ಬೆಳಗಾವಿ: ನಮ್ಮ ಪಕ್ಷಕ್ಕೆ ಯಾರೇ ಬಂದರೂ ಸಹ ನಾವು ಅವರನ್ನು ಸ್ವಾಗತಿಸುತ್ತೇವೆ. ನಮ್ಮ ಪಕ್ಷಕ್ಕೆ ಬರುವವರು ಮದುವೆಯಾದ ಬಳಿಕ ಮನೆಗೆ ಬರುವ ಸೊಸೆಯಿದ್ದಂತೆ, ನಮ್ಮ ಮನೆಗೆ ಬಂದ ಮೇಲೆ ಅವರು ನಮ್ಮವರೆ, ನಾವು ಅವರೊಂದಿಗೆ ಅನುಸರಿಸಿಕೊಂಡು ಹೋಗುತ್ತೇವೆ ಎಂದು ಮಾಜಿ ಶಾಸಕ ಸಂಜಯ ಪಾಟೀಲ್, ಪ್ರಕಾಶ ಹುಕ್ಕೇರಿಗೆ ಟಾಂಗ್ ನೀಡಿದ್ದಾರೆ.
ಮಾಜಿ ಸಂಸದ ಪ್ರಕಾಶ ಹುಕ್ಕೇರಿ ನಿನ್ನೆಯ ದಿವಸ, ಯಾವ ಪಕ್ಷದಿಂದ ನನಗೆ ಟಿಕೆಟ್ ನೀಡಿದರೂ ಸಹ ನಾನು ಚುನಾವಣೆಗೆ ಸ್ಪರ್ಧಿಸಲು ಸಿದ್ದ ಎಂಬ ಹೇಳಿಕೆಗೆ ಪ್ರತಿಕ್ರಯಿಸಿದ ಸಂಜಯ ಪಾಟೀಲ್, ಅವರು ಯಾರಿಗೆ ಪ್ರಾಮಾಣಿಕರಿದ್ದಾರೆ, ಅವರ ಸ್ವಂತ ಪಕ್ಷಕ್ಕೋ ಅಥವಾ ಬಿಜೆಪಿಗೋ ಎಂದು ಅವರೇ ಸ್ಪಷ್ಟಪಡಿಸಲಿ.
ಚುನಾವಣೆಯಲ್ಲಿ ಯಾರೇ ನಿಂತರೂ ಸಹ ಕೇಂದ್ರ ಸಚಿವರಾಗಿದ್ದ ದಿ. ಸುರೇಶ ಅಂಗಡಿಯವರ ಕುಟುಂಬವನ್ನು ಗೆಲ್ಲಿಸುವುದು ಬಿಜೆಪಿ ಪಕ್ಷಕ್ಕೆ ಗೊತ್ತಿದೆ. ಹುಕ್ಕೇರಿ ಇಲ್ಲದಾಗಲೂ ಸಹ ನಾಲ್ಕು ಬಾರಿ ಸುರೇಶ್ ಅಂಗಡಿಯವರು ಆಯ್ಕೆಯಾಗಿದ್ದರು. ನಮ್ಮ ಪಕ್ಷಕ್ಕೆ ಅಷ್ಟೊಂದು ತಾಖತ್ತಿದೆ ಎಂದು ಪಾಟೀಲ್ ಹೇಳಿದ್ದಾರೆ.
ಪ್ರಕಾಶ ಹುಕ್ಕೇರಿಯನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳುವುದರ ಬಗ್ಗೆ ನಮ್ಮ ಹಿರಿಯ ನಾಯಕರು ನಿರ್ಣಯಿಸುತ್ತಾರೆ. ನಮ್ಮ ಪಕ್ಷಕ್ಕೆ ಯಾರೇ ಬಂದರೂ ಸಹ ನಾವು ಸ್ವಾಗತ ಕೋರುತ್ತೇವೆ. ನಮ್ಮ ಪಕ್ಷಕ್ಕೆ ಬಂದ ಮೇಲೆ ಮನೆಯ ಲಕ್ಷ್ಮಿಯಂತೆ, ಅವರು ನಮ್ಮವರೇ ಆಗುತ್ತಾರೆ. ನಮ್ಮ ಮನೆಗಳಿಗೆ ಸೊಸೆಯಂದಿರು ಅಧಿಕವಾಗಿ ಬಂದಷ್ಟು ಮನೆ ದೊಡ್ದದಾಗುತ್ತದೆ ಎಂದು ಇದೇ ವೇಳೆ ಹೇಳಿದರು.