ಚಿಕ್ಕೋಡಿ: ಭಿಕ್ಷುಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಶಿಕ್ಷಕರೊಬ್ಬರಿಗೆ ಸಾರ್ವಜನಿಕರು ಹಿಡಿದು ಥಳಿಸಿದ ಘಟನೆ ಕುಡಚಿ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಶಿಕ್ಷಕ ಆರಗೆ ಎಂಬುವವರ ವಿರುದ್ದ ಭಿಕ್ಷುಕಿಯೊಂದಿಗೆ ಅಸಭ್ಯ ವರ್ತನೆ ತೋರಿದ ಆರೋಪ ಕೇಳಿ ಬಂದಿದೆ.
ಹೌದು, ಕುಡಿದ ಅಮಲಿನಲ್ಲಿದ್ದ ಶಿಕ್ಷಕನ ಬಳಿ ಭಿಕ್ಷೆ ಬೇಡಲು ಬಂದ ಮಹಿಳೆಗೆ 20 ರೂಪಾಯಿ ನೀಡುತ್ತೇನೆ ಎಂದು ಹೇಳಿ ಅಸಭ್ಯವಾಗಿ ಮಾತನಾಡಿದ್ದಾನೆ. ಇದರಿಂದ ರೊಚ್ಚಿಗೆದ್ದ ಭಿಕ್ಷುಕಿ ಮಹಿಳೆ ಸಾರ್ವಜನಿಕರಿಗೆ ತಿಳಿಸಿದ್ದಾರೆ. ಶಿಕ್ಷಕನ ಅಸಭ್ಯ ವರ್ತನೆ ಕಂಡು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಓದಿ: ಶ್ರೀಕಾಳಹಸ್ತಿಯಲ್ಲಿ ಭೀಕರ ರಸ್ತೆ ಅಪಘಾತ.. ನಾಲ್ವರ ದುರ್ಮರಣ, 8 ಮಂದಿ ಸ್ಥಿತಿ ಗಂಭೀರ