ETV Bharat / state

ಬೆಳಗಾವಿಯ ಅರ್ಧ ಭಾಗದಲ್ಲಿಲ್ಲ ಯುಜಿಡಿ ಲೈನ್: ಒಳಚರಂಡಿ ನಿರ್ವಹಣೆಗೆ ಪಾಲಿಕೆ ಕಸರತ್ತು!

ನಗರದಲ್ಲಿ ಒಳಚರಂಡಿ ನಿರ್ಮಾಣಕ್ಕೆ ಮೊದಲಿನಿಂದಲೂ ಪಾಲಿಕೆ ಹಾಗೂ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಆದ್ಯತೆ ನೀಡಿಲ್ಲ. ಹೀಗಾಗಿ ನಗರದ ಅರ್ಧ ಭಾಗ ಒಳಚರಂಡಿ ವ್ಯವಸ್ಥೆಯಿಂದ ವಂಚಿತವಾಗಿದೆ ಎಂಬ ಆರೋಪವಿದೆ.

no more UGD lines in belgavi
ಬೆಳಗಾವಿಯ ಅರ್ಧಭಾಗದಲ್ಲಿಲ್ಲ ಯುಜಿಡಿ ಲೈನ್: ಒಳಚರಂಡಿ ನಿರ್ವಹಣೆಗೆ ಪಾಲಿಕೆ ಕಸರತ್ತು!
author img

By

Published : Apr 20, 2021, 4:30 PM IST

ಬೆಳಗಾವಿ: ಕೇಂದ್ರ ಸರ್ಕಾರದ ಸ್ಮಾರ್ಟ್‍ ಸಿಟಿ, ಅಮೃತ್‍ ಸಿಟಿಯಂತಹ ಮಹತ್ವಾಕಾಂಕ್ಷೆ ಯೋಜನೆಗಳ ವ್ಯಾಪ್ತಿಗೆ ಕುಂದಾನಗರಿ ಬೆಳಗಾವಿ ಒಳಪಟ್ಟರೂ ಕೂಡ ನಗರದಲ್ಲಿ ಸಂಪೂರ್ಣ ಒಳಚರಂಡಿ ನಿರ್ಮಾಣ ಸಾಧ್ಯವಾಗಿಲ್ಲ. ಸ್ವಚ್ಛ ನಗರವಾಗಿಸಲು ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಹಣ ವ್ಯಯಿಸುತ್ತಿದ್ದರೂ ಸ್ವಚ್ಛತೆ ಕಾಪಾಡುವುದೇ ಬೆಳಗಾವಿ ಮಹಾನಗರ ಪಾಲಿಕೆಗೆ ದೊಡ್ಡ ಸವಾಲಾಗಿದೆ.

ಬೆಳಗಾವಿಯ ಅರ್ಧ ಭಾಗದಲ್ಲಿಲ್ಲ ಯುಜಿಡಿ ಲೈನ್: ಒಳಚರಂಡಿ ನಿರ್ವಹಣೆಗೆ ಪಾಲಿಕೆ ಕಸರತ್ತು!

ಸ್ಮಾರ್ಟ್‍ ಸಿಟಿ ಯೋಜನೆಯಡಿ ನಗರಕ್ಕೆ 1 ಸಾವಿರ ಕೋಟಿ ರೂ. ಹಾಗೂ ಅಮೃತ್ ಸಿಟಿ ಯೋಜನೆಯಡಿ 500 ಕೋಟಿ ರೂ. ಹಣ ನಗರಕ್ಕೆ ಬಂದಿದೆ. ಅಲ್ಲದೇ ಕಳೆದ 10 ವರ್ಷಗಳಿಂದ ಮಹಾನಗರ ಪಾಲಿಕೆಗೆ ನಗರೋತ್ಥಾನ ಯೋಜನೆಯಡಿ ರಾಜ್ಯ ಸರ್ಕಾರದಿಂದ 100 ಕೋಟಿ ರೂ. ಹಣ ಹರಿದು ಬರುತ್ತಿದೆ. ಹೀಗಿದ್ದರೂ ಮಹಾನಗರದ ಅರ್ಧ ಭಾಗ ಪ್ರದೇಶ ಒಳಚರಂಡಿ ವ್ಯವಸ್ಥೆಯಿಲ್ಲದೇ ಬಳಲುತ್ತಿದೆ.

ಸವಾಲಾಗಿದೆ ನಿರ್ವಹಣೆ:

ಸ್ಮಾರ್ಟ್ ಸಿಟಿ, ಅಮೃತ್ ಸಿಟಿ ಹಾಗೂ ನಗರೋತ್ಥಾನ ಯೋಜನೆಯಡಿ ಬಿಡುಗಡೆ ಆಗಿರುವ ಸಾವಿರಾರು ಕೋಟಿ ಹಣವನ್ನು ರಸ್ತೆ ಅಭಿವೃದ್ಧಿಗೆ ವೆಚ್ಚ ಮಾಡಲಾಗಿದೆ. ಆದರೆ ನಗರದಲ್ಲಿ ಒಳಚರಂಡಿ ನಿರ್ಮಾಣಕ್ಕೆ ಮೊದಲಿನಿಂದಲೂ ಪಾಲಿಕೆ ಹಾಗೂ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಆದ್ಯತೆ ನೀಡಿಲ್ಲ. ಹೀಗಾಗಿ ನಗರದ ಅರ್ಧ ಭಾಗ ಒಳಚರಂಡಿ ವ್ಯವಸ್ಥೆಯಿಂದ ವಂಚಿತವಾಗಿದೆ ಎಂಬ ಆರೋಪವಿದೆ.

ಬೆಳಗಾವಿ ತಾಲೂಕಿನ ಹೊನಗಾ ಗ್ರಾಮದಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯಿಂದ ಎಸ್‍ಟಿಪಿ (ಒಳಚರಂಡಿ ಸಂಸ್ಕರಣ) ಘಟಕ ನಿರ್ಮಿಸಲಾಗುತ್ತಿದೆ. ಒಳಚರಂಡಿಯ ನೀರಿನ ಮರುಬಳಕೆಗಾಗಿ ಎಸ್‍ಟಿಪಿ ಘಟಕ ನಿರ್ಮಿಸಲಾಗುತ್ತಿದೆ. ಆದರೆ ನಗರದ ಎಲ್ಲ ಕಡೆಯೂ ಒಳಚರಂಡಿಗಳು ಇಲ್ಲದಿರುವುದರಿಂದ ಒಳಚರಂಡಿಗಳ ಸಂಪರ್ಕ ಸಾಧ್ಯವಾಗುತ್ತಿಲ್ಲ. ಹೀಗಾಗಿ ಒಳಚರಂಡಿಗಳ ನಿರ್ವಹಣೆ ಪಾಲಿಕೆ ಅಧಿಕಾರಿಗಳಿಗೆ ತುಸು ಕಷ್ಟವಾಗುತ್ತಿದೆ. ನಗರದ ಎಲ್ಲಡೆ ಒಳಚರಂಡಿ ನಿರ್ಮಾಣವಾದರೆ ಒಂದರಿಂದ ಮತ್ತೊಂದು ಯುಜಿಡಿ ಲೈನ್‍ಗೆ ಸಂಪರ್ಕ ಹೊಂದಲು ಸಾಧ್ಯವಾಗುತ್ತದೆ. ಯುಜಿಡಿ ಲೈನ್ ನೇರವಾಗಿ ಎಸ್‍ಟಿಪಿ ಘಟಕಕ್ಕೆ ಸಂಪರ್ಕ ಕಲ್ಪಿಸಿದರೆ ಮಾತ್ರ ನೈರ್ಮಲ್ಯೀಕರಣ ಕಾಪಾಡಲು ಇನ್ನಷ್ಟು ಸಹಾಯವಾಗಲಿದೆ.

ಸಮಸ್ಯೆಗೆ ಕಾರಣಗಳೇನು?

ಉತ್ತರ ಕರ್ನಾಟಕ ಭಾಗದಲ್ಲಿ ಬೆಳಗಾವಿ ವೇಗವಾಗಿ ಬೆಳೆಯುತ್ತಿರುವ ನಗರ. ಹೀಗಾಗಿ ಉದ್ಯೋಗ, ಶಿಕ್ಷಣ ಸೇರಿದಂತೆ ಹಲವು ಕಾರಣದಿಂದ ನಗರಕ್ಕೆ ವಲಸೆ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಖಾಸಗಿ ಬಿಲ್ಡರ್​ಗಳು ಹಾಗೂ ಸರ್ಕಾರದ ಭಾಗವಾಗಿರುವ ಬುಡಾದಿಂದ ನಗರದಲ್ಲಿ ಹೆಚ್ಚಿನ ಬಡಾವಣೆಗಳು ನಿರ್ಮಾಣಗೊಳ್ಳುತ್ತಿವೆ. ಇದರ ಜತೆಗೆ ಅನಧಿಕೃತ ಬಡಾವಣೆಗಳ ಸಂಖ್ಯೆಯೂ ಹೆಚ್ಚುತ್ತಿವೆ. ಅನಧಿಕೃತ ಹಾಗೂ ಅಧಿಕೃತ ಬಡಾವಣೆ ನಿರ್ಮಿಸುತ್ತಿರುವ ಬಿಲ್ಡರ್​ಗಳು ಒಳಚರಂಡಿ ನಿರ್ಮಾಣಕ್ಕೆ ಮಹತ್ವ ನೀಡುತ್ತಿಲ್ಲ. ಇನ್ನು ಹಲವು ಅನಧಿಕೃತ ಬಡಾವಣೆಗಳಲ್ಲಿ ಚರಂಡಿ ವ್ಯವಸ್ಥೆಯಿಲ್ಲ. ಇಂತಹ ಪ್ರದೇಶಗಳಲ್ಲಿ ಚರಂಡಿ ನೀರು ರಸ್ತೆಗೆ ಬರುತ್ತಿದ್ದು, ಕೊಳಚೆ ನೀರಿನ ಮಧ್ಯೆಯೇ ಜನರು ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಒಳಚರಂಡಿ ನಿರ್ಮಾಣಕ್ಕೆ ಮುಂದಾದ ಪಾಲಿಕೆ:

ಕೇಂದ್ರ ಸರ್ಕಾರದ ಅಮೃತ್‍ ಸಿಟಿ ಯೋಜನೆಯಡಿ ಬೆಳಗಾವಿ ಮಹಾನಗರ ಪಾಲಿಕೆಗೆ 500 ಕೋಟಿ ರೂ. ಹಣ ಬಿಡುಗಡೆಯಾಗಿದೆ. ಈ ಹಣದಲ್ಲಿ ನಗರದ ಇನ್ನುಳಿದ ಅರ್ಧ ಭಾಗಗಳಲ್ಲಿ ಒಳಚರಂಡಿ ನಿರ್ಮಿಸಲು ಪಾಲಿಕೆ ಯೋಜನೆ ಹಾಕಿಕೊಂಡಿದೆ. ಇನ್ನು ಮುಂದೆ ಅನಧಿಕೃತ ಬಡಾವಣೆಗಳ ನಿರ್ಮಾಣಕ್ಕೆ ಬುಡಾದಿಂದ ಮೂಗುದಾರ ಹಾಕಲಾಗುತ್ತದೆ. ಬುಡಾದಿಂದ ನಿರ್ಮಾಣವಾಗುವ ಹಾಗೂ ಖಾಸಗಿ ವ್ಯಕ್ತಿಗಳಿಂದ ನಿರ್ಮಾಣವಾಗುವ ಹೊಸದಾದ ಬಡಾವಣೆಗಳಿಗೆ ಕಡ್ಡಾಯವಾಗಿ ಒಳಚರಂಡಿ ನಿರ್ಮಿಸಬೇಕು ಎಂಬ ನಿರ್ದೇಶನವನ್ನು ನಗರಾಭಿವೃದ್ಧಿ ಇಲಾಖೆ ನೀಡಿದೆ.

ಇದನ್ನೂ ಓದಿ: ಬೆಳಗಾವಿ: ಪಾದಚಾರಿ ಫುಟ್‍ಪಾತ್‍ಗಳು ಪಾರ್ಕಿಂಗ್​​ ಪ್ಲೇಸ್​ಗಳಾಗುತ್ತಿವೆ

ನಗರದ ಎಲ್ಲ ಕಡೆಯೂ ಯುಜಿಡಿ ಲೈನ್ ನಿರ್ಮಾಣವಾದರೆ ಮಾತ್ರ ನಿರ್ವಹಣೆಯೂ ಪಾಲಿಕೆಗೆ ಸುಲಭವಾಗಲಿದೆ. ಇದರಿಂದ ಒಳಚರಂಡಿ ನೀರಿನ ಮರುಬಳಕೆ ಜತೆಗೆ ನಿರ್ವಹಣೆಯೂ ಸುಲಭವಾಗಲಿದೆ. ಇದರಿಂದ ನಗರದಲ್ಲಿ ಸ್ವಚ್ಛತೆ ಸಾಧ್ಯವಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.