ಅಥಣಿ: ಲಾಕ್ಡೌನ್ ಸಡಿಲಿಕೆ ಹಿನ್ನೆಲೆ ಮದ್ಯ ಮಾರಾಟಕ್ಕೆ ಸರ್ಕಾರ ಅನುಮೋದನೆ ನೀಡಿರುವುದರಿಂದ ನಗರದ ಎಂಎಸ್ಐಎಲ್ ಹಾಗೆಯೇ ಇತರ ಮದ್ಯದಂಗಡಿ ಮುಂದೆ ಜನಸಾಗರವೇ ಸೇರಿತ್ತು.
ಪ್ರತಿಯೊಂದು ಮದ್ಯದಂಗಡಿಗಳನ್ನ ಪರಿಶೀಲಿಸಿದ ಅಬಕಾರಿ ಸಿಬ್ಬಂದಿ ಕೊರೊನಾ ವೈರಸ್ ಹರಡದಂತೆ ಕೆಲವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಮದ್ಯ ಮಾರಾಟಕ್ಕೆ ಚಾಲನೆ ನೀಡಿದರು.
ತಾಲೂಕಿನಲ್ಲಿರುವ ಒಟ್ಟು 58 ಮದ್ಯದಂಗಡಿಗಳಲ್ಲಿ 22 ಖಾಸಗಿ ಅಂಗಡಿಗಳು ಇವತ್ತು ಮಾರಾಟ ಪ್ರಾರಂಭಿಸಿದ್ದು, ಅದರಂತೆಯೇ ಎಂಎಸ್ ಐಎಲ್ 10 ಅಂಗಡಿಗಳು ಪುನಾರಂಭಗೊಂಡಿವೆ. ಅಲ್ಲದೇ ಸರ್ಕಾರದ ನಿರ್ದೇಶನಗಳನ್ನು ಪ್ರತಿ ಮಳಿಗೆಗಳ ಮಾಲೀಕರು ಚಾಚು ತಪ್ಪದೇ ಪಾಲನೆ ಮಾಡುತ್ತಿದ್ದಾರೆ.
ಒಟ್ಟಾರೆಯಾಗಿ ತಾಲೂಕಿನ ಪ್ರತಿ ಮದ್ಯದಂಗಡಿಗಳ ಮುಂದೆ ಪಾನಪ್ರಿಯರು ಸರತಿಸಾಲಿನಲ್ಲಿ ನಿಂತಿದ್ದರಿಂದ ಜಾತ್ರೆಯ ಸಡಗರ ಕಂಡುಬಂತು.