ಬೆಳಗಾವಿ: ಪೋಷಕರು ಮಕ್ಕಳನ್ನು ವಿದ್ಯಾಭ್ಯಾಸಕ್ಕೆಂದು ಶಾಲಾ-ಕಾಲೇಜುಗಳಿಗೆ ಕಳುಹಿಸುತ್ತಾರೆ. ಆದರೆ ಇದನ್ನೆಲ್ಲ ಮರೆತಂತಿರುವ ವಿದ್ಯಾರ್ಥಿಗಳು ಮಾಡುತ್ತಿರುವುದೇನು ಅನ್ನೋದನ್ನು ಒಮ್ಮೆ ನೋಡಿ. ಇಲ್ಲಿ ಒಬ್ಬ ವಿದ್ಯಾರ್ಥಿಗೆ ನಾಲ್ಕೈದು ಮಂದಿ ವಿದ್ಯಾರ್ಥಿಗಳು ಮನಬಂದಂತೆ ಥಳಿಸಿದ್ದಾರೆ.
ಈ ಘಟನೆ ನಡೆದಿರುವುದು ಎಲ್ಲಿ ಅನ್ನೋದು ತಿಳಿದು ಬಂದಿಲ್ಲ. ಒಬ್ಬ ವಿದ್ಯಾರ್ಥಿಯನ್ನು ಮನಬಂದಂತೆ ಐವರು ವಿದ್ಯಾರ್ಥಿಗಳು ಸೇರಿ ಥಳಿಸಿದ್ದಾರೆ.