ETV Bharat / state

ಕೈಕೊಟ್ಟ ಮುಂಗಾರು ಬೆಳೆ ಹಾನಿ: ರೈತರ ನೆರವಿಗೆ ಧಾವಿಸಿದ ಸಚಿವ ಸತೀಶ ಜಾರಕಿಹೊಳಿ.. ಮೋಡ ಬಿತ್ತನೆಗೆ ಸಿದ್ಧತೆ - minister satish jarkihol cloud seeding

ಬೆಳಗಾವಿ ಜಿಲ್ಲೆಯ 15 ತಾಲೂಕುಗಳ ಪೈಕಿ 13 ತಾಲೂಕು ಬರಪೀಡಿತವೆಂದು ಘೋಷಿಸಿದ್ದು, ಬೆಳಗಾವಿ, ಖಾನಾಪುರ ತಾಲೂಕಗಳನ್ನೂ ಬರಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ರೈತರು ಆಗ್ರಹಿಸಿದ್ದಾರೆ. ಇದರ ನಡುವೆ ಸಚಿವ ಸತೀಶ ಜಾರಕಿಹೊಳಿ ಅವರ ಒಡೆತನದ ಬೆಳಗಾಂ ಶುಗರ್ಸ್ ಕಂಪನಿಯೂ ಮೋಡ ಬಿತ್ತನೆ ಟೆಂಡರ್ ಪಡೆದುಕೊಂಡಿದೆ.

minister-satish-jarkiholi-is-prepared-for-cloud-seeding in belagavi
ಕೈಕೊಟ್ಟ ಮುಂಗಾರು ಬೆಳೆ ಹಾನಿ: ರೈತರ ನೆರವಿಗೆ ಧಾವಿಸಿದ ಸಚಿವ ಸತೀಶ ಜಾರಕಿಹೊಳಿ
author img

By ETV Bharat Karnataka Team

Published : Sep 22, 2023, 9:05 PM IST

ಬೆಳಗಾವಿ: ಮುಂಗಾರು ಮಳೆ ತೀವ್ರ ಕೊರತೆಯಿಂದ ಬೆಳಗಾವಿ‌ ಜಿಲ್ಲೆಯ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಷ್ಟಪಟ್ಟು ಬಿತ್ತಿದ್ದ ಬೆಳೆಗಳು ಈಗ ಹಾನಿಗೆ ಒಳಗಾಗಿದ್ದು ರೈತರಲ್ಲಿ ಆತಂಕ ಶುರುವಾಗಿದೆ. ಈ ವೇಳೆ ರೈತರ ನೆರವಿಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ‌ ಜಾರಕಿಹೊಳಿ ಧಾವಿಸಿದ್ದು, ತಮ್ಮದೇ ಒಡೆತನದ ಬೆಳಗಾಂ ಶುಗರ್ಸ್​ದಿಂದ ಮೋಡ ಬಿತ್ತನೆಗೆ ಸಿದ್ಧತೆ ಆರಂಭಿಸಿದ್ದಾರೆ. ಈ ಕಾರ್ಯಕ್ಕೆ ರಾಜ್ಯ ಸರ್ಕಾರ ಕೂಡ ಗ್ರೀನ್ ಸಿಗ್ನಲ್ ನೀಡಿದೆ.

ಒಂದು ತಿಂಗಳು ವಿಳಂಬವಾಗಿ ಆರಂಭವಾದ ಮುಂಗಾರು ಮಳೆ ಬಳಿಕ ಮತ್ತೆ ಸಂಪೂರ್ಣವಾಗಿ ಕೈ ಕೊಟ್ಟಿದೆ. ಬಿತ್ತಿರುವ ಬೆಳೆಗಳನ್ನು ಉಳಿಸಿಕೊಳ್ಳಲು ಆಗದೇ ರೈತರು ಕೈಕಟ್ಟಿ ಕುಳಿತಿದ್ದಾರೆ. ಜಿಲ್ಲೆಯ 15 ತಾಲೂಕುಗಳ ಪೈಕಿ 13 ತಾಲೂಕು ಬರ ಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ. ಇನ್ನು ಬೆಳಗಾವಿ ಹಾಗೂ ಖಾನಾಪುರ ತಾಲೂಕು ಬರಪೀಡಿತ ಘೋಷಣೆ ಮಾಡಲು ರೈತರ ಆಗ್ರಹಿಸಿದ್ದಾರೆ. ಸಚಿವ ಸತೀಶ ಜಾರಕಿಹೊಳಿ ಅವರ ಒಡೆತನದ ಬೆಳಗಾಂ ಶುಗರ್ಸ್ ಕಂಪನಿಯೂ ಮೋಡ ಬಿತ್ತನೆ ಜಿಲ್ಲೆಯಲ್ಲಿ ಟೆಂಡರ್ ಪಡೆದುಕೊಂಡಿದೆ.

ಬೆಳಗಾವಿ ಜಿಲ್ಲೆ ಸೇರಿ ಉತ್ತರ ಕರ್ನಾಟಕ ಭಾಗದಲ್ಲಿ ಕೃತಕ ಮಳೆ ಸುರಿಯುವಂತೆ ಮಾಡಲು ಬೆಳಗಾಂ ಶುಗರ್ಸ್ ಹಾಗೂ ಕ್ಯಾತಿ ಕ್ಲೈಮೆಟ್ ಮೊಡಿಫಿಕೇಶನ್ ಕನ್ಸಲ್ಟನ್ಸಿ ಕಂಪನಿಯಿಂದ ಮೋಡ ಬಿತ್ತನೆ ನಡೆಯಲಿದ್ದು, ಈ ಎರಡೂ ಕಂಪನಿಗಳಿಗೆ ರಾಜ್ಯ ಸರ್ಕಾರದಿಂದ ಅನುಮತಿ ಕೂಡ ದೊರೆತಿದೆ. ಮೋಡ ಬಿತ್ತನೆಗೆ ಅಂತಿಮ ಹಂತದ ಸಿದ್ದತೆಯನ್ನು ನಡೆಸಲಾಗಿದೆ.

ಈ ಕುರಿತು ಇತ್ತೀಚಿಗೆ ಮಾತನಾಡಿದ್ದ ಸಚಿವ ಸತೀಶ ಜಾರಕಿಹೊಳಿ, ನಾವು ಖಾಸಗಿಯಾಗಿ ಕೃತಕ ಮಳೆ ಸುರಿಸಲು ಅನುಮತಿ ಪಡೆದಿದ್ದೇವೆ. ಮುಂದಿನ ಒಂದು ವಾರದಲ್ಲಿ ಮೋಡ ಬಿತ್ತನೆ ಕಾರ್ಯ ನಡೆಯಲಿದೆ. ದೆಹಲಿಯಿಂದ ಇನ್ನೊಂದು ಅನುಮತಿ ಪಡೆಯುವ ಬಾಕಿ ಇದೆ. ಮೋಡ ಇದ್ದ ಕಡೆಯಲ್ಲಿ ಬಿತ್ತನೆ ಕಾರ್ಯ ನಡೆಯಲಿದೆ. ನಮ್ಮ ಕಂಪನಿಯಿಂದ ಖರ್ಚು ವೆಚ್ಚ ಭರಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ಸಂಬಂಧ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾತನಾಡಿ, ಹಾವೇರಿ ಜಿಲ್ಲೆಯಲ್ಲಿ ಈಗಾಗಲೇ ಖಾಸಗಿ ಸಂಸ್ಥೆಗೆ ಮೋಡ ಬಿತ್ತನೆಗೆ ಅನುಮತಿ ನೀಡಿದಂತೆ ನಮ್ಮಲ್ಲಿಯೂ ಅನುಮತಿ ನೀಡಲಾಗಿದೆ. ಯಾವಾಗ ಈ ಕಾರ್ಯ ಆರಂಭವಾಗುತ್ತದೆಂದು ಮಾಹಿತಿ ತಿಳಿಸುವಂತೆ ಆ ಸಂಸ್ಥೆಯವರಿಗೆ ಸೂಚಿಸಿದ್ದೇವೆ ಎಂದರು.

ಬೆಳಗಾವಿಯಲ್ಲಿ ಮಳೆಯ ಕೊರತೆಯಿಂದ ಭತ್ತ, ಕಬ್ಬು,ಆಲೂಗಡ್ಡೆ, ಸೋಯಾಬಿನ್ ಸೇರಿ ಇನ್ನಿತರ ಬೆಳೆಗಳು ಹಾನಿಯಾಗುವ ಸ್ಥಿತಿಯಿದೆ. ವಿದ್ಯುತ್ ಅಭಾವ ಹಿನ್ನೆಲೆಯಲ್ಲಿ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಾಡಿಕೆ ಪ್ರಕಾರ ಬೆಳಗಾವಿ ಜಿಲ್ಲೆಯಲ್ಲಿ 514 ಮಿಮೀ ಮಳೆಯಾಗಬೇಕಿತ್ತು. ಆದರೆ ಜಿಲ್ಲೆಯಲ್ಲಿ ಆಗಿದ್ದು 456 ಮಿಮೀ ಮಾತ್ರ. ಶೇ 11ರಷ್ಟು ಮಳೆಯ ಕೊರತೆಯಿದ್ದು, ಜಿಲ್ಲೆಯಲ್ಲಿ 6.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣವಾಗಿದೆ. ಬಿತ್ತಿರುವ ಬೆಳೆಗಳಿಗೆ ಜೀವಸೆಲೆ ಇಲ್ಲದೇ ಒಣಗುವ ಭೀತಿ ಜಿಲ್ಲೆಯ ರೈತರನ್ನು ಆತಂಕಕ್ಕೆ ದೂಡಿದೆ.

ರೈತ ಮುಖಂಡ ಪ್ರಕಾಶ ನಾಯಿಕ ಮಾತನಾಡಿ, ಸತೀಶ ಜಾರಕಿಹೊಳಿ ಅವರ ನಿರ್ಧಾರವನ್ನು ಸಮಸ್ತ ರೈತ ಬಾಂಧವರು ಅಭಿನಂದಿಸುತ್ತೇವೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಸರ್ಕಾರದಿಂದಲೇ ಮೋಡ ಬಿತ್ತನೆ ಮಾಡಿದರೆ ಇನ್ನು ಒಳ್ಳೆಯದು. ಕನಿಷ್ಠ ಪಕ್ಷ ಜಾನುವಾರುಗಳಿಗೆ ಮೇವು, ಕುಡಿಯುವ ನೀರಾದರೂ ಸಿಗುವಂತಾಗಲಿ ಎಂದರು.

ಇದನ್ನೂಓದಿ: ಬರ ಪರಿಸ್ಥಿತಿ: ನರೇಗಾ ಮಾನವ ದಿನಗಳು 150ಕ್ಕೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸಚಿವ ಪ್ರಿಯಾಂಕ್‌ ಖರ್ಗೆ ಪತ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.