ETV Bharat / state

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಹಿನ್ನೆಲೆ ಐದನೇ ದಿನವೂ ಸಾಲು ಸಾಲು ಪ್ರತಿಭಟನೆ.. - ಕರ್ನಾಟಕ ಯುವ ಜಾಗೃತಿ ವೇದಿಕೆ

ಇವತ್ತು 11 ಪ್ರತಿಭಟನೆಗಳಿಗೆ ಸಂಘಟನೆಗಳು ಬೆಳಗಾವಿ ಸುವರ್ಣಸೌಧ ಆವರಣದಲ್ಲಿ ಜಮಾವಣೆಗೊಂಡಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಪ್ರತಿಭಟನಾ ಸ್ಥಳದಲ್ಲಿ ಭದ್ರತೆ ಕೈಗೊಂಡಿದ್ದಾರೆ.

ಬೆಳಗಾವಿ
ಬೆಳಗಾವಿ
author img

By

Published : Dec 23, 2022, 8:20 AM IST

Updated : Dec 23, 2022, 9:16 AM IST

ಬೆಳಗಾವಿ: ಚಳಿಗಾಲದ ಅಧಿವೇಶನದ ಐದನೆ ದಿನವಾದ ಇಂದು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯದ ಮೂಲೆ ಮೂಲೆಗಳಿಂದ ಜನರು ಬಂದು ಸುವರ್ಣಸೌಧ ಹತ್ತಿರದ ಕೊಂಡಸಕೊಪ್ಪ, ಬಸ್ತವಾಡ ಬಳಿ ಪ್ರತಿಭಟನೆ ನಡೆಸಲಿದ್ದಾರೆ.

ಇವತ್ತು 11 ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. 2 ಸಂಘಟನೆಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಲವ್ ಜಿಹಾದ್ ವಿರುದ್ಧ ವಿಶೇಷ ಪೊಲೀಸ್ ದಳ ಸ್ಥಾಪಿಸಲು ಆಗ್ರಹಿಸಿ ಹಿಂದೂ ಜನ ಜಾಗೃತಿ ಸಮಿತಿ ಗೋವಾದಿಂದ ಪ್ರತಿಭಟನೆ ನಡೆಸಲಿದೆ.

ಗಂಟು ರೋಗದಿಂದ ಮೃತಪಟ್ಟ ಜಾನುವಾರುಗಳಿಗೆ ಒಂದು ಲಕ್ಷ ಪರಿಹಾರಕ್ಕಾಗಿ ಆಗ್ರಹ. ಸ್ವಾಭಿಮಾನಿ ರೈತ ಸಂಘದಿಂದ ಪ್ರತಿಭಟನೆ. ವಸತಿ ಶಿಕ್ಷಕರ ಸಮಸ್ಯೆಗಳ ಪರಿವಾರಕ್ಕೆ ಒತ್ತಾಯಿಸಿ ಹೋರಾಟ. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ ನಡೆಸಲಿದೆ.

ಯುವ ಜಾಗೃತಿ ವೇದಿಕೆಯಿಂದ ಧರಣಿ: ಅಂಕಲಗಿ, ಅಕ್ಕತಂಗೇರಹಾಳ ಪಟ್ಟಣ ಪಂಚಾಯಿತಿ ವಿಭಜನೆಗೆ ಆಗ್ರಹಿಸಿ ಅಕ್ಕತಂಗೇರಹಾಳ ಗ್ರಾಮಸ್ಥರಿಂದ ಹೋರಾಟ ನಡೆಯಲಿದೆ. ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಶನ್ ನಿಂದ ಪ್ರತಿಭಟನೆ. ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕ ಸಂಘದಿಂದ ಹೋರಾಟ. ಕರ್ನಾಟಕ ಯುವ ಜಾಗೃತಿ ವೇದಿಕೆಯಿಂದ ಧರಣಿ ಸತ್ಯಾಗ್ರಹ ನಡೆಯಲಿದೆ.

ಕಿತ್ತೂರು, ಖಾನಾಪುರ ವಿಧಾನಸಭಾ ಕ್ಷೇತ್ರವನ್ನು ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸೇರಿಸಲು ಆಗ್ರಹಿಸಿ ಹೋರಾಟ. ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ‌ನ್ಯಾ. ಸದಾಶಿವ ಆಯೋಗ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಹೋರಾಟ. ಗುತ್ತಿಗೆ ನರ್ಸ್ ಅಭಿವೃದ್ಧಿ ಸಂಘದಿಂದ ವಿವಿಧ ಈಡೇರಿಕೆಗೆ ಆಗ್ರಹಿಸಿ ಧರಣಿ. ಮಡಿವಾಳ ಜನಾಂಗವನ್ನು ಎಸ್ಟಿಗೆ ಸೇರ್ಪಡೆ ಮಾಡಲು ಆಗ್ರಹಿಸಿ ಧರಣಿ ಕೈಗೊಳ್ಳಲಿದ್ದಾರೆ.

ಪ್ರತಿಭಟನಾ ಸ್ಥಳದಲ್ಲಿ ಪೊಲೀಸ್ ಭದ್ರತೆ: ಒಟ್ಟು ಇವತ್ತು 11 ಪ್ರತಿಭಟನೆಗಳಿಗೆ ಸಂಘಟನೆಗಳು ಸುವರ್ಣಸೌಧ ಆವರಣದಲ್ಲಿ ಜಮಾವಣೆಗೊಂಡಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಪ್ರತಿಭಟನಾ ಸ್ಥಳದಲ್ಲಿ ಭದ್ರತೆಯ ನಿಯೋಜನೆ ಮಾಡಲಾಗಿದೆ.

ಓದಿ: ಬೆಳಗಾವಿಯ ಅಧಿವೇಶನಕ್ಕೆ ಪೊಲೀಸರಿಂದ ಬಿಗಿ ಬಂದೋಬಸ್ತ್​​

Last Updated : Dec 23, 2022, 9:16 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.