ETV Bharat / state

ಚಿಂಚಲಿ ಮಾಯಕ್ಕನ ದರ್ಶನಕ್ಕೆ ಹೊರಟ ಭಕ್ತರಿದ್ದ ಟ್ರ್ಯಾಕ್ಟರ್ ಪಲ್ಟಿ, ಮಹಿಳೆ ಸಾವು - ಜಾಂಬೋಟಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ

ಅಥಣಿ ತಾಲೂಕಿನ ಹಳ್ಯಾಳ್​ ಬ್ಯಾರೇಜ್​ ಮೇಲೆ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್​ ಪಲ್ಟಿಯಾಗಿದೆ.

ಚಿಂಚಲಿ ಮಾಯಕ್ಕನ ದರ್ಶನಕ್ಕೆ ಹೊರಟ ಭಕ್ತರ ಟ್ಯಾಕ್ಟರ್ ಪಲ್ಟಿ

author img

By ETV Bharat Karnataka Team

Published : Aug 31, 2023, 4:43 PM IST

ಚಿಂಚಲಿ ಮಾಯಕ್ಕನ ದರ್ಶನಕ್ಕೆ ಹೊರಟ ಭಕ್ತರ ಟ್ಯಾಕ್ಟರ್ ಪಲ್ಟಿ

ಚಿಕ್ಕೋಡಿ : ಶ್ರಾವಣ ಮಾಸದ ನಿಮಿತ್ತ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದ ಶಕ್ತಿದೇವತೆ ಮಾಯಕ್ಕ ದೇವಿಯ ದರ್ಶನಕ್ಕೆ ಹೊರಟ ಭಕ್ತಾದಿಗಳ ಟ್ರ್ಯಾಕ್ಟರ್ ಪಲ್ಟಿಯಾಗಿ, ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಳ್ಯಾಳ್ ಬ್ಯಾರೇಜ್ ಮೇಲೆ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಮೃತರನ್ನು ಅಥಣಿ ತಾಲೂಕಿನ ಕಕಮರಿ ಗ್ರಾಮದ ಅಕ್ಷತಾ ಕನಮಡಿ (20) ಎಂದು ಗುರುತಿಸಲಾಗಿದೆ. ಹತ್ತಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕಕಮರಿ ಗ್ರಾಮದಿಂದ ಚಿಂಚಲಿ ಮಾಯಕ್ಕ ದೇವಿ ದರ್ಶನಕ್ಕೆ ತೆರಳುತ್ತಿದ್ದಾಗ ದುರ್ಘಟನೆ ನಡೆದಿದೆ. 20ಕ್ಕೂ ಅಧಿಕ ಭಕ್ತರು ಡಬಲ್​ ಟ್ರಾಲಿ ಹೊಂದಿದ್ದ ಟ್ರ್ಯಾಕ್ಟರ್​ನಲ್ಲಿ ಪ್ರಯಾಣಿಸುತ್ತಿದ್ದರು. ಎರಡು ಅಡಿ ಮುಂದೆ ಹೋಗಿದ್ದರೆ ಟ್ರ್ಯಾಕ್ಟರ್​ ನದಿಗೆ ಬೀಳುವ ಸಾಧ್ಯತೆ ಇತ್ತು. ಗಾಯಾಳುಗಳನ್ನು ಅಥಣಿ ತಾಲೂಕಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸರ್ಕಾರಿ ಬಸ್​ ಗೂಡ್ಸ್ ವಾಹನಕ್ಕೆ ಡಿಕ್ಕಿ, ನಾಲ್ಕು ಜನರಿಗೆ ಗಾಯ

ಗೂಡ್ಸ್ ವಾಹನಕ್ಕೆ ಬಸ್ ಡಿಕ್ಕಿ: ಸರ್ಕಾರಿ ಬಸ್ ಹಾಗೂ ಗೂಡ್ಸ್ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ನಾಲ್ವರು ಗಾಯಗೊಂಡಿದ್ದು, ಗೂಡ್ಸ್ ವಾಹನದ ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ (ಬುಧವಾರ) ನಡೆದಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಮಖಂಡಿ ಘಟ್ಟಕ್ಕೆ ಸೇರಿದ ಸರ್ಕಾರಿ ಬಸ್ ಅಥಣಿ ಪಟ್ಟಣಕ್ಕೆ ಆಗಮಿಸುತ್ತಿದ್ದಾಗ ಸವದಿ ದರ್ಗಾ ಬಳಿ ಅಪಘಾತ ಸಂಭವಿಸಿದೆ. ಗೂಡ್ಸ್ ವಾಹನ ಚಾಲಕನನ್ನು ಸ್ಥಳೀಯರ ಸಹಾಯದಿಂದ ಹೊರತೆಗೆದು ಅಥಣಿ ಸಮುದಾಯ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಕರ್ನಾಟಕ-ಗೋವಾ ಹೈವೆಯಲ್ಲಿ 2 ಲಾರಿಗಳ ಮಧ್ಯ ಭೀಕರ ಅಪಘಾತ

ಕರ್ನಾಟಕ-ಗೋವಾ ಹೈವೆಯಲ್ಲಿ 2 ಲಾರಿಗಳ ಮಧ್ಯೆ ಭೀಕರ ಅಪಘಾತ: ಕರ್ನಾಟಕದಿಂದ ಗೋವಾಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಲಾರಿಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಕೆಲ ಗಂಟೆಗಳ ಕಾಲ ಕರ್ನಾಟಕ-ಗೋವಾ ರಸ್ತೆ ಸಂಪರ್ಕ ಕಡಿತವಾಗಿತ್ತು.

ಖಾನಾಪುರ ತಾಲೂಕಿನ ಕಣಕುಂಬಿ ಬಳಿ ಘಟನೆ ಸಂಭವಿಸಿದೆ. ಲಾರಿಗಳ ಮುಂಭಾಗ ನಜ್ಜುಗುಜ್ಜಾಗಿತ್ತು. ಎರಡೂ ಲಾರಿಗಳು ಇಡೀ ರಸ್ತೆಗೆ ಅಡ್ಡಾದಿಡ್ಡಿಯಾಗಿ ನಿಂತಿದ್ದ ಹಿನ್ನೆಲೆಯಲ್ಲಿ ರಸ್ತೆ ಸಂಪರ್ಕ ಸ್ಥಗಿತವಾಗಿತ್ತು. ಭೀಕರ ಅಪಘಾತದ ನಡುವೆಯೂ ಲಾರಿಗಳ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಬ್ಬರು ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಜಾಂಬೋಟಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಸಂಚಾರ ಬಂದ್ ಆಗಿದ್ದರಿಂದ ಕಿಲೋ ಮೀಟರ್​ಗಟ್ಟಲೆ ವಾಹನಗಳು ಸರತಿ ಸಾಲಿನಲ್ಲಿ ನಿಂತಿದ್ದವು.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಖಾನಾಪುರ ಪೊಲೀಸರು ಲಾರಿಗಳನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ತಿಳಿಸಿದ್ದಾರೆ.

ಇದನ್ನೂ ಓದಿ: ಕರ್ತವ್ಯದಲ್ಲಿದ್ದ ಚಾಲಕ ಅಸ್ವಸ್ಥ: ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬಿಎಂಟಿಸಿ ಬಸ್ ಪಲ್ಟಿ, ಹಲವರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.