ಕೃಪೆದೋರೋ ಮಳೆರಾಯ! ವರುಣನ ಕರುಣೆಗೆ ಶಾಸಕ ಆನಂದ್ ಪೂಜೆ,ಹವನ - undefined
ರಾಜ್ಯದೆಲ್ಲೆಡೆ ಇನ್ನೂ ವರುಣ ಕೃಪೆದೋರಿಲ್ಲ.ಎಲ್ಲೆಲ್ಲೂ ಬಿಸಿಲಿನ ಝಳದಿಂದ ಜನರು ತತ್ತರಿಸಿದ್ದು,ಮಳೆರಾಯನ ಆಗಮನಕ್ಕಾಗಿ ಆಗಸದತ್ತ ಆಸೆಕಣ್ಣುಗಳಿಂದ ನೋಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಮಳೆಗಾಗಿ ಸವದತ್ತಿ ಕ್ಷೇತ್ರದ ಶಾಸಕ ಆನಂದ್ ವಿಶೇಷ ಪೂಜೆ ಸಲ್ಲಿಸಿದರು.

Belgaum
ಬೆಳಗಾವಿ: ಸವದತ್ತಿ ಕ್ಷೇತ್ರದ ಶಾಸಕ ಆನಂದ್, ಮಳೆರಾಯನ ಆಗಮನಕ್ಕಾಗಿ ಪ್ರಾರ್ಥಿಸಿ ವಿಶೇಷ ಪೂಜೆ,ಹೋಮ ಮಾಡಿಸುವ ಮೂಲಕ ಗಮನ ಸಳೆದರು.
ಶಾಸಕ ಆನಂದ್ ಅವರಿಂದ ಮಳೆಗಾಗಿ ವಿಶೇಷ ಪೂಜೆ, ಹವನ
ಬೆಡಸೂರು ಗ್ರಾಮದ ಶಿವ ಚಿದಂಬರೆಶ್ವರ ದೇವಸ್ಥಾನದಲ್ಲಿ ಶಾಸಕ ಮಾಮನಿ ಕುಟುಂಬಸ್ಥರ ಜತೆಗೆ ಹೋಮ ಮಾಡಿಸಿದರು. ಜೂನ್ ಮೊದಲ ವಾರ ಆರಂಭವಾದರೂ ಮುಂಗಾರು ಪ್ರವೇಶವಾಗಿಲ್ಲ. ಬೇಗ ಮಳೆ ಆರಂಭವಾಗಿ ರೈತರ ಜೀವನ ಸಂತೃಪ್ತವಾಗಿರಲಿ ಎಂಬ ಕಾರಣಕ್ಕೆ ಹೋಮ ಆಯೋಜಿಸಲಾಗಿತ್ತು ಎಂದು ಶಾಸಕರ ಆಪ್ತರು ತಿಳಿಸಿದ್ದಾರೆ.
sample description