ETV Bharat / state

ಗಡಿ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳದ ಸುಪ್ರೀಂ ಕೋರ್ಟ್: ಕಾನೂನು ಸಮರದಲ್ಲಿ ಯಾರಿಗೆ ಜಯ? - ಪ್ರಧಾನಿ ಇಂದಿರಾ ಗಾಂಧಿ ಸರ್ಕಾರ

ಬುಧವಾರ ನಡೆಯಬೇಕಿದ್ದ ಮಹಾರಾಷ್ಟ್ರ ಕರ್ನಾಟಕ ಗಡಿ ವಿವಾದದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳು ಬೇರೆ ಅರ್ಜಿ ವಿಚಾರಣೆ ನಡೆಸುತ್ತಿದ್ದ ಕಾರಣಕ್ಕೆ ಕೈಗೆತ್ತಿಕೊಂಡಿಲ್ಲ.

Supreme Court
ಸುಪ್ರೀಂ ಕೋರ್ಟ್​
author img

By

Published : Dec 1, 2022, 7:37 AM IST

Updated : Dec 1, 2022, 8:33 AM IST

ಬೆಳಗಾವಿ: ದೇಶದ ಗಮನ ಸೆಳೆದಿರುವ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಪ್ರಕರಣದ ಅಂತಿಮ ವಿಚಾರಣೆ ಸುಪ್ರೀಂ ಕೋರ್ಟ್‌ನ ಹೊಸಪೀಠದಲ್ಲಿ ನಿನ್ನೆ ಆರಂಭವಾಗಬೇಕಿತ್ತು. ಬುಧವಾರ ನ್ಯಾ. ಕೆ.ಎಂ.ಜೋಸೆಫ್‌, ನ್ಯಾ.ಅನಿರುದ್ಧ ಬೋಸ್‌, ನ್ಯಾ.ಹೃಷಿಕೇಸ್‌ ರಾಯ್‌ ಪೀಠದಲ್ಲಿ ಮಹಾರಾಷ್ಟ್ರ 2004ರಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುವುದು ಅಂತಿಮವಾಗಿತ್ತು. ಆದರೆ ಕೊನೇ ಕ್ಷಣದಲ್ಲಿ ನ್ಯಾಯಮೂರ್ತಿಗಳು ಜಲ್ಲಿಕಟ್ಟು ವಿವಾದಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸುತ್ತಿದ್ದರಿಂದ ಗಡಿ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ, ವಿಚಾರಣೆ ಇನ್ನೊಂದು ದಿನ ನಡೆಯುವ ಸಾಧ್ಯತೆಯಿದೆ.

ಮಹಾರಾಷ್ಟ್ರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿ ತಿರಸ್ಕಾರವಾಗುತ್ತೋ? ಪುರಸ್ಕಾರವಾಗುತ್ತೋ? ಎಂಬ ಕುತೂಹಲವಿತ್ತು. ಕಾನೂನು ಸಮರದಲ್ಲಿ ಮೇಲುಗೈ ಸಾಧಿಸಲು ಉಭಯ ರಾಜ್ಯಗಳು ಸಿದ್ಧತೆ ಮಾಡಿಕೊಂಡಿದ್ದವು. ಈಗ ಮುಂದಿನ ದಿನಾಂಕ ಘೋಷಣೆಯಾಗುವವರೆಗೆ ಕಾಯಬೇಕು.

ಬೆಳಗಾವಿ, ಖಾನಾಪುರ, ನಿಪ್ಪಾಣಿ, ಬೀದರ್, ಬಾಲ್ಕಿ, ಕಾರವಾರ ಸೇರಿದಂತೆ ಕರ್ನಾಟಕ ಗಡಿಭಾಗದಲ್ಲಿರುವ 865 ಮರಾಠಿ ಭಾಷಿಕ ಪ್ರದೇಶಗಳು ನಮಗೆ ಸೇರಬೇಕು ಎಂಬುವುದು ಮಹಾರಾಷ್ಟ್ರದ ವಾದ. ಮಹಾರಾಷ್ಟ್ರ ಏಕೀಕರಣ ಸಮಿತಿ ಕೂಡ ಇದೇ ವಾದವನ್ನು ಹಲವು ವರ್ಷಗಳಿಂದ ಮಂಡಿಸುತ್ತಲೇ ಬಂದಿದೆ. ಮಹಾರಾಷ್ಟ್ರ ಸರ್ಕಾರ ಕೂಡ ಆರಂಭದಿಂದಲೂ ಎಂಇಎಸ್ ಬೆಂಬಲಕ್ಕೆ ನಿಂತಿದೆ. ಗಡಿ ವಿವಾದ ಸಂಬಂಧ ಎಂಇಎಸ್ ಗಡಿಭಾಗದಲ್ಲಿ ಸಾಕಷ್ಟು ಹಿಂಸಾಚಾರಗಳನ್ನೂ ನಡೆಸಿದೆ. ಇದಕ್ಕಾಗಿ ಗಡಿಯಲ್ಲಿ ಸಾಕಷ್ಟು ಸಾವು-ನೋವುಗಳು ಉಂಟಾಗಿವೆ. ನಂತರ ತಾನೇ ಒಪ್ಪಿಕೊಂಡ ಮಹಾಜನ ಆಯೋಗದ ವರದಿ ತಿರಸ್ಕರಿಸಿ 2004ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. 19 ವರ್ಷಗಳ ಬಳಿಕ ಈ ಪ್ರಕರಣದ ಅಂತಿಮ ವಿಚಾರಣೆ ಸುಪ್ರೀಂ ಕೋರ್ಟ್ ಹೊಸ ಪೀಠದ ಎದುರು ಬಂದಿದೆ.

ಫಸಲ್‌ ಅಲಿ ಆಯೋಗದ ವರದಿಯಲ್ಲೇನಿದೆ?: 1953ರಲ್ಲಿ ಭಾಷೆಯ ಆಧಾರದ ಮೇಲೆ ರಾಜ್ಯಗಳ ವಿಂಗಡಣೆ ಆಗಬೇಕು ಎಂಬ ಕೂಗು ದೇಶದ ಹಲವೆಡೆ ವ್ಯಾಪಕವಾಗಿ ಕೇಳಿ ಬಂದಿತ್ತು. ದೇಶವಾಸಿಗಳ ಜನರ ಒತ್ತಡಕ್ಕೆ ಮಣಿದ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಸರ್ಕಾರ 1953ರಲ್ಲಿ ಫಜಲ್ ಅಲಿ ಅಧ್ಯಕ್ಷತೆಯಲ್ಲಿ ಮೂರು ಜನ ಸದಸ್ಯರ ಸಮಿತಿ ರಚಿಸಿತ್ತು. ಈ ಸಮಿತಿ ದೇಶಾದ್ಯಂತ ಸಂಚರಿಸಿ ಜನರ ಅಭಿಪ್ರಾಯ ಸಂಗ್ರಹಿಸಿ 1955 ರಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.

ಈ ವರದಿ ಅಂಗೀಕರಿಸಿದ ಕೇಂದ್ರ ಸರ್ಕಾರ ಭಾಷೆಯ ಆಧಾರದ ಮೇಲೆ ರಾಜ್ಯಗಳ ಮರುವಿಂಗಡನೆ ಮಾಡಿತು. ಆಗ ಮುಂಬೈ ಪ್ರಾಂತ್ಯದಲ್ಲಿದ್ದ ಬೆಳಗಾವಿ ಸೇರಿ ಗಡಿಭಾಗದ 865 ಗ್ರಾಮಗಳು ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಂಡವು. ಇದಕ್ಕೆ ಮಹಾರಾಷ್ಟ್ರ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ದಶಕಗಳ ಕಾಲ ಹೋರಾಟ ನಡೆಸಿತ್ತು. ಬಳಿಕ ಮಹಾರಾಷ್ಟ್ರ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿತ್ತು.

ಇದನ್ನೂ ಓದಿ: ಜತ್ತ ಬಳಿಕ ಅಕ್ಕಲಕೋಟ ತಾಲೂಕಿನ ಜನರಿಂದ ಕರ್ನಾಟಕ ಸೇರಲು ಒಲವು

ಅಂದಿನ ಪ್ರಧಾನಿ ಇಂದಿರಾ ಗಾಂಧಿ ಸರ್ಕಾರ 1966ರಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮೆಹರ್‌ಚಂದ್ ಮಹಾಜನ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿತು. ಮಹಾಜನ್ ನೇತೃತ್ವದ ಸಮಿತಿ ಕೂಡ 1967ರಲ್ಲಿ ಕೇಂದ್ರಕ್ಕೆ ಸಲ್ಲಿಸಿದ ವರದಿಯಲ್ಲಿ ಬೆಳಗಾವಿ ಸೇರಿ 865 ಪ್ರದೇಶಗಳು ಕರ್ನಾಟಕಕ್ಕೆ ಸೇರಿದ್ದು ಎಂದು ಉಲ್ಲೇಖಿಸಲಾಗಿತ್ತು. 1987ರಲ್ಲಿ ಮಹಾರಾಷ್ಟ್ರ ನಾಯಕರು ಬೆಳಗಾವಿಗೆ ಲಗ್ಗೆ ಇಟ್ಟು ಸಾಕಷ್ಟು ಹಿಂಸಾಚಾರ ನಡೆಸಿತ್ತು. ಈ ಗಲಭೆ ನಿಯಂತ್ರಣಕ್ಕೆ ನಡೆದ ಗೋಲಿಬಾರ್‌ನಲ್ಲಿ 11ಕ್ಕೂ ಅಧಿಕ ಜನರೂ ಪ್ರಾಣ ಕಳೆದುಕೊಂಡಿದ್ದಾರೆ. ಬಳಿಕ ಮಹಾಜನ್ ವರದಿಯನ್ನೂ ತಿರಸ್ಕರಿಸಿದ್ದ ಮಹಾರಾಷ್ಟ್ರ ಸರ್ಕಾರ 2004ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

ತಿರಸ್ಕಾರವೋ? ಪುರಸ್ಕಾರವೋ?: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸಂಬಂಧ ಮಹಾರಾಷ್ಟ್ರ ಸರ್ಕಾರ 2004ರಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ 19 ವರ್ಷಗಳ ಬಳಿಕ ಅಂತಿಮ ವಿಚಾರಣೆಗೆ ಬಂದಿದೆ. ಗಡಿ ವಿವಾದ ಸುಪ್ರೀಂ ಕೋರ್ಟ್ ವ್ಯಾಪ್ತಿಗೆ ಬರುತ್ತೋ? ಇಲ್ವೋ? ಎಂಬ ಬಗ್ಗೆ ನ್ಯಾ.ಕೆ.ಎಂ.ಜೋಸೆಫ್‌, ನ್ಯಾ.ಅನಿರುದ್ಧ ಬೋಸ್‌, ನ್ಯಾ.ಹೃಷಿಕೇಸ್‌ ರಾಯ್‌ ಪೀಠ ತನ್ನ ಅಭಿಪ್ರಾಯ ತಿಳಿಸಲಿದೆ. ಗಡಿ ವಿವಾದ ಸುಪ್ರೀಂ ಕೋರ್ಟ್‌ ವ್ಯಾಪ್ತಿಗೆ ಬರಲಿದೆ ಎಂಬುವುದು ಮಹಾರಾಷ್ಟ್ರದ ವಾದವಾದರೆ, ಈ ವಿವಾದ ಸುಪ್ರೀಂ ವ್ಯಾಪ್ತಿಗೆ ಬರಲ್ಲ ಎಂಬುವುದು ಕರ್ನಾಟಕದ ವಾದ. ಈ ಸಂಬಂಧ ಮುಂದೆ ನಡೆಯಲಿರುವ ಅಂತಿಮ ವಿಚಾರಣೆಯಲ್ಲಿ ಉಭಯ ರಾಜ್ಯಗಳು ತಮ್ಮ ಅಭಿಪ್ರಾಯ ಮಂಡಿಸಲಿವೆ.

ಗಡಿ ವಿವಾದ ಆಗಿದೆಯೇ ಮಹಾ ಅಸ್ತ್ರ?: ಮಹಾರಾಷ್ಟ್ರದಲ್ಲಿರುವ ಎಲ್ಲ ರಾಜಕೀಯ ಪಕ್ಷಗಳಿಗೆ ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದವೇ ಪ್ರಮುಖ ಅಸ್ತ್ರ. ಇದೇ ವಿಚಾರ ಮುಂದಿಟ್ಟುಕೊಂಡು ಎನ್‌ಸಿಪಿ, ಶಿವಸೇನೆ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಅಲ್ಲಿ ಅಧಿಕಾರಕ್ಕೇರಿದ ಉದಾಹರಣೆಗಳೂ ಇವೆ. ಅಷ್ಟರ ಮಟ್ಟಿಗೆ ಗಡಿ ವಿವಾದ ಮಹಾರಾಷ್ಟ್ರದ ರಾಜಕೀಯ ಪಕ್ಷಗಳಿಗೆ ಪ್ರಮುಖ ರಾಜಕೀಯ ಅಸ್ತ್ರವಾಗಿ ಹೊರಹೊಮ್ಮಿದೆ.

ಕರ್ನಾಟದಲ್ಲಿರುವ ಗಡಿ ಭಾಗದಲ್ಲಿರುವ ಮರಾಠಿ ಭಾಷಿಕರನ್ನು ಪ್ರಚೋದಿಸುವುದು, ಕರ್ನಾಟಕದಲ್ಲಿರುವ ಮರಾಠಿ ಭಾಷಿಕರಿಗೆ ಅನ್ಯಾಯವಾಗ್ತಿದೆ ಎಂದು ಮಹಾರಾಷ್ಟ್ರ ರಾಜಕಾರಣದಲ್ಲಿ ಬಿಂಬಿಸುವ ಕೆಲಸವನ್ನು ಅಲ್ಲಿನ ಎಲ್ಲ ರಾಜಕೀಯ ಪಕ್ಷಗಳು ಮಾಡುತ್ತಾ ಬಂದಿವೆ. ಆ ಮೂಲಕ ದಶಕಗಳಿಂದ ಗಡಿವಿವಾದ ಹೆಸರಲ್ಲಿ ಮಹಾರಾಷ್ಟ್ರ ರಾಜಕಾರಣಿಗಳು ರಾಜಕೀಯ ಲಾಭ ಪಡೆಯುತ್ತಲೇ ಬಂದಿದ್ದಾರೆ.

ಇದನ್ನೂ ಓದಿ: ಗಡಿ ವಿವಾದ ಮುಗಿದು ಹೋದ ಅಧ್ಯಾಯ: ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ

ಈ ಹಿಂದೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡ್ನವೀಸ್ ಗಡಿವಿವಾದ ನೋಡಿಕೊಳ್ಳಲೆಂದೇ ಪ್ರತ್ಯೇಕ ಸಚಿವರನ್ನು ನೇಮಿಸಿದ್ದರು. ಆಗ ಲೋಕೋಪಯೋಗಿ ಸಚಿವರಾಗಿದ್ದ ಚಂದ್ರಕಾಂತ ಪಾಟೀಲ ಅವರನ್ನು ಗಡಿ ಉಸ್ತುವಾರಿ ಸಚಿವರಾಗಿ ನೇಮಕಗೊಳಿಸಿ ಫಡ್ನವೀಸ್‌ ಆದೇಶ ಹೊರಡಿಸಿದ್ದರು. ಅಲ್ಲದೇ ಇತ್ತೀಚೆಗಷ್ಟೇ ಮಹಾರಾಷ್ಟ್ರದಲ್ಲಿ ಪತನವಾದ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರವೂ ಇಬ್ಬರನ್ನು ಗಡಿ ಸಚಿವರನ್ನಾಗಿ ನೇಮಿಸಿತ್ತು. ಉದ್ಧವ್ ಸಂಪುಟದಲ್ಲಿದ್ದ ಹಾಲಿ ಸಿಎಂ ಏಕನಾಥ್ ಶಿಂಧೆ ಕೂಡ ಆಗ ಗಡಿ ಉಸ್ತುವಾರಿ ಸಚಿವರಾಗಿದ್ದರು.

ಗಡಿ ಹೋರಾಟದಲ್ಲಿ ಭಾಗಿಯಾಗಿ ಜೈಲುವಾಸವನ್ನೂ ಅನುಭವಿಸಿ ಬಳಿಕ ರಾಜಕೀಯ ಪ್ರವೇಶ ಪಡೆದಿದ್ದ ಏಕನಾಥ ಶಿಂಧೆ ಈಗ ಮಹಾರಾಷ್ಟ್ರ ಸಿಎಂ ಆಗಿದ್ದಾರೆ. ಗಡಿವಿವಾದದ ಬಗ್ಗೆಯೂ ಏಕನಾಥ್ ಶಿಂಧೆ ಆಸಕ್ತಿ ಹೊಂದಿದ್ದಾರೆ. ಈ ಕಾರಣಕ್ಕೆ ಕೆಲ ದಿನಗಳ ಹಿಂದೆ ನಡೆದಿದ್ದ ಉನ್ನತ ಮಟ್ಟದ ಸಭೆಯಲ್ಲಿ ಸಿಎಂ ಏಕನಾಥ ಶಿಂಧೆ ಇಬ್ಬರನ್ನು ಮತ್ತೆ ಗಡಿ ಉಸ್ತುವಾರಿ ಸಚಿವರನ್ನಾಗಿ ನೇಮಿಸಿದ್ದಾರೆ. ಸಾಲದೆಂಬಂತೆ ಗಡಿಭಾಗದಲ್ಲಿರುವ ಮರಾಠಿ ಭಾಷಿಕರಿಗೆ ಹಲವು ಯೋಜನೆಗಳನ್ನೂ ಘೋಷಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ: ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ, ಗಡಿಯಲ್ಲಿ ಹೈ ಅಲರ್ಟ್

Last Updated : Dec 1, 2022, 8:33 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.