀಯತೆ, ವಿಶ್ವಾಸಕ್ಕೆ ಅಜಗಜಾಂತರ ವ್ಯತ್ಯಾಸವಿದೆ. ಅವರು ಅವರ ಪಕ್ಷಕ್ಕೆ ಕೆಲಸ ಮಾಡುತ್ತಿದ್ದಾರೆ. ನಾನು ನಮ್ಮ ಪಕ್ಷಕ್ಕೆ ಕೆಲಸ ಮಾಡುತ್ತಿದ್ದೇನೆ ಎಂದರು.

ವಾಯವ್ಯ ಕ್ಷೇತ್ರದ ಅಭ್ಯರ್ಥಿಗಳ ಪರ ಎರಡು ದಿನ ಪ್ರಚಾರ ಮಾಡುತ್ತೇನೆ. ಹನುಮಂತ ನಿರಾಣಿ ಹೆಚ್ಚು ಮತಗಳಿಂದ ಗೆಲುವು ಸಾಧಿಸಲಿದ್ದಾರೆ. ಅರುಣ್ ಶಹಾಪುರ್ ಲೀಡ್ ಕಡಿಮೆಯಾಗಬಹುದು. ಆದರೆ ನೂರಕ್ಕೆ ನೂರರಷ್ಟು ಗೆಲ್ಲುತ್ತಾರೆ. ರಾಜ್ಯಸಭೆ ನಾಲ್ಕು ಕ್ಷೇತ್ರದಲ್ಲಿ ಮೂರು ಕಡೆ ಸ್ಪರ್ಧೆ ಮಾಡಿದ್ದೇವೆ. ಮೂರು ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿಯವರ ಆಶೀರ್ವಾದದಿಂದ ವಾತಾವರಣ ಬಹಳ ಅನುಕೂಲಕರವಾಗಿದೆ. ಈಗ ಬರುವ ಚುನಾವಣೆಗಳಲ್ಲಿ ಸುಲಭವಾಗಿ ಗೆಲ್ಲುವ ಅವಕಾಶ ಇದೆ. ಹನುಮಂತ ನಿರಾಣಿಗೆ 50 ಸಾವಿರ ಮತಗಳ ಮುನ್ನಡೆ ಸಿಗಬಹುದು. ಅರುಣ್ ಶಹಾಪುರ್ ಲೀಡ್ ಹದಿನೈದು ಸಾವಿರ ಆಗುತ್ತೆ. ಶಿಕ್ಷಕರ ಕ್ಷೇತ್ರದಲ್ಲಿ ಮತದಾರರು ಕಡಿಮೆ ಇದ್ದಾರೆ. ಹೀಗಾಗಿ ಲೀಡ್ ಕಡಿಮೆ ಆಗಲಿದೆ ಎಂದು ಹೇಳಿದರು.

ಇದೇ ವೇಳೆ ಕಾಂಗ್ರೆಸ್ ಪಕ್ಷದಿಂದ‌ ಚಡ್ಡಿ ಸುಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ಬಿಎಸ್‌ವೈ ನಿರಾಕರಿಸಿದರು.

ಇದನ್ನೂ ಓದಿ: ಯಾವುದೇ ಪಕ್ಷಕ್ಕೆ ಹೋದ್ರೂ ಯಾವ ಜಾತಿ, ಎಷ್ಟು ದುಡ್ಡು ತರುತ್ತಿಯಾ? ಎಂದು ಕೇಳ್ತಾರೆ: ಬಸವರಾಜ್ ಹೊರಟ್ಟಿ

Last Updated : Jun 6, 2022, 10:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.