ETV Bharat / state

ರಮೇಶ ಜಾರಕಿಹೊಳಿ‌ ಕಾರ್‌ ಡ್ರೈವರ್ ಮನೆಯಲ್ಲಿ ಲಕ್ಷಾಂತರ ಮೌಲ್ಯದ ನಗ-ನಾಣ್ಯ ಕಳ್ಳತನ

author img

By

Published : Jul 28, 2021, 8:58 PM IST

ಮಾಜಿ ಸಚಿವ ರಮೇಶ ಜಾರಕಿಹೊಳಿ‌ ಕಾರು ಚಾಲಕ ಸಿದ್ಧಾರೂಢ ಪಾಟೀಲ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ.

Belgavi
ಶ್ವಾನದಳ ಪೊಲೀಸರಿಂದ ಸ್ಥಳ ಪರಿಶೀಲನೆ

ಬೆಳಗಾವಿ: ಮಾಜಿ ಸಚಿವ ರಮೇಶ ಜಾರಕಿಹೊಳಿ‌ ಕಾರು ಚಾಲಕನ‌ ಮನೆಗೆ ಕನ್ನ ಹಾಕಿದ ಖದೀಮರು ಲಕ್ಷಾಂತರ ರೂ.ಮೌಲ್ಯದ ಬಂಗಾರದ ಆಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಗೋಕಾಕ್​​ನಲ್ಲಿ ನಡೆದಿದೆ.

ಶ್ವಾನದಳ ಪೊಲೀಸರಿಂದ ಸ್ಥಳ ಪರಿಶೀಲನೆ

ಗೋಕಾಕ್​​ ಪಟ್ಟಣದ ಪಿಡಬ್ಲ್ಯೂ ಕಚೇರಿ ಸಮೀಪದಲ್ಲಿರುವ ಸಿದ್ಧಾರೂಢ ಪಾಟೀಲ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಸಿದ್ದುಗೌಡ ಎಂದು ಕರೆಯಿಸಿಕೊಳ್ಳುವ ಸಿದ್ಧಾರೂಢ ಪಾಟೀಲ ಹಲವು ವರ್ಷಗಳಿಂದ ರಮೇಶ ಜಾರಕಿಹೊಳಿ‌ ಅವರ ಕಾರು ಚಾಲಕರಾಗಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಕಳೆದೊಂದು ವಾರಗಳಿಂದ ಬಿರುಸಿನ ಚಟುವಟಿಕೆ ಹಿನ್ನೆಲೆಯಲ್ಲಿ ರಮೇಶ ಜಾರಕಿಹೊಳಿ‌ ಅವರೊಂದಿಗೆ ಸಿದ್ದುಗೌಡ ಬೆಂಗಳೂರಿಗೆ ಹೋಗಿದ್ದಾರೆ. ಹೀಗಾಗಿ ಪತ್ನಿ ಅಂಜಲಿ ಮನೆಗೆ ಬೀಗ ಹಾಕಿಕೊಂಡು ತಮ್ಮ ತವರು ಮನೆಗೆ ತೆರಳಿದ್ದಾರೆ. ಹೋಗುವ ಸಂದರ್ಭದಲ್ಲಿ ಬೀಗದ ಕೀಲಿಯನ್ನು ಮನೆಯ ಮುಂಭಾಗದಲ್ಲಿ ಬಚ್ಚಿಟ್ಟು ತೆರಳಿದ್ದರಂತೆ.

ಇದನ್ನು ನೋಡಿದ ಯಾರೋ ಅಪರಿಚಿತರು ಮನೆಯ ಕೀಲಿ ತೆಗೆದು ಮಂಗಳ ಸೂತ್ರ, ಬಂಗಾರದ ಇತರ ವಸ್ತುಗಳು ಸೇರಿದಂತೆ ಅಂದಾಜು 3 ಲಕ್ಷಕ್ಕೂ ಹೆಚ್ಚಿನ ಚಿನ್ನಾಭರಣ ಹಾಗು ನಗದನ್ನು ದೋಚಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮೂಲಗಳ ಪ್ರಕಾರ, ಮನೆಯಲ್ಲಿದ್ದ ಅಂದಾಜು 2 ಕೆಜಿಗೂ ಹೆಚ್ಚಿನ ಬಂಗಾರದ ಆಭರಣ, ಲಕ್ಷಾಂತರ ರೂ. ಕದ್ದು ಪರಾರಿಯಾಗಿದ್ದಾರೆ ಎಂಬ ಮಾಹಿತಿ ದೊರೆತಿದ್ದು, ಸಂಪೂರ್ಣ ತನಿಖೆ ನಂತರವಷ್ಟೇ ಸತ್ಯಾಸತ್ಯತೆ ತಿಳಿಯಲಿದೆ.

ಈ ಬಗ್ಗೆ ಸಿದ್ಧಾರೂಢ ಪಾಟೀಲ ಪತ್ನಿ ಅಂಜಲಿ ಗೋಕಾಕ್​​ ಶಹರ ಠಾಣೆಯಲ್ಲಿ ‌ದೂರು ದಾಖಲಿಸಿದ್ದಾರೆ. ದೂರಿನ ಮೇರೆಗೆ ಪೊಲೀಸರು, ಶ್ವಾನದಳ ಸಿಬ್ಬಂದಿ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.