ETV Bharat / state

ವಾಯವ್ಯ ಪದವೀಧರ ‌ಕ್ಷೇತ್ರದ‌‌ ಚುನಾವಣೆ : ತೀವ್ರ ಪೈಪೋಟಿ ನಡುವೆ ಯಾರಿಗೆ ಗೆಲುವಿನ ಮಾಲೆ? - Northwest Graduate Field Election Special Report

ಪ್ರಭಾವಿ ರಾಜಕೀಯ ನಾಯಕ ಮತ್ತು ಸಾಮಾನ್ಯ ಕಾರ್ಯಕರ್ತನ ನಡುವಿನ ಹೋರಾಟ ಎಂದೇ ಬಿಂಬಿತವಾಗಿರುವ ವಾಯವ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯ ಅಬ್ಬರ ಜೋರಾಗಿದೆ. ಹಾಲಿ ಸದಸ್ಯ ಹನುಮಂತ ನಿರಾಣಿ ಎದುರು ಕಾಂಗ್ರೆಸ್ ಕಾರ್ಯಕರ್ತ ಸುನೀಲ ಸಂಕ ಚುನಾವಣಾ ಕಣದಲ್ಲಿದ್ದಾರೆ.

northwest-graduate-field-election-special-report
ವಾಯವ್ಯ ಪದವೀಧರ ‌ಕ್ಷೇತ್ರದ‌‌ ಚುನಾವಣೆ : ವಿಶೇಷ ವರದಿ
author img

By

Published : Jun 12, 2022, 8:20 PM IST

ಬೆಳಗಾವಿ : ಪ್ರಭಾವಿ ರಾಜಕೀಯ ನಾಯಕ ಮತ್ತು ಕಾರ್ಯಕರ್ತನ ನಡುವಿನ ಹೋರಾಟ ಎಂದೇ ಬಿಂಬಿತವಾಗಿರುವ ವಾಯವ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯ ಅಬ್ಬರ ಜೋರಾಗಿದೆ. ಹಾಲಿ ಸದಸ್ಯ ಹನುಮಂತ ನಿರಾಣಿ ಎದುರು ಕಾಂಗ್ರೆಸ್ ಕಾರ್ಯಕರ್ತ ಸುನೀಲ ಸಂಕ ಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ ಅತಿ ಹೆಚ್ಚು ಮತ ಹೊಂದಿರುವ ಬೆಳಗಾವಿ ಜಿಲ್ಲೆಯ ಹೊಂದಾಣಿಕೆ ರಾಜಕಾರಣ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಹಿಮ್ಮೇಳದಲ್ಲಿದೆ ಎನ್ನುವುದು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುವ ಗುಸುಗುಸು.

ಮೂರು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ವಾಯವ್ಯ ಪದವೀಧರ ಕ್ಷೇತ್ರಕ್ಕೆ ನಾಳೆ ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ಹಾಲಿ ಸದಸ್ಯ ಹನಮಂತ ನಿರಾಣಿ ಕಣದಲ್ಲಿದ್ದರೆ, ರಾಜಕೀಯ ಹಿನ್ನಲೆಯಿಲ್ಲದ ಕಾರ್ಯಕರ್ತ ಸುನೀಲ್ ಸಂಕ ಅವರಿಗೆ ಕಾಂಗ್ರೆಸ್ ಮಣೆ ಹಾಕಿದೆ. ಈ ಭಾಗದಲ್ಲಿ ಸಂಘಟನೆ ಇಲ್ಲದ ಕಾರಣಕ್ಕೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಆದರೆ ರಾಷ್ಟ್ರೀಯ ಪಕ್ಷಗಳ ಇಬ್ಬರು ಅಭ್ಯರ್ಥಿಗಳು ಸೇರಿ ಕಣದಲ್ಲಿ ಒಟ್ಟು 11 ಅಭ್ಯರ್ಥಿಗಳಿದ್ದಾರೆ. ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು, ಅಭ್ಯರ್ಥಿಗಳು ಗೆಲುವಿಗಾಗಿ ಕೊನೆಯ ಕಸರತ್ತಿನಲ್ಲಿ ತೊಡಗಿದ್ದಾರೆ.

ಅಭ್ಯರ್ಥಿಗಳು ಮತ್ತು ಅವರ ಹಿನ್ನೆಲೆ : ವಾಯವ್ಯ ಪದವೀಧರ ಕ್ಷೇತ್ರದ ಚುನಾವಣೆ ಘೋಷಣೆಗೂ ಮುನ್ನವೇ ಬಿಜೆಪಿ ಮತ್ತು ಕಾಂಗ್ರೆಸ್ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿದ್ದವು. ಹನುಮಂತ ನಿರಾಣಿ ಎರಡನೇ ಬಾರಿಗೆ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತ ಕಾಂಗ್ರೆಸ್‍ನಲ್ಲಿ ಟಿಕೆಟ್‍ಗೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಮಾಜಿ ಸಚಿವ ವೀರಕುಮಾರ್ ಪಾಟೀಲ, ಮಾಜಿ ಶಾಸಕ ಕಾಕಾಸಾಹೇಬ್ ಪಾಟೀಲ, ಯುವ ಮುಖಂಡ ಕಿರಣ್ ಸಾಧುನವರ ಕಾಂಗ್ರೆಸ್ ಟಿಕೆಟ್‍ಗೆ ಲಾಬಿ ನಡೆಸಿದ್ದರು. ಆದರೆ ಕಾಂಗ್ರೆಸ್ ಮಾತ್ರ ಕಾರ್ಯಕರ್ತ ಸುನೀಲ ಸಂಕಗೆ ಟಿಕೆಟ್ ಘೋಷಣೆ ಮಾಡಿದ್ದು, ಕಾಂಗ್ರೆಸ್ ವಲಯದಲ್ಲೇ ಅಚ್ಚರಿಗೆ ಕಾರಣವಾಗಿದೆ.

ಸಂಕ ಕುಟುಂಬ ಮೂರು ತಲೆಮಾರುಗಳಿಂದ ಕಾಂಗ್ರೆಸ್​ ಜೊತೆಗಿದೆ. ನ್ಯಾಯವಾದಿಯೂ ಆಗಿರುವ ಸುನೀಲ ಸಂಕ ಕಳೆದ ಎರಡು ವರ್ಷಗಳಿಂದ ಪದವೀಧರ ಕ್ಷೇತ್ರದಲ್ಲಿ ಸುತ್ತಾಡಿ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ಆಪ್ತ ವಲಯದಲ್ಲಿ ಇವರು ಗುರುತಿಸಿಕೊಂಡಿದ್ದಾರೆ. ಹೀಗಾಗಿ ಸತೀಶ್​ ಜಾರಕಿಹೊಳಿಗೂ ಈ ಚುನಾವಣೆ ಪ್ರತಿಷ್ಠೆಯಾಗಿದೆ. ಕಾಂಗ್ರೆಸ್ ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ ಅವರಿಗೂ ಸುನೀಲ ಅವರನ್ನು ಗೆಲ್ಲಿಸುವ ಜವಾಬ್ದಾರಿ ನೀಡಲಾಗಿದೆ. ಆದರೆ ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಸುನೀಲ ಸಂಕ ಪ್ರಭಾವಿ ಅಲ್ಲ. ಎರಡೂವರೆ ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿರುವ ಸಚಿವ ಮುರುಗೇಶ ನಿರಾಣಿಗೂ ಈ ಚುನಾವಣೆ ಪ್ರತಿಷ್ಠೆಯಾಗಿದೆ. ಸಹೋದರ ಹನುಮಂತ ನಿರಾಣಿಯನ್ನು ಗೆಲ್ಲಿಸಲು ಪಣತೊಟ್ಟಿರುವ ಅವರು, ಮೂರು ಜಿಲ್ಲೆಯ ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ.

ಚುನಾವಣೆಯಲ್ಲಿನ ಜಾತಿ ಲೆಕ್ಕಾಚಾರ : ಹಾಲಿ ಪರಿಷತ್ ಸದಸ್ಯರೂ ಆಗಿರುವ ಹನುಮಂತ ನಿರಾಣಿ ಬಿಜೆಪಿ ಅಭ್ಯರ್ಥಿ ಆಗಿದ್ದಾರೆ. ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಸೇರಿರುವ ನಿರಾಣಿ ಗೆಲುವಿನ ಓಟ ಮುಂದುವರೆಸುವ ತವಕದಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿಗೆ ಠಕ್ಕರ್ ಕೊಡಲೆಂದೇ ರಣತಂತ್ರ ರೂಪಿಸಿರುವ ಕಾಂಗ್ರೆಸ್ ಕೂಡ ಪಂಚಮಸಾಲಿ ಸಮಾಜದ ಸುನೀಲ ಸಂಕ ಅವರಿಗೆ ಟಿಕೆಟ್ ನೀಡಿದೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ ವ್ಯಾಪ್ತಿ ಹೊಂದಿರುವ ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಲಿಂಗಾಯತ ಪಂಚಮಸಾಲಿ ಮತಗಳು ಅಧಿಕ ಪ್ರಮಾಣದಲ್ಲಿವೆ. ಈ ಕಾರಣಕ್ಕೆ ಉಭಯ ಪಕ್ಷಗಳು ಪಂಚಮಸಾಲಿ ಸಮಾಜಕ್ಕೆ ಮಣೆ ಹಾಕಿವೆ.

ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡಬೇಕೆಂದು ಕಳೆದೊಂದು ವರ್ಷಗಳಿಂದ ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಆದರೆ ಬಿಜೆಪಿ ಸರ್ಕಾರ ಮಾತ್ರ ಪಂಚಮಸಾಲಿ ಸಮಾಜದ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಸಚಿವರಾಗಿರುವ ಮುರುಗೇಶ ನಿರಾಣಿ ಕೂಡ ಮೀಸಲಾತಿ ಹೋರಾಟದಲ್ಲಾಗಲಿ, ಮೀಸಲಾತಿ ಕೊಡಿಸಲು ಸರ್ಕಾರ ಮಟ್ಟದಲ್ಲಿ ಪ್ರಭಾವ ಬೀರುತ್ತಿಲ್ಲ ಎಂಬ ಬೇಸರ ಪಂಚಮಸಾಲಿ ಸಮಾಜಕ್ಕಿದೆ. ಹೀಗಾಗಿ ಮೀಸಲಾತಿ ಹೋರಾಟ ಈ ಚುನಾವಣೆಯಲ್ಲಿ ಬಿಜೆಪಿ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಬಿಜೆಪಿ ಉತ್ಸಾಹ- ಕಾಂಗ್ರೆಸ್ ನಿರುತ್ಸಾಹ! : ರಾಜಕೀಯ ಪ್ರಭಾವ, ಕ್ಷೇತ್ರದ ಮೇಲೆ ಹಿಡಿತ, ಸರ್ಕಾರ ತಮ್ಮದೇ ಇದ್ದರೂ ಬಿಜೆಪಿ ಅಭ್ಯರ್ಥಿ ಹನುಮಂತ ನಿರಾಣಿ ಮಾತ್ರ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಅಲ್ಲದೇ ಚುನಾವಣೆಯಲ್ಲಿ ಬಿಜೆಪಿ ನಾಯಕರು ತೋರುತ್ತಿರುವ ಉತ್ಸಾಹ ಕಾಂಗ್ರೆಸ್ ನಾಯಕರಲ್ಲಿ ಕಾಣುತ್ತಿಲ್ಲ. ಚುನಾವಣೆ ಮುನ್ನವೇ ಬೆಳಗಾವಿಗೆ ಆಗಮಿಸಿದ್ದ ಮಾಜಿ ಸಿಎಂ ಬಿಎಸ್‍ವೈ ಹಾಗೂ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮೂರು ಜಿಲ್ಲೆಯ ಬಿಜೆಪಿ ಶಾಸಕರು, ಮಾಜಿ ಶಾಸಕರ ಜೊತೆಗೆ ಸಭೆ ನಡೆಸಿದ್ದರು. ಮನಸ್ತಾಪ, ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸಿದ್ದರು. ನಂತರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡ ಬೆಳಗಾವಿಗೆ ಆಗಮಿಸಿ ಮೂರು ಜಿಲ್ಲೆಗಳ ನಾಯಕರ ಸಭೆ ನಡೆಸಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಸೂಚನೆ ನೀಡಿದ್ದರು. ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಕೂಡ ಆಗಮಿಸಿದ್ದರು. ಅಲ್ಲದೇ ಮೂರು ದಿನಗಳ ಕಾಲ ಬಿಎಸ್‍ವೈ, ನಳಿನ್‍ಕುಮಾರ್ ಕಟೀಲ್ ವಾಯವ್ಯ ಕ್ಷೇತ್ರದ ಪ್ರಚಾರದಲ್ಲಿ ತೊಡಗಿದ್ದರು.

ಕಾಂಗ್ರೆಸ್ ನಾಯಕರು ಮಾತ್ರ ಈ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಂತಿಲ್ಲ. ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆ ಡಿಕೆಶಿ, ಎಂಬಿಪಿ, ಈಶ್ವರ ಖಂಡ್ರೆ ಆಗಮಿಸಿದ್ದರು. ಬಳಿಕ ಡಿಕೆಶಿ ಪ್ರಚಾರಕ್ಕೆ ಒಮ್ಮೆಯೂ ಆಗಮಿಸಿಲ್ಲ. ಮೂರು ದಿನಗಳ ಹಿಂದೆ ಬೆಳಗಾವಿಗೆ ಆಗಮಿಸಿದ್ದ ಸಿದ್ದರಾಮಯ್ಯ ಬೆಳಗಾವಿಯಲ್ಲಷ್ಟೇ ಪ್ರಚಾರ ಸಭೆ ನಡೆಸಿ ತೆರಳಿದ್ದಾರೆ. ಕಾಂಗ್ರೆಸ್ ನಾಯಕರ ನಿರುತ್ಸಾಹ ಅಭ್ಯರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ನಿರಾಣಿಗೆ ಸುಲಭದ ತುತ್ತಾಗ್ತಾರಾ ಸಂಕ ? : ವಾಯವ್ಯ ಪದವೀಧರ ಕ್ಷೇತ್ರ 3 ಜಿಲ್ಲೆಗಳ ವ್ಯಾಪ್ತಿಯ 33 ವಿಧಾನಸಭೆ ಕ್ಷೇತ್ರಗಳನ್ನು ಹೊಂದಿದೆ. 33 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 22 , ಕಾಂಗ್ರೆಸ್ 10, ಹಾಗೂ ಓರ್ವ ಜೆಡಿಎಸ್ ಶಾಸಕರಿದ್ದಾರೆ. ಬೆಳಗಾವಿಯ 18 ವಿಧಾನಸಭೆ ಕ್ಷೇತ್ರಗಳಲ್ಲಿ 13 ಬಿಜೆಪಿ, 5 ಕಾಂಗ್ರೆಸ್, ವಿಜಯಪುರದ 8 ವಿಧಾನಸಭೆ ಕ್ಷೇತ್ರಗಳಲ್ಲಿ 4 ಬಿಜೆಪಿ, 3 ಕಾಂಗ್ರೆಸ್ 1 ಜೆಡಿಎಸ್ ಹಾಗೂ ಬಾಗಲಕೋಟೆಯ 7 ವಿಧಾನಸಭೆ ಕ್ಷೇತ್ರಗಳ ಪೈಕಿ 5 ಬಿಜೆಪಿ ಹಾಗೂ ಇಬ್ಬರು ಕಾಂಗ್ರೆಸ್ ಶಾಸಕರಿದ್ದಾರೆ. ಪಕ್ಷಗಳ ಬಲಾಬಲ ನೋಡುವುದಾದರೆ ಬಿಜೆಪಿ ಅಭ್ಯರ್ಥಿ ಮೇಲುಗೈ ಕಂಡುಬರುತ್ತಿದೆ.

ಒಟ್ಟು ಮತದಾರರ ಸಂಖ್ಯೆ : ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಒಟ್ಟು 99,598 ಮತದಾರರಿದ್ದಾರೆ. ಇದರಲ್ಲಿ 71,040 ಪುರುಷರು, 28554 ಮಹಿಳಾ ಮತದಾರರಿದ್ದಾರೆ. ನಾಲ್ಕು ಇತರೆ ಮತದಾರರಿದ್ದಾರೆ. ವಾಯವ್ಯ ಕ್ಷೇತ್ರದ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 45,124 ಮತದಾರರಿದ್ದು, ಇದರಲ್ಲಿ 33,991 ಪುರುಷರು, 14,131 ಮಹಿಳೆಯರು, 1 ಇತರೆ ಮತದಾರರಿದ್ದಾರೆ. ಬಾಗಲಕೋಟೆಯಲ್ಲಿ ಒಟ್ಟು 33,651 ಮತದಾರರಿದ್ದು ಇದರಲ್ಲಿ 24,327 ಪುರುಷರು, 9,322 ಮಹಿಳೆಯರು ಹಾಗೂ 2 ಇತರೆ ಮತದಾರರಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ 20,823 ಪದವೀಧರ ಮತದಾರರಿದ್ದು, ಇದರಲ್ಲಿ 15,722 ಪುರುಷರು, 5,100 ಮಹಿಳೆಯರು ಹಾಗೂ ಒಬ್ಬರು ಇತರೆ ಮತದಾರರಿದ್ದಾರೆ. ಮೂರು ಜಿಲ್ಲೆಗಳಲ್ಲಿ ಅತಿಹೆಚ್ಚು ಮತದಾರರು ಇರುವುದು ಬೆಳಗಾವಿಯಲ್ಲಿ. ಈ ಕಾರಣಕ್ಕೆ ಕಾಂಗ್ರೆಸ್ ಬೆಳಗಾವಿ ಮೂಲದ ಸುನೀಲ ಸಂಕಗೆ ಟಿಕೆಟ್ ನೀಡಿದೆ.

ಅಂದು‌ ನಿರಾಣಿಗೆ ದಾಖಲೆ ಗೆಲುವು : ಕಳೆದ ಬಾರಿ ವಾಯವ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಹನುಮಂತ ನಿರಾಣಿ ದಾಖಲೆಯ ಗೆಲುವನ್ನು ತಮ್ಮದಾಗಿಸಿಕೊಂಡಿದ್ದರು. ಚೊಚ್ಚಲ ಚುನಾವಣೆಯಲ್ಲೇ 21 ಸಾವಿರ ಮತಗಳ ಅಂತರದ ಗೆಲುವು ದಾಖಲಿಸಿದ್ದರು. ಪ್ರಭಾವಿ ಕಾಂಗ್ರೆಸ್ ‌ನಾಯಕ ಹಾಗೂ ಹಾಲಿ ಕೆಎಲ್ಇ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ ಅಂದು ಪದವೀಧರ ಕ್ಷೇತ್ರದ ‌ಕಾಂಗ್ರೆಸ್ ಅಭ್ಯರ್ಥಿ ಆಗಿದ್ದರು. ಕಾಂಗ್ರೆಸ್ಸಿನ ಮಹಾಂತೇಶ ಕೌಜಲಗಿ ವಿರುದ್ಧ ಹನುಮಂತ ನಿರಾಣಿ 21 ಸಾವಿರ ಮತಗಳ ದಾಖಲೆಯ ಗೆಲುವು ಸಾಧಿಸಿದ್ದರು. ಮಾಜಿ ಪರಿಷತ್ ಸದಸ್ಯ ಎಂ.ಪಿ‌ ನಾಡಗೌಡ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಓದಿ : ಬಿಸಿಯೂಟದ ಅಕ್ಕಿ ಕದ್ದೊಯ್ಯುತ್ತಿದ್ದ ಆರೋಪ.. ಶಾಲೆಯ ಮುಖ್ಯ ಶಿಕ್ಷಕ ಅಮಾನತು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.