ಬೆಳಗಾವಿ: ತಂದೆಯ ಜನ್ಮದಿನದಂದೇ 17 ವರ್ಷದ ಮಗನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಖಾನಾಪೂರದ ಹಲಕರ್ಣಿ ಗ್ರಾಮದಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಹಲಕರ್ಣಿ ಗ್ರಾಮದ ಪ್ರಥಮೇಶ ರಾಜು ಕೋಳಿ (17) ಮೃತ ದುರ್ದೈವಿ. ಇವರ ತಂದೆ ರಾಜು ಕೋಳಿ ಮೊಬೈಲ್ ಕೊಡಿಸಲಿಲ್ಲವೆಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ತಂದೆಗೆ ಮೊಬೈಲ್ ಕೊಡಿಸುವಂತೆ ಖಾನಾಪೂರ ಪಟ್ಟಣದ ಮರಾಠಾ ಮಂಡಳ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಪ್ರಥಮೇಶ ಎರಡು ದಿನಗಳಿಂದ ಹಠ ಹಿಡಿದಿದ್ದನಂತೆ. ಒಂದೆರಡು ದಿನಗಳ ಕಾಲ ಮನೆಯಲ್ಲಿರುವ ಹಳೆಯ ಫೋನ್ ಬಳಸು, ಆಮೇಲೆ ಫೋನ್ ಕೊಡಿಸುತ್ತೇನೆ ಎಂದು ತಿಳಿಸಿದ್ದರಂತೆ. ಅಷ್ಟಕ್ಕೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇವತ್ತು ಪ್ರಥಮೇಶ ತಂದೆ ರಾಜು ಕೋಳಿಯವರ ಹುಟ್ಟು ಹಬ್ಬವಾದ್ದರಿಂದ ಮಗನಿಗೆ ಫೋನ್ ಕೊಡಿಸಲು ಹತ್ತು ಸಾವಿರ ಹಣವನ್ನು ತೆಗೆದಿಟ್ಟಿದ್ದರಂತೆ. ಆದ್ರೆ, ತಂದೆ ಕೆಲಸಕ್ಕೆ ಹಾಗೂ ತಾಯಿ ಹೊಲಕ್ಕೆ ಹೋಗಿ ಮನೆಗೆ ಬರುವಷ್ಟರಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಬಂದಿದೆ..
ಇದನ್ನೂ ಓದಿ: ಟೋಲ್ ಸಿಬ್ಬಂದಿ ಜೊತೆಗಿನ ಗಲಾಟೆ ಪ್ರಕರಣ: ಪೊಲೀಸ್ ಆಯುಕ್ತರಿಗೆ ಗ್ರೇಟ್ ಖಲಿ ದೂರು