ಬೆಳಗಾವಿ: ಪ್ರಿಯಕರನ ಜೊತೆ ಸೇರಿಕೊಂಡ ಪತ್ನಿ ತನ್ನ ಗಂಡನ ಕೊಲೆ ಮಾಡಿರುವ ಘಟನೆ ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದಲ್ಲಿ ನಡೆದಿದೆ.
ಲಕ್ಷ್ಮೀ ಮತ್ತು ರಮೇಶ ಬಡಿಗೇರ್ ಬಂಧಿತರು. ಲಕ್ಷ್ಮೀ ತನ್ನ ಪ್ರಿಯಕರನ ಜೊತೆ ಸೇರಿ ಪತಿ ಪಾಂಡಪ್ಪ(35)ನನ್ನು ಕಬ್ಬಿಣದ ಸಲಾಕೆಯಿಂದ ಹೊಡೆದು ಹತ್ಯೆ ಮಾಡಿದ್ದಾಳೆ. ಬಳಿಕ ಆತ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂದು ಬಿಂಬಿಸಲು ಶವವನ್ನು ಬೈಕ್‌ನಲ್ಲಿ ಹೊತ್ತೊಯ್ದು ಹೊಸೂರು ಕಿರುಸೇತುವೆ ಬಳಿ ಎಸೆದು ಬಂದಿದ್ದರು. ಈ ಕುರಿತು ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಕುರಿತು ತನಿಖೆ ಆರಂಭಿಸಿದ ಪೊಲೀಸರಿಗೆ ರಮೇಶ್ ಬಡಿಗೇರ ಜೊತೆಗೆ ಲಕ್ಷ್ಮಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ವಿಚಾರ ಗೊತ್ತಾಗಿದೆ. ನಂತರ ಪೊಲೀಸರು ರಮೇಶ್ ಮತ್ತು ಲಕ್ಷ್ಮೀಯನ್ನು ಬಂಧಿಸಿದ್ದು, ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಘಟನೆ ನಡೆದು 24 ಗಂಟೆಯೊಳಗೆ ಪೊಲೀಸರು ಪ್ರಕರಣ ಬಗೆಹರಿಸಿದ್ದಾರೆ.
ಇದನ್ನೂ ಓದಿ: ಮದ್ವೆಯಾಗಿ ಎರಡೇ ವರ್ಷ, ಬಂಗಾರ-ದುಡ್ಡಿನ ದಾಹಕ್ಕೆ ಪತ್ನಿಯ ಚುಚ್ಚಿ ಕೊಂದ ಪತಿ