ಚಿಕ್ಕೋಡಿ : ಕಾಗವಾಡ ತಾಲೂಕಿನ ಸಿದ್ದೇವಾಡಿ ಗ್ರಾಮದ ಮುಖಂಡ ಶಿವರಾಯ ಕಾಳೇಲಿ ಎಂಬವರು ತಮ್ಮ 59ನೇ ಹುಟ್ಟುಹಬ್ಬವನ್ನು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಸೀರೆ, ಟವೆಲ್, ಟೋಪಿ, 5 ಕೆ.ಜಿ ಸಕ್ಕರೆ 10 ಕೆ.ಜಿ ಗೋದಿಯಿರುವ ಪಡಿತರ ಕಿಟ್ ನೀಡುವ ಮೂಲಕ ವಿಭಿನ್ನವಾಗಿ ಆಚರಿಸಿಕೊಂಡರು.
ಕೊರೊನಾ ಸಂಕಷ್ಟದ ಸಮಯದಲ್ಲಿ ಕೋವಿಡ್-19 ಹರಡದಂತೆ ಜಾಗೃತಿ ಮೂಡಿಸುವಲ್ಲಿ ಕೊರೊನಾ ವಾರಿಯರ್ಸ್ಗಳಾದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತ ಮಹತ್ವದ ಕೆಲಸ ನಿಭಾಯಿಸಿದ್ದರು.
ಸಂಕಷ್ಟದ ಸ್ಥಿತಿಯಲ್ಲಿ ಜನರ ರಕ್ಷಣೆಗೆ ಧಾವಿಸಿದವರನ್ನು ಹುಟ್ಟುಹಬ್ಬದ ನಿಮಿತ್ತ ಗೌರವಿಸುತ್ತಿರುವುದು ಸೌಭಾಗ್ಯ ಎಂದು ಶಿವರಾಯ ಕಾಳೇಲಿ ಹೇಳಿದರು.
ಇಂತಹ ಉತ್ತಮ ಕೆಲಸ ಮಾಡಿದ ಶಿವರಾಯ ಕಾಳೇಲಿ ಅವರನ್ನು ದೇವರು ಆಯುಷ್ಯ, ಆರೋಗ್ಯ ಮತ್ತು ಸುಖ ಶಾಂತಿ ನೀಡಿ ಕಾಪಾಡಲಿ ಎಂದು ಕೌಲಗುಡ್ಡ ಮಠದ ಅಮರೇಶ್ವರ ಮಹರಾಜರು ಆಶಿಸಿದರು.