ಚಿಕ್ಕೋಡಿ : ಅಂತಾರಾಷ್ಟ್ರೀಯ ಮ್ಯಾರಥಾನ್ ಓಟದಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಬ್ಬರು ಯವಕರು ಬಂಗಾರ, ಬೆಳ್ಳಿ ಪದಕ ಪಡೆಯುವುದರ ಮೂಲಕ ಕರ್ನಾಟಕ ಕೀರ್ತಿಯನ್ನು ಮತಷ್ಟು ಹೆಚ್ಚಿಸಿದ್ದಾರೆ.
ಅಂತಾರಾಷ್ಟ್ರೀಯ ಮ್ಯಾರಾಥಾನ್ ಫೇ.27 ರಂದು ನೇಪಾಳದ ಪೋಖರಾದಲ್ಲಿ ನಡೆದಿದ್ದು, ಈ ಮ್ಯಾರಾಥಾನ್ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ರಾಮು ಮಾಳಿಯವರು 21 ಕಿ.ಮೀ ಅಂತರದ ಸ್ಪರ್ಧೆಯಲ್ಲಿ ಚಿನ್ನದ ಪದಕ ಮತ್ತು ಮಲಿಕವಾಡ ಗ್ರಾಮದ ಮಹೇಶ ತೊಂಬರ 42 ಕಿ.ಮೀ ಅಂತರದ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಗೋವಾ ರಾಜ್ಯದಲ್ಲಿ ಯುವ ಕ್ರೀಡಾ ಅಭಿವೃದ್ಧಿ ಅಸೋಸಿಯೇಷನ್ ಇಂಡಿಯಾ ಮತ್ತು ಗೋವಾ ಅಸೋಸಿಯೇಷನ್ನಿಂದ ಏರ್ಪಡಿಸಿದ್ದ ಮ್ಯಾರಾಥಾನ್‌ನಲ್ಲಿ ಮಹೇಶ ತೊಂಬರೆ ಹಾಗೂ ಯಕ್ಸಂಬಾ ಪಟ್ಟಣದ ರಾಮು ಮಾಳಿ ಇಬ್ಬರು ಯುವಕರು ಚಿನ್ನದ ಪದಕ ಪಡೆದು, ನೇಪಾಳದಲ್ಲಿ ನಡೆದ ಅಂತಾರಾಷ್ಟ್ರೀಯ ಚಾಂಪಿಯನ್‌ಶಿಪ್ ಸ್ಪರ್ಧೆಗಾಗಿ ಆಯ್ಕೆಯಾಗಿದ್ದರು. ನೇಪಾಳದಲ್ಲಿ ನಡೆದ ಮ್ಯಾರಾಥಾನ್‌ನಲ್ಲಿ ರಾಮು ಚಿನ್ನದ ಪದಕ ಪಡೆದುಕೊಂಡರೆ ಮಹೇಶ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
ಓದಿ : ರಾಷ್ಟ್ರೀಯ ಮ್ಯಾರಾಥಾನ್‌ನಲ್ಲಿ ಚಿನ್ನ: ಗಡಿ ಭಾಗದ ಯುವಕರ ಬಂಗಾರದ ಸಾಧನೆ!
ರಾಮು ಹಾಗೂ ಮಹೇಶ ಇಬ್ಬರು ಮಂಗಳವಾರ ರಾತ್ರಿ ಮಲಿಕವಾಡ ಗ್ರಾಮಕ್ಕೆ ಆಗಮಿಸಿದಾಗ ಅವರಿಗೆ ಸತ್ಕಾರ ಮಾಡುವ ಮೂಲಕ ಅಭಿನಂದನೆ ಸಲ್ಲಿಸಲಾಯಿತು.