ಬೆಳಗಾವಿ: ಸಾರಿಗೆ ಸಚಿವ ಲಕ್ಷ್ಮಣ್ ಸವದಿಯವರ ತವರು ಜಿಲ್ಲೆಯಲ್ಲಿ ಜನ ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿ ಬಸ್‌ನಲ್ಲಿ ಕಿಕ್ಕಿರಿದು ಪ್ರಯಾಣಿಸಿದ್ದಾರೆ.
ಬೈಲಹೊಂಗಲ ತಾಲೂಕಿನಿಂದ ನಗರಕ್ಕೆ ಬರುವ ಸಾರಿಗೆ ಬಸ್‌ನಲ್ಲಿ ಅಂದಾಜು 70ಕ್ಕಿಂತಲೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು. ಬೆಳಗ್ಗೆ ಹಾಗೂ ಸಂಜೆಯ ವೇಳೆ ಈ ರೀತಿಯ ಸಂಚಾರ ಸಾಮಾನ್ಯವಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ.
ಲಾಕ್ಡೌನ್ ಸಡಿಲಿಕೆಯ ನಂತರ ಸಾರಿಗೆ ಇಲಾಖೆ ಬಸ್‌ಗಳಲ್ಲಿ ಪ್ರಯಾಣಿಕರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಮೂವರು ಕೂರುವ ಸೀಟಿನಲ್ಲಿ ಇಬ್ಬರು, ಇಬ್ಬರು ಕೂರುವ ಸೀಟಿನಲ್ಲಿ ಒಬ್ಬರು ಕುಳಿತು ಪ್ರಯಾಣಿಸಬೇಕು ಎಂಬ ನಿಯಮವಿದೆ. ಈ ಬಸ್ ಸಂಚಾರದಲ್ಲಿ ಪ್ರಯಾಣಿಕರು ಈ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿದ್ದು ಕಂಡುಬಂತು.