ETV Bharat / state

ಮೀಸಲಾತಿ ವಿಚಾರ : ಚೆನ್ನಮ್ಮ ಜಯಂತಿ ಬಹಿಷ್ಕಾರದ ಎಚ್ಚರಿಕೆ ನೀಡಿದ ಮೃತ್ಯುಂಜಯ ಶ್ರೀ - ಈಟಿವಿ ಭಾರತ ಕನ್ನಡ

ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯೊಳಗೆ ಸರ್ಕಾರ ಸರ್ವಪಕ್ಷ ಸಭೆ ಕರೆದು ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೋಡುವ ನಿರ್ಧಾರ ಪ್ರಕಟಿಸಬೇಕು. ಇಲ್ಲದಿದ್ದರೆ ಚೆನ್ನಮ್ಮ ಜಯಂತಿಯನ್ನು ಸಮಾಜ ಬಹಿಷ್ಕರಿಸಲಿದೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

swamiji-urges-to-reservation-for-panchamasali-community
ಮೀಸಲಾತಿ ವಿಚಾರ : ಚೆನ್ನಮ್ಮ ಜಯಂತಿ ಬಹಿಷ್ಕಾರದ ಎಚ್ಚರಿಕೆ ನೀಡಿದ ಮೃತ್ಯುಂಜಯ ಶ್ರೀ
author img

By

Published : Oct 8, 2022, 3:27 PM IST

ಬೆಳಗಾವಿ: ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯೊಳಗೆ ಸರ್ಕಾರ ಸರ್ವಪಕ್ಷ ಸಭೆ ಕರೆಯಬೇಕು. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡುವ ನಿರ್ಧಾರ ಪ್ರಕಟಿಸಬೇಕು. ಇಲ್ಲವಾದರೆ ಸರ್ಕಾರ ಆಚರಿಸುವ ಚೆನ್ನಮ್ಮ ಜಯಂತಿಯನ್ನೇ ಇಡೀ ಸಮಾಜ ಬಹಿಷ್ಕರಿಸಲಿದೆ ಎಂದು ರಾಜ್ಯ ಸರ್ಕಾರಕ್ಕೆ ಕೂಡಲಸಂಗಮ ಪೀಠದ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ‌.

ಪಂಚಮಸಾಲಿ ಮೀಸಲಾತಿ ಬಗ್ಗೆ ಸಿಎಂ ವಿರುದ್ಧ ಅಸಮಾಧಾನ : ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸ್ವಾಮೀಜಿ, ಲಿಂಗಾಯತ ಪಂಚಮಸಾಲಿ ಸಮಾಜ ಎರಡು ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪದೆ ಪದೇ ಕೊಟ್ಟ ಮಾತಿಗೆ ತಪ್ಪುತ್ತಿದ್ದಾರೆ.

ಈ ಕಾರಣಕ್ಕೆ ಶಿಗ್ಗಾಂವಿಯಲ್ಲಿರುವ ಸಿಎಂ ಬೊಮ್ಮಾಯಿ ಮನೆ ಮುಂದೆ ಧರಣಿ ಮಾಡಲಾಗಿತ್ತು. ಇದೇ ವೇಳೆ, ಸದನದಲ್ಲಿ ಶಾಸಕ ಬಸವಗೌಡ ಪಾಟೀಲ ಯತ್ನಾಳ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಆಗ ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದರು.

ಇದರಿಂದ ಶಾಸಕ ಯತ್ನಾಳ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಬಾವಿಗಿಳಿದು ಹೋರಾಟ ಮಾಡಿದ್ದು, ಆಗ ಸಿಎಂ ಬೊಮ್ಮಾಯಿ ಒಂದು ವಾರದೊಳಗೆ ಸರ್ವಪಕ್ಷ ಸಭೆ ನಡೆಸುವ ಭರವಸೆ ನೀಡಿದ್ದರು. ಅಂದು ಸಭಾಧ್ಯಕ್ಷರ ಮಾತಿಗೆ ಗೌರವ ಕೊಟ್ಟು ಶಾಸಕರು ಪ್ರತಿಭಟನೆ ಹಿಂಪಡೆದ್ದರು. ಆದರೆ ನಿನ್ನೆ ಕೇವಲ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಸಂಬಂಧವಷ್ಟೇ ಸರ್ವಪಕ್ಷ ಸಭೆ ನಡೆಸಿದ್ದಾರೆ ಎಂದು ಹೇಳಿದರು.

ಮೀಸಲಾತಿ ವಿಚಾರ : ಚೆನ್ನಮ್ಮ ಜಯಂತಿ ಬಹಿಷ್ಕಾರದ ಎಚ್ಚರಿಕೆ ನೀಡಿದ ಮೃತ್ಯುಂಜಯ ಶ್ರೀ

ಮೀಸಲಾತಿ ಹೋರಾಟಕ್ಕೆ ತಾರ್ಕಿಕ ಅಂತ್ಯ ಹಾಡಬೇಕು : ಎಸ್ಸಿ,ಎಸ್ಟಿ ಮೀಸಲಾತಿ ಹೆಚ್ಚಳ ಸಂಬಂಧ ನಡೆದ ಸಭೆ ಬಗ್ಗೆ ನನಗೆ ಸಂತೋಷ ಇದೆ. ಈ ಸಭೆಯಲ್ಲೇ ಪಂಚಮಸಾಲಿ ಮೀಸಲಾತಿ ಕೊಡುವ ನಿಟ್ಟಿನಲ್ಲಿ ಚರ್ಚೆ ನಡೆಸಬೇಕಿತ್ತು. ಆಗ ಮೀಸಲಾತಿಗೆ ಹೋರಾಟ ಮಾಡುತ್ತಿರುವ ಸಮಾಜ ಬಾಂಧವರು ತುಸು ನಿಟ್ಟುಸಿರು ಬಿಡುವಂತೆ ಆಗುತ್ತಿತ್ತು. ನಮ್ಮ ಹೋರಾಟದ ಫಲದಿಂದ ಸರ್ವಪಕ್ಷ ಸಭೆ ಕರೆಯಲಾಗಿದೆ.

ಈ ಬಗ್ಗೆ ನಮಗೆ ಸಂತೋಷ ಇದೆ. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವ ಸಂಬಂಧ ಎರಡ್ಮೂರು ದಿನದೊಳಗೆ ಸರ್ವಪಕ್ಷ ಸಭೆ ಕರೆಯಬೇಕು. ಮೀಸಲಾತಿ ನೀಡುವ ಸಂಬಂಧ ಸರ್ಕಾರ ತನ್ನ ಸ್ಪಷ್ಟ ನಿಲುವನ್ನು ತಿಳಿಸಬೇಕು. ನಮ್ಮ ಹೋರಾಟಕ್ಕೆ ತಾರ್ಕಿಕ ಅಂತ್ಯ ಹಾಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸುತ್ತೇನೆ ಎಂದು ಹೇಳಿದರು.

ಅಕ್ಟೋಬರ್​ 21ಕ್ಕೆ ಬೃಹತ್ ಸಭೆ : ಪಂಚಮಸಾಲಿ ಸಮಾಜಕ್ಕೆ ನ್ಯಾಯ ಒದಗಿಸಿ ಕೊಡದಿದ್ದರೆ ಹುಕ್ಕೇರಿಯಲ್ಲಿ ಅಕ್ಟೋಬರ್​ 21ಕ್ಕೆ ಬೃಹತ್ ಸಭೆ ನಡೆಯಲಿದೆ. ಈ ಸಭೆಯಲ್ಲಿ ವಿಧಾನಸಭೆ ಮುತ್ತಿಗೆ ಹಾಕುವ ದಿನಾಂಕವನ್ನು ಪ್ರಕಟ ಮಾಡಲಾಗುತ್ತದೆ. ಅ.23 ಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯಿದೆ, ಅಷ್ಟರೊಳಗೆ ಸರ್ವಪಕ್ಷ ಸಭೆ ಕರೆಯಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.

ಇದನ್ನೂ ಓದಿ : ನನಗೆ ಮಂತ್ರಿ ಸ್ಥಾನ ಬೇಡ, ಪಂಚಮಸಾಲಿ ಮೀಸಲಾತಿ ಕೊಡಿ: ಶಾಸಕ ಬಸನಗೌಡ ಪಾಟೀಲ ಯತ್ನಾಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.