ETV Bharat / state

ರಾಹುಲ್ ಗಾಂಧಿ‌ ಹೋದಲ್ಲೆಲ್ಲ ಕಮಲ ಅರಳಿದೆ: ಸಿಎಂ ಬೊಮ್ಮಾಯಿ ಲೇವಡಿ - ಸಿಎಂ ಬೊಮ್ಮಾಯಿ ಲೇವಡಿ

ಪ್ರಧಾನಿ ರಾಜೀವ ಗಾಂಧಿ ಅವರು 100 ರೂ ದೆಹಲಿಯಿಂದ‌ ಕಳಿಸಿದ್ರೆ ಹಳ್ಳಿಗೆ ಬಂದು‌ 15 ರೂ ಮುಟ್ಟುತ್ತದೆಂದು ಹೇಳುತ್ತಿದ್ದರು. ಕಾಂಗ್ರೆಸ್ 85 ಪರ್ಸೆಂಟ್ ತಿಂದುಕೊಂಡು‌ ಬಂದಿದೆ. ಇದು ನಾನು ಹೇಳಿದ್ದಲ್ಲ, ಅವರ ಪ್ರಧಾನಿ ರಾಜೀವ್​ ಗಾಂಧಿ ಹೇಳಿದ್ದು ಎಂದು ಸಿಎಂ ಬೊಮ್ಮಾಯಿ ಟೀಕಾ ಪ್ರಹಾರ ನಡೆಸಿದ್ದಾರೆ.

CM Bommai spoke.
ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರಿ‌ ಪರ ರೋಡ್ ಶೋದಲ್ಲಿ ಸಿಎಂ ಬೊಮ್ಮಾಯಿ ಮಾತನಾಡಿದರು.
author img

By

Published : Apr 26, 2023, 5:29 PM IST

ಬೆಳಗಾವಿ: ವಿವಿಧ ಯೋಜನೆಗಳಲ್ಲಿ 85 ಪರ್ಸೆಂಟ್ ಯಾರಾದರೂ ಲೂಟಿ ಹೊಡೆದಿದ್ದರೆ ಅದು ಕಾಂಗ್ರೆಸ್ ಪಕ್ಷ. ಭ್ರಷ್ಟಾಚಾರ ಎಂದರೆ ಕಾಂಗ್ರೆಸ್, ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ ಎಂದು ಸಿಎಂ‌ ಬಸವರಾಜ ಬೊಮ್ಮಾಯಿ ಹರಿಹಾಯ್ದರು. ಜಿಲ್ಲೆಯ ಯಮಕನಮರಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರಿ‌ ಪರ ರೋಡ್ ಶೋದಲ್ಲಿ ಭಾಗವಹಿಸಿ ಮಾತನಾಡಿದ ಅವರು, 23ನೇ ವಿಧಾನಸಭೆ ಚುನಾವಣೆ ಐತಿಹಾಸಿಕ ಚುನಾವಣೆ ಆಗಲಿದೆ. ಕರ್ನಾಟಕದ ರಾಜಕಾರಣದಲ್ಲಿ ಒಂದು ಹೊಸ ದಾಖಲೆ ಬರೆಯಲಿದೆ ಎಂದರು.

ಅಶ್ಚರ್ಯಚಕಿತ ಆಗಲಿದೆ ಯಮಕನಮರಡಿ ರಿಸಲ್ಟ್ :ಹಲವಾರು ವರ್ಷಗಳಿಂದ ಸ್ಥಾಪಿತವಾಗಿರುವ ಶಕ್ತಿಗಳಿಗೆ ಸರ್ವ ಸಾಮಾನ್ಯ ಒಬ್ಬ ಯುವಕ, ಬಡ ಕುಟುಂಬದಿಂದ‌ ಬಂದು ಸ್ವಂತ ಶಕ್ತಿ‌ ಮೇಲೆ, ಸ್ವಾಭಿಮಾನದ ಬದುಕು ನಡೆಸುತ್ತಿರುವ ಬಸವರಾಜ ಹುಂದ್ರಿ ಸ್ಥಾಪಿತ ವ್ಯವಸ್ಥೆಯ ಶಕ್ತಿಯನ್ನು ಯಮಕನಮರಡಿಯಲ್ಲಿ ಕಿತ್ತೊಗೆದು ಬದಲಾವಣೆ ಮಾಡುವ ಶಕ್ತಿ ಹೊಂದಿದ್ದಾರೆ. ಮೇ 13ರಂದು ಫಲಿತಾಂಶ ಬಂದಾಗ ಇಡೀ ರಾಜ್ಯ ಅತ್ಯಂತ ಆಶ್ಚರ್ಯ ಚಕಿತವಾಗಿ ಯಮಕನಮರಡಿಯತ್ತ ನೋಡುತ್ತದೆ ಎಂದು ಹೇಳಿದರು.

ನಮ್ಮ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಡಬಲ್ ಎಂಜಿನ್ ಸರ್ಕಾರ ಕರ್ನಾಟಕದಲ್ಲಿದೆ. ಕಾಂಗ್ರೆಸ್ ಪಕ್ಷದವರು ಡಬಲ್ ಎಂಜಿನ್ ಸರ್ಕಾರ ಯಾಕೆ ಬೇಕು..? ಬೇಡ ಎನ್ನುತ್ತಾರೆ, ಯಾರಿಗೆ ಕರ್ನಾಟಕದ ಪ್ರಗತಿ ಬೇಡವೋ ಅವರು ಡಬಲ್ ಎಂಜಿನ್ ಸರ್ಕಾರ ಬೇಡ ಎನ್ನುತ್ತಾರೆ. ಯಾರಿಗೆ ಕರ್ನಾಟಕದ ಸಮಗ್ರ ಅಭಿವೃದ್ಧಿ ಬೇಕಾಗಿದೆ ಅವರು ಡಬಲ್ ಎಂಜಿನ್ ಸರ್ಕಾರ ಬೇಕು ಎನ್ನುತ್ತಾರೆ ಎಂದರು.

ಮೋದಿ ಎಂದರೆ ಕಾಂಗ್ರೆಸ್ ಪಕ್ಷದವರಿಗೆ ಉರಿ: ನಿನ್ನೆ ಅಮಿತ್ ಷಾ ಅವರು ಒಂದು ಕಡೆ ಹೇಳಿದ್ದಾರೆ. ನರೇಂದ್ರ ಮೋದಿಯವರ ಆಶೀರ್ವಾದದಿಂದ ಕರ್ನಾಟಕ ಅಭಿವೃದ್ಧಿ ಮಾಡುತ್ತೇವೆಂದು ಹೇಳಿದ್ದರು. ಇಷ್ಟು ಹೇಳಿದ್ದಕ್ಕೆ ಕಾಂಗ್ರೆಸ್ ಪಕ್ಷದವರಿಗೆ ಉರಿ ಹತ್ತಿಕೊಂಡಿದೆ. ನರೇಂದ್ರ ಮೋದಿ ಎಂದರೆ ಕಾಂಗ್ರೆಸ್ ಪಕ್ಷದವರಿಗೆ ಉರಿ ಹತ್ತುತ್ತದೆ. ಯಾಕೆಂದರೆ ಮೋದಿಯವರು ಎಲ್ಲೆಲ್ಲಿ ಹೋಗಿದ್ದಾರೆ. ಆ ರಾಜ್ಯಗಳಲ್ಲಿ ಕಾಂಗ್ರೆಸ್ ಮುಕ್ತವಾಗಿದೆ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.

ಮೊನ್ನೆ ನಡೆದ ಗುಜರಾತ್, ತ್ರಿಪುರಾ, ಮೇಘಾಲಯ, ಅರುಣಾಚಲ ಪ್ರದೇಶದ ಚುನಾವಣೆಗಳಲ್ಲಿ ಕಾಂಗ್ರೆಸ್ ಮುಕ್ತವಾಗಿದೆ. ಇದಕ್ಕಿಂತ ಮೊದಲು ನಡೆದ ಉತ್ತರಾಖಂಡದಲ್ಲಿ ಆಗಿದೆ. ಹೀಗೆ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಮುಕ್ತವಾಗಿದೆ. ಅದೇ ಭಯ ಕಾಂಗ್ರೆಸ್ ನಾಯಕರನ್ನು ಕಾಡುತ್ತಿದೆ ಎಂದು ಸಿಎಂ ಬೊಮ್ಮಾಯಿ‌ ಲೇವಡಿ ಮಾಡಿದರು.

ರಾಹುಲ್ ಗಾಂಧಿ‌ ಹೋದ ಕ್ಷೇತ್ರಗಳಲ್ಲಿ ಕಮಲ ಅರಳಿದೆ:ಪ್ರಚಾರ ಮಾಡಲು ಪ್ರಧಾನಮಂತ್ರಿ ಅವರು ಯಾಕೆ ಇಲ್ಲಿ ಬರಬೇಕು..? ಗೃಹ ಸಚಿವರು ಯಾಕೆ ಬರಬೇಕೆಂದು ಕೈ ನಾಯಕರು ಹೇಳುತ್ತಿದ್ದರು. ಈಗ ಏನಾಗಿದೆ, ರಾಹುಲ್ ಗಾಂಧಿ, ಪ್ರಿಯಾಂಕಾ‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿ ಎಲ್ಲರೂ ಇಲ್ಲೇ ಇದ್ದಾರೆ. ಮತ್ತೆ ನೀವು ಯಾಕೆ ಬಂದಿರಿ ಎಂದು ಪ್ರಶ್ನಿಸಿದ ಬೊಮ್ಮಾಯಿ, ಆದರೆ ನಾವು ಬರಬೇಡಿ ಎಂದು ಹೇಳುವುದಿಲ್ಲ ಎಂದು ಟಾಂಗ್ ಕೊಟ್ಟರು.

ಕರ್ನಾಟಕದಲ್ಲಿ ರಾಹುಲ್ ಗಾಂಧಿ ಎಲ್ಲೆಲ್ಲಿ ಓಡಾಡುತ್ತಾರೆ, ಅಷ್ಟು ಬಿಜೆಪಿಗೆ ಒಳ್ಳೆಯದು. 2018ರಲ್ಲಿ ರಾಹುಲ್ ಗಾಂಧಿ‌ ಹೋದ ಎಲ್ಲ ಕ್ಷೇತ್ರಗಳಲ್ಲಿ ಕಮಲ ಅರಳಿದೆ. ಅವರು ಏನಾದರೂ ಯಮಕನಮರಡಿಗೆ ಬರುತ್ತಾರೆ ಎಂದರೆ ನಾವು ಸ್ವಾಗತಿಸುತ್ತೇವೆ. ಆದರೆ ರಿಸಲ್ಟ್ ನಮ್ಮದೇ ಎಂದು ಸಿಎಂ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಅಭಿವೃದ್ಧಿಗೆ ಡಬಲ್ ಎಂಜಿನ್ :ಡಬಲ್ ಎಂಜಿನ್ ಸರ್ಕಾರ ಯಾಕೆ ಬೇಕು ಎಂದರೆ ಇವತ್ತು 60 ಸಾವಿರ ಕೋಟಿ ರೂ. ಅನುದಾನದಲ್ಲಿ 6 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಆಗುತ್ತಿದೆ. ಈ ಭಾಗದಲ್ಲಿ ಕೂಡ ಸಂಕೇಶ್ವರದಿಂದ ಬಾಗಲಕೋಟೆವರೆಗೆ ಆಗಿರುವ ರಾಷ್ಟ್ರೀಯ ಹೆದ್ದಾರಿ ಇಡೀ ಉತ್ತರ ಕರ್ನಾಟಕ ಸಂಪರ್ಕಿಸಿದೆ. ಅದಕ್ಕಾಗಿ ಡಬಲ್ ಎಂಜಿನ್ ಸರ್ಕಾರ ಬೇಕು ಎಂದು ವಿವರಿಸಿದರು.

ಬೆಳಗಾವಿ ಕುಡಚಿ ರೈಲ್ವೆ ಡಬಲ್ ಲೈನ್, ಧಾರವಾಡ-ಬೆಳಗಾವಿ ಹೊಸ ರೈಲ್ವೆ ಲೈನ್, ಪ್ರಧಾನಮಂತ್ರಿ ಅವರ ನೇತೃತ್ವದಲ್ಲಿ‌ ಕಿಸಾನ್ ಸಮ್ಮಾನ್ ಯೋಜನೆ ಮಾಡಿದ್ದೇವೆ. 4 ವರ್ಷದಲ್ಲಿ 16 ಸಾವಿರ ಕೋಟಿ ರೂ. 57 ಲಕ್ಷ ರೈತ ಕುಟುಂಬಗಳಿಗೆ ನೇರವಾಗಿ ಹಣ ಪಾವತಿಯಾಗಿದೆ ಎಂದು ಸಿಎಂ ಇದೇ ವೇಳೆ ಅಂಕಿ - ಅಂಶ ಒದಗಿಸಿದರು.

ಹಿಂದೆ ಪ್ರಧಾನಮಂತ್ರಿ ರಾಜೀವ ಗಾಂಧಿ ಅವರು 100 ರೂ. ನಾನು ದೆಹಲಿಯಿಂದ‌ ಕಳಿಸಿದರೆ ಅದರಲ್ಲಿ ಹಳ್ಳಿಗೆ ಬಂದು‌ 15 ರೂ. ಮುಟ್ಟುತ್ತದೆ ಎಂದು ಹೇಳುತ್ತಿದ್ದರು. ಹೀಗಾಗಿ ಕಾಂಗ್ರೆಸ್ ಯಾವಾಗಲೂ 85 ಪರ್ಸೆಂಟ್ ತಿಂದುಕೊಂಡು‌ ಬಂದಿದೆ. ಇದು ನಾನು ಹೇಳಿದ್ದಲ್ಲ, ಅವರ ಪ್ರಧಾನಿ ರಾಜೀವ ಗಾಂಧಿ ಅವರೇ ಹೇಳಿದ್ದು ಎಂದು ಸಿಎಂ ಬೊಮ್ಮಾಯಿ ವ್ಯಂಗ್ಯವಾಡಿದರು.

2013-2018ರ ಅವಧಿ ಕಾಂಗ್ರೆಸ್ ಆಡಳಿತದಲ್ಲಿ ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರವಿತ್ತು. ದೊಡ್ಡ ನೀರಾವರಿಯಲ್ಲಿ ಭ್ರಷ್ಟಾಚಾರ, ಸಣ್ಣ ನೀರಾವರಿಯಲ್ಲಿ ಕೆಲಸ ಮಾಡದೇ ಬಿಲ್ ತೆಗೆದಿರುವ ಭ್ರಷ್ಟಾಚಾರ. ಅದರಲ್ಲಿ ಸಾಬೀತಾಗಿ ಇಂದು ಶಿಕ್ಷೆಯಾಗುತ್ತಿದೆ. ಎಸ್ಸಿ, ಎಸ್ಟಿ ಮಕ್ಕಳಿಗೆ ದಿಂಬು ಖರೀದಿಯಲ್ಲೂ ಭ್ರಷ್ಟಾಚಾರ ಮಾಡಿದ್ದಾರೆ. ಇಷ್ಟೆಲ್ಲಾ ಮಾಡಿ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರಿಗೆ ನಾಚಿಕೆ ಆಗಬೇಕು ಎಂದು ಸಿಎಂ ಬೊಮ್ಮಾಯಿ ವಾಗ್ದಾಳಿ ಮಾಡಿದರು.

ಈ ವೇಳೆ ಯಮಕನಮರಡಿ ಅಭ್ಯರ್ಥಿ ಬಸವರಾಜ ಹುಂದ್ರಿ, ಚಿಕ್ಕೋಡಿ ಅಭ್ಯರ್ಥಿ ರಮೇಶ ಕತ್ತಿ, ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಅಭಯ ಪಾಟೀಲ, ಅನಿಲ ಬೆನಕೆ ಸೇರಿ ಮತ್ತಿತರರು ಇದ್ದರು.

ಇದನ್ನೂಓದಿ:'ಒಂದೇ ಕುಟುಂಬ ಅಭಿವೃದ್ಧಿ ಆದರೆ ಸಾಕಾ ಯೋಚಿಸಿ': ಜೆಡಿಎಸ್​​ ವಿರುದ್ಧ ಸುಮಲತಾ ವಾಗ್ದಾಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.