ಚಿಕ್ಕೋಡಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಮಳೆ ಪ್ರಮಾಣ ಗಣನೀಯವಾಗಿ ತಗ್ಗಿದ್ದು, ಇಂದು ಮತ್ತೆ ಮಳೆ ಪ್ರಮಾಣ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ. ಆದರೆ, ರಾಜ್ಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ 10 ಸಾವಿರ ಕ್ಯೂಸೆಕ್ನಷ್ಟು ಕಡಿಮೆ ಆಗಿದೆ.
ಕಳೆದ 24 ಗಂಟೆಗಳಲ್ಲಿ ಕೃಷ್ಣಾ ಮತ್ತು ಉಪನದಿನಗಳ ನೀರಿನ ಪ್ರಮಾಣದಲ್ಲಿ ಮೂರು ಅಡಿಯಷ್ಟು ಕಡಿಮೆಯಾಗಿದೆ. ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ಒಳಹರಿವು 1,35,000 ಕ್ಯೂಸೆಕ್ಗಿಂತ ಹೆಚ್ಚಿನ ಒಳ ಹರಿವಿದೆ ಎಂದು ಚಿಕ್ಕೋಡಿ ತಹಶೀಲ್ದಾರ್ ಶುಭಾಸ ಸಂಪಗಾಂವಿ ಈಟಿವಿ ಭಾರತಗೆ ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್‌ನಿಂದ 1,10,000 ಕ್ಯೂಸೆಕ್ ನೀರು ಹಾಗೂ ದೂಧಗಂಗಾ ನದಿಯಿಂದ 26,752 ಕ್ಯೂಸೆಕ್ ನೀರು ಹೀಗೆ ಒಟ್ಟು 1,35,000 ಕ್ಯೂಸೆಕ್ ಅಧಿಕ ನೀರು ರಾಜ್ಯದ ಕೃಷ್ಣಾ ನದಿಗೆ ಹರಿದು ಬರುತ್ತಿದೆ. ಮಹಾರಾಷ್ಟ್ರದ ಕೊಯ್ನಾ - 45 ಮಿ.ಮೀ, ನವಜಾ - 72 ಮಿ.ಮೀ, ಮಹಾಬಲೇಶ್ವರ - 59 ಮಿ.ಮೀ, ವಾರಣಾ - 47 ಮಿ.ಮೀ, ಕಾಳಮ್ಮವಾಡಿ - 37 ಮಿ.ಮೀ, ರಾಧಾನಗರಿ - 40 ಮಿ.ಮೀ, ಪಾಟಗಾಂವ - 82 ಮಿ.ಮೀ ಮಳೆಯಾಗಿದ್ದು ವರದಿಯಾಗಿದೆ. ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಮಹಾರಾಷ್ಟ್ರದ ಭಾಗದಲ್ಲಿ ಮಳೆ ಹೆಚ್ಚಾಗಿದೆ.
ಚಿಕ್ಕೋಡಿ ಉಪವಿಭಾಗದಲ್ಲಿ ಚಿಕ್ಕೋಡಿ -3.4 ಮಿ.ಮೀ, ಅಂಕಲಿ -5.2 ಮಿ.ಮೀ, ಜೋಡಟ್ಟಿ -1.4 ಮಿ.ಮೀ ಹಾಗೂ ಸದಲಗಾ-5.0 ಮಿ.ಮೀ ಮಿ.ಮೀ ಮಳೆಯಾಗಿರುವ ವರದಿಯಾಗಿದೆ. ಸದ್ಯ ಕೊಯ್ನಾ ಜಲಾಶಯ ಶೇ 72, ವಾರಣಾ ಜಲಾಶಯ ಶೇ 86, ರಾಧಾನಗರಿ ಜಲಾಶಯ ಶೇ99, ಕಣೇರ ಜಲಾಶಯ ಶೇ 74, ಧೂಮ ಜಲಾಶಯ ಶೇ66, ಪಾಟಗಾಂವ ಶೇ 92.62, ಧೂದಗಂಗಾ ಶೇ 89.41ರಷ್ಟು, ತುಂಬಿದೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ.