ETV Bharat / state

ಬೆಳಗಾವಿ: ಪತಿಯಿಂದ ನಿತ್ಯವೂ ಕಿರುಕುಳ..ಪುತ್ರನೊಂದಿಗೆ ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ - ಬೆಳಗಾವಿಯ ಯರಗಟ್ಟಿ ತಾಲೂಕಿನ ಬೊಳಕಡಬಿ ಗ್ರಾಮದಲ್ಲಿ ಮಹಿಳೆ ಆತ್ಮಹತ್ಯೆ

ಬುದ್ಧಿಮಾಂದ್ಯ ಮಕ್ಕಳನ್ನು ಹೆತ್ತಿದ್ದಿಯಾ, ನೀನು ಮನೆ ಬಿಟ್ಟು ‌ಹೋಗು. ನಾನು ಬೇರೊಂದು ಮದುವೆ ಆಗುತ್ತೇನೆಂದು ನಿತ್ಯ ಬೆಳ್ಳಪ್ಪ ಕಿರುಕುಳ ನೀಡುತ್ತಿದ್ದನು. ಪತಿಯ ಕಿರುಕುಳಕ್ಕೆ ಬೇಸತ್ತು ಗ್ರಾಮದ ಹೊರ ವಲಯದ ಕೆರೆಯಲ್ಲಿ ಪುತ್ರನೊಂದಿಗೆ ಹಾರಿ ಸೇವಂತಿ ಆತ್ಮಹತ್ಯೆ ‌ಮಾಡಿಕೊಂಡಿದ್ದಾರೆ..

mother-committed-suicide-in-belagavi
ಪುತ್ರನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಮಹಿಳೆ
author img

By

Published : Jan 28, 2022, 5:38 PM IST

Updated : Jan 28, 2022, 6:33 PM IST

ಬೆಳಗಾವಿ: ಬುದ್ಧಿಮಾಂದ್ಯ ಮಕ್ಕಳು ಹುಟ್ಟಿದ್ದಕ್ಕೆ ನಿತ್ಯವೂ ಪತಿ ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತು 12 ವರ್ಷದ ಪುತ್ರನೊಂದಿಗೆ ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಯರಗಟ್ಟಿ ತಾಲೂಕಿನ ಬೊಳಕಡಬಿ ಗ್ರಾಮದಲ್ಲಿ ನಡೆದಿದೆ.

ಸೇವಂತಿ ಪ್ಯಾಟಿ(32) ಹಾಗೂ ಮಹಾಂತೇಶ್ ಪ್ಯಾಟಿ(12) ಎಂಬುವರು ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು. ಬುದ್ಧಿಮಾಂದ್ಯ ಮಕ್ಕಳು ಹುಟ್ಟಿದ್ದಕ್ಕೆ ಪತಿ ಬೆಳ್ಳಪ್ಪ ಎಂಬಾತ ತನ್ನ ಪತ್ನಿಗೆ ನಿತ್ಯವೂ ಕಿರುಕುಳ ಕೊಡುತ್ತಿದ್ದನಂತೆ.

ನಿನ್ನೆ ಸಂಜೆಯೂ ಪತ್ನಿ-ಪುತ್ರನ ಮೇಲೆ ಬೆಳ್ಳಪ್ಪ ಹಲ್ಲೆ ಮಾಡಿದ್ದನು. ಗಂಡನ ಕಿರುಕುಳಕ್ಕೆ ಸೇವಂತಿ ಮತ್ತೋರ್ವ ಮಗನನ್ನು ತವರು ಮನೆಯ ತನ್ನ ಪೋಷಕರ ಬಳಿ ಬಿಟ್ಟಿದ್ದರು.

ಪುತ್ರನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಮಹಿಳೆ

ಬುದ್ಧಿಮಾಂದ್ಯ ಮಕ್ಕಳನ್ನು ಹೆತ್ತಿದ್ದಿಯಾ, ನೀನು ಮನೆ ಬಿಟ್ಟು ‌ಹೋಗು. ನಾನು ಬೇರೊಂದು ಮದುವೆ ಆಗುತ್ತೇನೆಂದು ನಿತ್ಯ ಬೆಳ್ಳಪ್ಪ ಕಿರುಕುಳ ನೀಡುತ್ತಿದ್ದನು. ಪತಿಯ ಕಿರುಕುಳಕ್ಕೆ ಬೇಸತ್ತು ಗ್ರಾಮದ ಹೊರ ವಲಯದ ಕೆರೆಯಲ್ಲಿ ಪುತ್ರನೊಂದಿಗೆ ಹಾರಿ ಸೇವಂತಿ ಆತ್ಮಹತ್ಯೆ ‌ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಇಂದು ಬೆಳಗ್ಗೆ ಬಹಿರಂಗಗೊಂಡಿದೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಭೇಟಿ ನೀಡಿ ಎರಡೂ ಶವ ಹೊರ ತೆಗೆದಿದ್ದಾರೆ. ನನ್ನ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿಲ್ಲ, ಪತಿಯೇ ಕೊಲೆ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ಓದಿ: ವೈದ್ಯನ ಪ್ರಮಾದದಿಂದ ಕೊಳೆಯುತ್ತಿರುವ ಯುವಕನ ದೇಹ.. ಡಾಕ್ಟರ್​ ವಿರುದ್ಧ ಕೇಸ್​ ದಾಖಲು..

Last Updated : Jan 28, 2022, 6:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.