ಬೆಳಗಾವಿ: ಗೋ ರಕ್ಷಕ ಶಿವು ಉಪ್ಪಾರರದ್ದು ಆತ್ಮಹತ್ಯೆ ಅಲ್ಲ, ಅದು ಕೊಲೆ. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲೇಬೇಕು ಎಂದು ಗೋರಕ್ಷಕ ದಳ, ರೈತ ಸಂಘಟನೆಗಳು, ಸಾಮಾಜಿ ಸಂಘಟನೆ ಹಾಗೂ ಇನ್ನೂ ಹತ್ತಾರು ಸಂಘಟನೆಗಳ ಕಾರ್ಯಕರ್ತರು ಪಟ್ಟಣದ ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದಲ್ಲಿ ನೂರಾರು ಪ್ರತಿಭಟನಾಕಾರರು ಪ್ರತಿಭಟನೆ ಮಾಡುತ್ತಿದ್ದು, ಅಥಣಿ ತಾಲೂಕಿನ ತಹಶೀಲ್ದಾರ್‌ರ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು. ರಾಜ್ಯ ಸರ್ಕಾರದ ದುರ್ವರ್ತನೆಯನ್ನು ಖಂಡಿಸಿದರು.