ETV Bharat / state

ಬೆಳಗಾವಿ ಜಿಲ್ಲೆಯ ಟೆಕ್ಸ್​​ಟೈಲ್ ಪಾರ್ಕ್​ಗೆ ಭೇಟಿ ಜವಳಿ ಸಚಿವರ ಭೇಟಿ

ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲ ಅವರು ಮೊದಲ ಬಾರಿಗೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೊರಗಾಂವ್​ ಗ್ರಾಮದ ಟೆಕ್ಸ್​​ಟೈಲ್ ಪಾರ್ಕ್​ಗೆ ಭೇಟಿ ನೀಡಿ ಪರಿಶೀಲಿಸಿದರು.

author img

By

Published : Feb 25, 2020, 10:45 PM IST

textile-minister-who-visited-textile-park-in-belgaum

ಚಿಕ್ಕೋಡಿ: ಜವಳಿ ಖಾತೆಯ ಸಚಿವ ಶ್ರೀಮಂತ ಪಾಟೀಲ್​ ಅವರು ಮೊದಲ ಬಾರಿಗೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೊರಗಾಂವ್​ ಗ್ರಾಮದ ಟೆಕ್ಸ್​​ಟೈಲ್ ಪಾರ್ಕ್​ಗೆ ಭೇಟಿ ನೀಡಿದ್ದರು.

ಟೆಕ್ಸ್ ಟೈಲ್ ಪಾರ್ಕ್​ಗೆ ಭೇಟಿ ನೀಡಿದ ಜವಳಿ ಸಚಿವ

ಸುಮಾರು 75 ಎಕರೆ ಜಮೀನಿನಲ್ಲಿ‌ ನಿರ್ಮಾಣವಾದ ಟೆಕ್ಸ್​​ಟೈಲ್ ಪಾರ್ಕ್​ನ ವೀಕ್ಷಣೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊದಲ ಬಾರಿಗೆ ಜವಳಿ ಖಾತೆ ತೆಗೆದುಕೊಂಡ ಬಳಿಕ ಟೆಕ್ಸ್ ಟೈಲ್ ಪಾರ್ಕ್​ಗೆ ಭೇಟಿ ನೀಡಿದ್ದೇನೆ. ಇಲ್ಲಿ ಮೂಲಸೌಕರ್ಯಗಳಾದ ರಸ್ತೆ, ವಿದ್ಯುತ್, ನೀರಿನ ಕೊರತೆ‌ ಇವೆ. ಆದಷ್ಟು ಬೇಗ ಇಲ್ಲಿನ ಜನತೆಗೆ ಮೂಲ ಸೌಕರ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಜವಳಿ ಉದ್ಯಮದಲ್ಲಿ ಈಗಾಗಲೇ ಹಲವು ಉದ್ಯಮಿಗಳು ಸಾಲ ತೆಗೆದುಕೊಂಡು ಜವಳಿ ಉದ್ಯಮ ನಡೆಸುತ್ತಿದ್ದು, ಅವರೆಲ್ಲ ನಷ್ಟದಲ್ಲಿದ್ದಾರೆ ಎಂದರು. ಇನ್ನು, ಕೆಲ ಕೆಲವರು ಮಿಲ್​ಗಳನ್ನು ನಡೆಸುತ್ತಲೇ ಸರ್ಕಾರಕ್ಕೆ ಮೋಸ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಇದು ಕಲಿಯುಗ, ಇಂತಹ ಘಟನೆ ನಡೆಯಬಾರದು. ಆದಷ್ಟು ಬೇಗ ಇಂತಹ ಮಿಲ್​ಗಳನ್ನ ಬಂದ್​ ಮಾಡಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.